ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ
ಮಂಡ್ಯ

ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ

August 15, 2021

ಕಿಕ್ಕೇರಿ, ಆ.14-ಬಹಳ ದಿನಗಳಿಂದ ಕೆ.ಆರ್.ಪೇಟೆ ತಾಲೂ ಕಿನ ಕಿಕ್ಕೇರಿ ಹೊಬಳಿಯ ರೈತರನ್ನು ಆತಂಕಕ್ಕೀಡು ಮಾಡಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ವಾರದಿಂದಲೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಮೇಕೆ ಮರಿ ಬಿಟ್ಟು ಹೋಬಳಿಯ ಸುತ್ತಮುತ್ತ ಬೋನು ಇರಿಸುತ್ತಿದ್ದರು. ಶನಿವಾರ ಮುಂಜಾನೆ ಹೋಬಳಿಯ ದಬ್ಬೇಘಟ್ಟ ಗ್ರಾಮದ ನರೇಂದ್ರಪ್ರಸಾದ್ ಅವರ ಫಾರಂಹೌಸ್‍ನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಜಮೀನಿನ ಮಾಲೀಕರು ಅರಣ್ಯ ಇಲಾಖೆ ಯವರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಉಪವಲಯಅರಣ್ಯ ಇಲಾಖಾಧಿಕಾರಿ ರಮೇಶ್, ಅರಣ್ಯರಕ್ಷಕ ಶಿವಕುಮಾರ್, ಸಿಬ್ಬಂದಿ ಯೊಂದಿಗೆ ಆಗಮಿಸಿ ಚಿರತೆಯನ್ನು ಸುರಕ್ಷಿತವಾಗಿ ತಾಲೂಕು ವಲಯ ಅರಣ್ಯ ಇಲಾಖೆಗೆ ಸ್ಥಳಾಂತರಿಸಿದರು.

ಬಂಧಿಯಾಗಿರುವ ಚಿರತೆ ಸುಮಾರು 2 ವರ್ಷದ ಗಂಡು ಚಿರತೆಯಾಗಿದ್ದು, ಮೇಲಧಿಕಾರಿ ಗಳಿಗೆ ತಿಳಿಸಿ ಮಲೆಮಹದೇಶ್ವರ ಬೆಟ್ಟದಲ್ಲಿರುವ ವನ್ಯಜೀವಿಗಳ ಸಂರ ಕ್ಷಣಾ ಅಭಯಾರಣ್ಯಕ್ಕೆ ಬಿಡಲಾ ಗುವುದು ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಗಂಗಾಧರ್ ತಿಳಿಸಿದರು. ಚಿರತೆ ಸೆರೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

Translate »