ಸಂವಿಧಾನ ಬದಲಿಸಲು ಮುಂದಾದರೆ ರಕ್ತಕ್ರಾಂತಿಯೇ ಆಗುತ್ತದೆ
ಮೈಸೂರು

ಸಂವಿಧಾನ ಬದಲಿಸಲು ಮುಂದಾದರೆ ರಕ್ತಕ್ರಾಂತಿಯೇ ಆಗುತ್ತದೆ

November 28, 2021

ಮೈಸೂರು,ನ.27(ಎಂಟಿವೈ)- ಸಂವಿಧಾನವನ್ನು ಬದಲಿಸಬೇಕು ಎಂದು ಉದ್ದೇಶಿಸಿರುವವರನ್ನು ಹಾಗೂ ಸಂವಿಧಾನವನ್ನು ವಿರೋಧಿಸುವವರನ್ನು ನಾವು ಪ್ರಬಲವಾಗಿ ವಿರೋಧಿಸಬೇಕು. ಉದ್ದೇಶ ಪೂರ್ವಕವಾಗಿ ಸಂವಿಧಾನ ಬದಲಿಸಲು ಮುಂದಾ ದರೆ ರಕ್ತಕ್ರಾಂತಿಯೇ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನ ದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎನ್.ರಾಚಯ್ಯ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ಪೀಠ ಹಾಗೂ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮೇಯರ್ ನಾರಾಯಣ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರ ಕುರಿತಾದ ‘ಪೌರಬಂಧು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದವರೇ ಆಗಿದ್ದ ಕೇಂದ್ರ ಸಚಿವರೊಬ್ಬರು ಸಂವಿಧಾನವನ್ನೇ ಬದಲಿಸುತ್ತೇನೆ ಎಂದಿದ್ದರು. ಆ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರೂ ವಿರೋಧಿಸ ಲಿಲ್ಲ. ಬಿಜೆಪಿಯಲ್ಲಿನ ದಲಿತ ನಾಯಕರಾದ ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ ಸೇರಿದಂತೆ ಯಾರೂ ಸಹ ಆಕ್ಷೇಪ ವ್ಯಕ್ತಪಡಿಸ ಲಿಲ್ಲ. ಅವರೆಲ್ಲರೂ ಬಿಜೆಪಿ ಸೇರಿರುವುದು ಸ್ವಾರ್ಥಕ್ಕಾ ಗಿಯೇ ಹೊರತು ದಲಿತರ ಉದ್ಧಾರಕ್ಕಾಗಿ ಅಲ್ಲವೇ ಅಲ್ಲ. ಇದನ್ನೆ ನಾನು ಸಿಂಧಗಿಯಲ್ಲಿಯೂ ಹೇಳಿದ್ದೆ. ನನ್ನ ಈ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ವಿವಾದ ಎಬ್ಬಿಸಿ, ದಲಿತರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಆದರೆ ದಲಿತರಿಗೆ ಬಿಜೆಪಿ ಬಣ್ಣ ಗೊತ್ತಿದೆ. ಅಂದು ನಾನು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಲದ್ದಿ ಎತ್ತುತ್ತಿದ್ದವ ಕುದುರೆ ಏರಿದ್ದನ್ನು ನೋಡಿ ಸಂಭ್ರಮಿಸಿದ್ದೆ: ನಾನು ತಾಲೂಕು ಬೋರ್ಡ್ ಅಧ್ಯಕ್ಷ ನಾಗಿದ್ದಾಗ ತಾಲೂಕು ಕಚೇರಿ ಬಳಿ ಪೌರಕಾರ್ಮಿಕರ ಪರ ಹೋರಾಟ ನಡೆಸುತ್ತಿದ್ದ ನಾರಾಯಣ್ ನನಗೆ ಪರಿಚಯವಾದರು. ಬಳಿಕ ನಗರ ಪಾಲಿಕೆ ಚುನಾವಣೆಗೆ ನಿಂತು, ಗೆದ್ದರು. ಆಗ ಮೇಯರ್- ಉಪಮೇಯರ್ ಆಯ್ಕೆಗೆ ಮೀಸಲಾತಿ ಇರಲಿಲ್ಲ. ನಮ್ಮ ಸರ್ಕಾರ ಕಾನೂನು ತಿದ್ದುಪಡಿ ತಂದು ಮೀಸಲಾತಿ ತಂದೆವು. ಅದರ ಬಳುವಳಿಯೇ ನಾರಾಯಣ್ ಮೇಯರ್ ಆಗಿ ಆಯ್ಕೆಯಾದರು. ದಸರಾ ಜಂಬೂ ಸವಾರಿಯಲ್ಲಿ ನೀನು ಕುದುರೆ ಮೇಲೆ ಕೂರಬೇಕು ಕಣ್ಣಯ್ಯ. ದಸರಾದಲ್ಲಿ ನಿಮ್ಮ ತಂದೆ-ತಾಯಿ, ನೀನು ಆನೆ, ಕುದುರೆಗಳ ಲದ್ದಿ ಎತ್ತುತ್ತಿದ್ದವ, ನಿನ್ನಂತವನು ಅದೇ ಕುದುರೆ ಮೇಲೆ ಕುಳಿತು ಹೋಗುವುದನ್ನು ನೋಡ ಬೇಕು ಅಂದಿದ್ದೆ. ಅದೇ ರೀತಿ ಆದದ್ದನ್ನು ನೋಡಿ ನನಗೆ ಖುಷಿಯಾಗಿತ್ತು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ನಾರಾಯಣ್ ಹಾಗೂ ಪತ್ನಿ ಜಯಮ್ಮ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿವಿ ಕುಲಪತಿ ಪೆÇ್ರ.ಜಿ. ಹೇಮಂತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯ ಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ್, ಶಾಸಕ ಎಲ್.ನಾಗೇಂದ್ರ, ಹಿರಿಯ ಪತ್ರಕರ್ತ ಕೆ.ಶಿವಕುಮಾರ್, ಶ್ರೀ ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಹೆಚ್.ಬಿ.ಮಲ್ಲಿಕಾರ್ಜುನ ಸ್ವಾಮಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪೆÇ್ರ. ಮುಜಾಫರ್ ಅಸಾದಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್‍ಗಳಾದ ಆರೀಫ್ ಹುಸೇನ್, ಅಯೂಬ್‍ಖಾನ್, ಅನಂತು, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕ ಟೇಶ್, ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ, ಕೃತಿಯ ಕರ್ತೃಗಳಾದ ಗಜೇಂದ್ರ, ಡಾ.ಹರೀಶ್ ಕುಮಾರ್, ಮೈಸೂರು ಮಹಾನಗರಪಾಲಿಕೆ ಖಾಯಂ ಪೌರಕಾರ್ಮಿ ಕರು ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಗೌರವಾಧ್ಯಕ್ಷ, ಮಾಜಿ ಮೇಯರ್ ನಾರಾಯಣ್, ಅಧ್ಯಕ್ಷ ಎನ್.ಮೋಹನ್‍ಕುಮಾರ್, ಕಾರ್ಯಾಧ್ಯಕ್ಷ ದುರ್ಗಣ್ಣ, ಉಪಾಧ್ಯಕ್ಷ ರಾಜೀವ್, ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಕಾರ್ಯದರ್ಶಿ ಟಿ.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಸಿ.ಆರ್.ರಾಚಯ್ಯ, ಸಹ ಕಾರ್ಯದರ್ಶಿ ಎನ್.ಅರುಣ್‍ಕುಮಾರ್, ಜಂಟಿ ಕಾರ್ಯದರ್ಶಿ ಶಂಕರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »