ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
News

ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ

January 28, 2022

ನವದೆಹಲಿ, ಜ.27- ಕೇಂದ್ರ ಸರ್ಕಾರ ಗುರುವಾರ ಅಧಿಕೃತವಾಗಿ ಏರ್ ಇಂಡಿಯಾ ವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿ ಸಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್ ಇಂಡಿಯಾ ಬಂದಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅಧಿಕೃತ ಹಸ್ತಾಂತರಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದರು. ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಏರ್ ಇಂಡಿಯಾವನ್ನು ತನ್ನ ಮಡಿಲಿಗೆ ಮರಳಿ ಪಡೆದಿರುವುದಕ್ಕೆ ಟಾಟಾ ಸಮೂಹ ತುಂಬಾ ಸಂತೋಷಗೊಂಡಿದೆ. ವಿಶ್ವದರ್ಜೆ ಮಟ್ಟದಲ್ಲಿ ವಿಮಾನಯಾನ ಸಂಸ್ಥೆಯನ್ನು ರಚಿಸಲು, ಉತ್ಸಾಹದಿಂದ ಎಲ್ಲರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದರು.
ನಿರ್ವಹಣಾ ನಿಯಂತ್ರಣದೊಂದಿಗೆ ಏರ್ ಇಂಡಿಯಾದ ಶೇ.100ರಷ್ಟು ಷೇರುಗಳನ್ನು ಟಾಟಾ ಗ್ರೂಪ್‍ನ ಒ/s ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‍ಗೆ ವರ್ಗಾಯಿಸುವುದ ರೊಂದಿಗೆ ಏರ್ ಇಂಡಿಯಾದ ಕಾರ್ಯತಂತ್ರದ ಹೂಡಿಕೆ ವಹಿವಾಟು ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸ್ಟ್ರಾಟೆಜಿಕ್ ಪಾಲುದಾರರ ನೇತೃತ್ವದ ಹೊಸ ಮಂಡಳಿಯು ಏರ್ ಇಂಡಿಯಾದ ಜವಾಬ್ದಾರಿಯನ್ನು ವಹಿಸುತ್ತದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ತಿಳಿಸಿದ್ದಾರೆ.

ಸಂಪೂರ್ಣ 2,700 ಕೋಟಿ ಸರ್ಕಾರಕ್ಕೆ ಬಂದಿರುವುದರಿಂದ ಟಾಟಾ ಗ್ರೂಪ್‍ನ ಟ್ಯಾಲೇಸ್ ಹೊಸ ಮಾಲೀಕರಾಗಿದ್ದಾರೆ. ನಾವು ಷೇರುಗಳನ್ನು ವರ್ಗಾಯಿಸಿದ್ದೇವೆ. 15,300 ಕೋಟಿ ಸಾಲವನ್ನು ಸಹ ಸ್ವೀಕರಿಸಲಾಗಿದೆ. ಆದ್ದರಿಂದ ಎಲ್ಲಾ ಪ್ರಕ್ರಿಯೆಗಳು ಪೂರ್ಣ ಗೊಂಡಿವೆ ಎಂದು ಡಿಐಪಿಎಎಂ ಕಾರ್ಯದರ್ಶಿ ಹೇಳಿದ್ದಾರೆ. ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅಕ್ಟೋಬರ್ 8 ರಂದು ಏರ್ ಇಂಡಿಯಾ ವನ್ನು 18,000 ಕೋಟಿ ರೂ.ಗೆ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‍ಗೆ ಮಾರಾಟ ಮಾಡಿತ್ತು.

Translate »