ಒತ್ತಡ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ
ಮೈಸೂರು

ಒತ್ತಡ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ

November 26, 2021

ಮೈಸೂರು, ನ.25(ಆರ್‍ಕೆಬಿ)- ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಕೌಶಲಗಳನ್ನು ರೂಢಿಸಿ ಕೊಂಡರೆ ಮಾತ್ರ ಅರ್ಹ ಹುದ್ದೆಗಳನ್ನು ಗಳಿಸಿಕೊಳ್ಳಲು ಸಾಧ್ಯ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್ ತಿಳಿಸಿದರು.

ಮೈಸೂರು ವಿಶ್ವ ವಿದ್ಯಾನಿಲಯ, ಹಿಂದು ಳಿದ ವರ್ಗಗಳ ಘಟಕ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಗುರುವಾರ ಆಯೋ ಜಿಸಿದ್ದ `ಸ್ಥಿತಿ ಸ್ಥಾಪಕತ್ವ, ಒತ್ತಡ ನಿರ್ವಹಣೆ ಹಾಗೂ ಧ್ಯಾನದ ಮೂಲಕ ಯುವ ಸಬಲೀ ಕರಣ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿ ಗಳು ಪದವಿ ಪಡೆದರಷ್ಟೇ ಸಾಲದು. ಜೀವನ ರೂಪಿಸಿಕೊಳ್ಳಲು ಅಗತ್ಯವಾದ ಕೌಶಲ ಹಾಗೂ ಒತ್ತಡ ನಿರ್ವಹಣೆಯನ್ನು ಸಿದ್ದಿಸಿ ಕೊಳ್ಳಬೇಕು. ಭಯ ಪಡುವುದು ಸೋಲಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಸಮರ್ಪಕ ರೀತಿಯಲ್ಲಿ ಒತ್ತಡ ನಿರ್ವಹಿಸಿದರೆ, ಅದರಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಕೋವಿಡ್-19ನಿಂದ ಉಂಟಾದ ಒತ್ತಡ ದಿಂದ ಅನೇಕ ಯುವಕರು ಆತ್ಮಹತ್ಯೆ ಮಾಡಿ ಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಕುಲಪತಿ, ಧನಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಂಡರೆ ಸೋಲು, ಸವಾಲು, ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ಗುರಿ ಮುಟ್ಟಲು ಸಾಧ್ಯ. ಧ್ಯಾನದ ಮೂಲಕ ಒತ್ತಡ ನಿರ್ವಹಣೆಯ ಜೊತೆಗೆ ಬುದ್ಧಿಶಕ್ತಿಯನ್ನು ಪಳಗಿಸಿಕೊಳ್ಳಬಹುದು ಎಂದು ತಿಳಿಸಿದರು.

ಶಿಕ್ಷಣದ ಜೊತೆಗೆ ಕೌಶಲ ಹಾಗೂ ಒತ್ತಡ ರಹಿತ ಜೀವನ ನಡೆಸುವುದನ್ನು ವಿದ್ಯಾರ್ಥಿ ಗಳಿಗೆ ಕಲಿಸಬೇಕಿದೆ. ಹಾಗಾದರೆ ಮಾತ್ರ ಅವರ ಜೀವನ ಪರಿಪೂರ್ಣವಾಗುತ್ತದೆ. ಮಾನಸಗಂಗೋತ್ರಿಯಲ್ಲಿ ಸ್ಥಾಪಿಸಿರುವ ಯೂನಿವರ್ಸಿಟಿ ಕ್ಯಾರಿಯರ್ ಹನ್‍ನಲ್ಲಿ ಇಂತಹ ಹೆಚ್ಚು ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದರು.

ಪದವಿ ಪಡೆದ ಬಳಿಕ ಉದ್ಯೋಗ ಹುಡು ಕುವ ವಿದ್ಯಾರ್ಥಿಗಳು ತಮ್ಮೂರಿನಲ್ಲೇ ಕೆಲಸ ಬೇಕು ಎಂಬ ಹಠಕ್ಕೆ ಬಿದ್ದು, ತಮ್ಮ ಜೀವನ, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪದವಿ ಹಂತದಿಂದಲೇ ಕೌಶಲ್ಯಾಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿದರೆ ವಿದ್ಯಾರ್ಥಿ ಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ಕಾರ್ಯಾಗಾರದಲ್ಲಿ ಪಿರಮಿಡ್ ಸ್ಪಿರಿ ಚುಯಲ್ ಸೊಸೈಟೀಸ್ ಮೂವ್‍ಮೆಂಟ್ ಗ್ಲೋಬಲ್(ಪಿಎಸ್‍ಎಸ್‍ಎಂ ಗ್ಲೋಬಲ್)ನ ಸಂಸ್ಥಾಪಕಿ ಪರಿಪತ್ರಿ, `ಸ್ಥಿತಿ ಸ್ಥಾಪಕತ್ವ ನಿರ್ಮಾಣ, ಒತ್ತಡ ನಿರ್ವಹಣೆ ಮತ್ತು ಧ್ಯಾನದ ಮೂಲಕ ಯುವಕರನ್ನು ಸಬಲೀ ಕರಣಗೊಳಿಸುವುದು’ ವಿಚಾರ ಕುರಿತು ಮಾತನಾಡಿದರು. ಧ್ಯಾನ ಎಂಬುದು ಆಧ್ಯಾತ್ಮ ಮತ್ತು ಧಾರ್ಮಿಕತೆಗೆ ಸೀಮಿತವಲ್ಲ. ಅದೊಂದು ದೊಡ್ಡ ಕಲೆ ಎಂದು ಭಾವಿಸ ಬೇಕಿಲ್ಲ. ಯಾರು ಬೇಕಾದರೂ, ಎಲ್ಲಿ ಬೇಕಾ ದರೂ ಧ್ಯಾನ ಮಾಡಬಹುದು, ಇದು ಒತ್ತಡ ವನ್ನು ಹೋಗಲಾಡಿಸುತ್ತದೆ ಎಂದರು.

ಕುಲಸಚಿವ ಪೆÇ್ರ.ಆರ್.ಶಿವಪ್ಪ, ಮೈಸೂರು ವಿವಿ ಒಬಿಸಿ ಘಟಕದ ಸಂಯೋ ಜನಾಧಿಕಾರಿ ಡಾ.ಬಿ.ವಿ.ಸುರೇಶ್‍ಕುಮಾರ್, ಐಕ್ಯೂಎಸಿ ನಿರ್ದೇಶಕ ಡಾ.ಎನ್.ಎಸ್. ಹರಿನಾರಾಯಣ, ಸಂಘಟನಾ ಕಾರ್ಯ ದರ್ಶಿ ಡಾ.ನವಿತಾ ತಿಮ್ಮಯ್ಯ, ಐಕ್ಯೂಎಸಿ ಸಂಯೋಜಕ ಡಾ.ಜೆ.ಲೋಹಿತ್ ಇನ್ನಿತ ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »