ನಗರಪಾಲಿಕೆ ಆಯುಕ್ತರಿಂದ 54ನೇ  ವಾರ್ಡ್ ಕುಂದುಕೊರತೆ ಪರಿಶೀಲನೆ
ಮೈಸೂರು

ನಗರಪಾಲಿಕೆ ಆಯುಕ್ತರಿಂದ 54ನೇ ವಾರ್ಡ್ ಕುಂದುಕೊರತೆ ಪರಿಶೀಲನೆ

August 20, 2021

ಮೈಸೂರು, ಆ.19(ಆರ್‍ಕೆಬಿ)- ಮೈಸೂರು ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಗುರುವಾರ 54ನೇ ವಾರ್ಡ್ ವ್ಯಾಪ್ತಿಯ ಬಸವೇಶ್ವರ ರಸ್ತೆ, ಕಂಸಾಳೆ ಮಹದೇವಯ್ಯ ವೃತ್ತ ಇನ್ನಿತರೆ ಪ್ರದೇಶಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿದರು.

ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಮನವಿ ಮೇರೆಗೆ ವಾರ್ಡ್‍ಗೆ ಭೇಟಿ ನೀಡಿದ ಅವರು, ಬಸವೇಶ್ವರ ರಸ್ತೆಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗದ ಕಾಮಗಾರಿ ವೀಕ್ಷಿಸಿದರು.

ನಂತರ ಕಂಸಾಳೆ ಮಹದೇವಯ್ಯ ವೃತ್ತದ ಬಳಿ ಸೆಂಟ್ ಮೇರಿಸ್ ಶಾಲೆಯ ಹಿಂಭಾಗದ ರಸ್ತೆಯಲ್ಲಿ ಕಸ ಸುರಿಯುತ್ತಿರುವುದು ಹಾಗೂ ಸಾರ್ವಜನಿ ಕರು ಮೂತ್ರ ವಿಸರ್ಜಿಸಿ ಶಾಲೆಯ ಮಕ್ಕಳಿಗೆ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಆಯುಕ್ತರ ಗಮನ ಸೆಳೆದರು.

4ನೇ ಮುಖ್ಯ ರಸ್ತೆಯ ದೊಡ್ಡ ಮೋರಿ ಬಳಿ ರೂ. 4 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಳೆ ಮತ್ತು ಯುಜಿಡಿ ನೀರು ಹರಿಯುತ್ತಿರುವ ಬಗ್ಗೆ ಪಾಲಿಕೆ ಸದಸ್ಯರು ತೋರಿಸಿದಾಗ ಕೂಡಲೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಈ ವೇಳೆ ವಲಯ ಆಯುಕ್ತೆ ಇಂದ್ರಮ್ಮ, ಅಭಿವೃದ್ಧಿ ಅಧಿಕಾರಿ ಸುಶ್ರುತ್, ಕಿರಿಯ ಇಂಜಿನಿಯರ್ ಕಿರಣ್, ಯುಜಿಡಿ ವಿಭಾಗದ ಧನುಷ್, ಕೆಂಪೇಗೌಡ, ಮುಖಂಡರಾದ ಸಂದೀಪ್, ಸೋಮೇಶ್, ಮಹೇಶ್, ಅದ್ವೈತ್ ಇನ್ನಿತರರು ಉಪಸ್ಥಿತರಿದ್ದರು.

Translate »