ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ
ಮೈಸೂರು

ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ

June 3, 2022

ಮೈಸೂರು,ಜೂ.2(ಪಿಎಂ)-ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತಂತೆ ಮೈಸೂರಿನ ಕುವೆಂಪುನಗರ ದಲ್ಲಿರುವ ಅವರ ನಿವಾಸದ ಆವರಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾ ಭ್ಯಾಸದಲ್ಲಿ ಇರಬೇಕಿರುವುದು ಸತ್ಯ. ಇದರ ಹೊರತಾಗಿ ಯಾವುದೇ ಒಬ್ಬರು, ಮತ್ತೊಬ್ಬರ ಸಿದ್ಧಾಂತಗಳಲ್ಲ ಎಂದರು.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಅವರೂ ಪಠ್ಯಪುಸ್ತಕ ಪರಿಷ್ಕರಣೆಗೆ ಪ್ರಯತ್ನಿಸಿದರು. ಆದರೆ ಇದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ವಾಜಪೇಯಿ ಅವರು ಪರಿಷ್ಕರಣೆ ಕೈಬಿಟ್ಟರು ಎಂದು ಹೇಳಿದರು.

ನರೇಂದ್ರ ಮೋದಿಯವರ ಸರ್ಕಾರ ಬಂದು 2 ವರ್ಷ ಕಳೆದಿದ್ದ ಸಂದರ್ಭದಲ್ಲಿ ಮೋದಿಯವರ ಖ್ಯಾತಿ ಸಹಿಸದೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರಲ್ಲಿ ಎಷ್ಟೋ ಮಂದಿ `ಪ್ರಶಸ್ತಿ ವಾಪ್ಸಿ ಚಳವಳಿ’ ಶುರು ಮಾಡಿದರು. `ದೇಶ ದೊಳಗೆ ಸುಳ್ಳೇ ನಡೆಯುತ್ತಿದೆ.

ಪ್ರಾಮಾಣಿಕತೆ ಇಲ್ಲವೇ ಇಲ್ಲ. ಆದ್ದರಿಂದ ಅಕಾಡೆಮಿ ಪ್ರಶಸ್ತಿ ವಾಪಸ್ಸು ಕೊಡುತ್ತೇವೆ’ ಎಂದು ಹೇಳತೊಡಗಿದರು ಎಂದು ತಿಳಿಸಿದರು.
ಆಗ ಅಕಾಡೆಮಿ ಅಧ್ಯಕ್ಷರು, ಏನು ಮಾಡಬೇಕೆಂದು ನನ್ನ ಸಲಹೆ ಕೇಳಿ ದ್ದರು. ಅದಕ್ಕೆ ನಾನು, `ಪ್ರಶಸ್ತಿ ವಾಪಸ್ಸು ಕೊಟ್ಟರೆ ಸ್ವೀಕರಿಸಿ’ ಎಂದಿದ್ದೆ. ಜೊತೆಗೆ ಪ್ರಶಸ್ತಿ ನೀಡುವಾಗ ಕೊಟ್ಟಿರುವ ನಗದು ವಾಪಸ್ಸು ನೀಡು ವಂತೆಯೂ ಅವರಿಗೆ ಪತ್ರ ಬರೆಯಿರಿ’ ಎಂದಿದ್ದೆ. ಆದರೆ ಅವರು ಸುಮ್ಮನಾದರು. ಈಗಿನ ಪುಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಗಲಾಟೆ ಗಳನ್ನು ಬೇರೆ ಬೇರೆ ರೂಪದೊಳಗೆ ಆಗುವಂತೆ ಮಾಡಿಸಿಯೇ ಮಾಡಿ ಸುತ್ತಾರೆ. ಇದರೊಳಗೆ ಹೊಸದೇನಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರ ಎಂಬ ಹಿಲೀಸ್ಟೇಷನ್ ಇದೆ. ಇದಕ್ಕೆ 21 ಮೈಲಿ ದೂರದಲ್ಲಿ ಪ್ರತಾಪ್ ಗಢ್ ಕೋಟೆ ಇದೆ. ನಾನು ಅದನ್ನು ನೋಡಲು ಹೋಗಿದ್ದೆ. ಅಫ್ಜಲ್ ಖಾನ್‍ನನ್ನು ಶಿವಾಜಿ ಹತ್ಯೆ ಮಾಡಿದ ಸ್ಥಳ ಪ್ರತಾಪ್ ಗಢ್. ಶಿವಾಜಿ ಸೋಲಿಸಲು ಬೀಜಾಪುರದ ಸುಲ್ತಾನ ತನ್ನ ಸೇನಾಧಿಕಾರಿ ಅಫ್ಜಲ್ ಖಾನ್ ಕಳುಹಿಸಿದ್ದ. ಆತ ಆರೂವರೆ ಅಡಿ ಎತ್ತರದ ವ್ಯಕ್ತಿ. ಈತ ಯುದ್ಧಕ್ಕೆ ಬದಲು ಮಾತುಕತೆ ನಡೆಸಲು ಬರಬೇಕೆಂದು ಶಿವಾಜಿ ಬಳಿ ಹೇಳಿ ಕಳುಹಿಸಿದ್ದ. ಶಿವಾಜಿ ಬಹಳ ಬುದ್ಧಿವಂತ. ತನ್ನ ಮೇಲೆ ದಾಳಿ ನಡೆಯುವ ಬಗ್ಗೆ ಮೊದಲೇ ಊಹಿಸಿ, ವ್ಯಾಘ್ರನಖ ಇಟ್ಟುಕೊಂಡು ಭೇಟಿಗೆ ಹೋಗಿದ್ದ. ಅಫ್ಜಲ್ ಖಾನ್, ಶಿವಾಜಿಯನ್ನು ಕೊಲ್ಲಲು ಯತ್ನಿಸಿದಾಗ, ಶಿವಾಜಿಯೇ ವ್ಯಾಘ್ರನಖದ ಮೂಲಕ ಹತ್ಯೆ ಮಾಡಿದ. ನಾನು ಪ್ರೌಢ ಶಾಲೆಯಲ್ಲಿದ್ದಾಗ ಇದನ್ನು ಓದಿದ್ದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಗೈಡ್ ಹತ್ಯೆ ಮಾಡಿದ ಸ್ಥಳವನ್ನು ಮೊದಲಿಗೆ ತೋರಿಸಲಿಲ್ಲ ಎಂದು ತಿಳಿಸಿದರು.

ವ್ಯಾಘ್ರನಖದ ಮೂಲಕ ಹತ್ಯೆ ಮಾಡಿದ ಸ್ಥಳ ತೋರಿಸಲೇ ಇಲ್ಲವಲ್ಲ ಎಂದು ಗೈಡ್ ಅನ್ನು ಕೇಳಿದ್ದೆ. ಅದಕ್ಕೆ ಆತ ನನಗೆ ಗೊತ್ತಿಲ್ಲ ಎಂದ. ಅವನಿಗೆ ಐದು ರೂಪಾಯಿ ಕೊಟ್ಟ ಬಳಿಕ ತೋರಿಸಲು ಮುಂದಾದ, ಅಫ್ಜಲ್ ಖಾನ್ ಹತ್ಯೆ ಬಗ್ಗೆ ಇಲ್ಲಿ ದೊಡ್ಡ ಬೋರ್ಡ್ ಇತ್ತು. ಆದರೆ ಕಳೆದ ಚುನಾವಣೆ ಸಂದರ್ಭದಲ್ಲಿ ಮುಸಲ್ಮಾನರು ಈ ಬೋರ್ಡ್ ತೆಗೆದು ತಮಗೆ ಕೊಟ್ಟರೆ ದರ್ಗಾ ಕಟ್ಟುತ್ತೇವೆ ಎಂದಿದ್ದರು. ಇದಕ್ಕೆ ಸರ್ಕಾರ ಸಮ್ಮತಿಸಿತು. ಈಗ ಇದನ್ನು ದರ್ಗಾ ಮಾಡಿದ್ದಾರೆ ಎಂದು ಆತ ಹೇಳಿದ. ದರ್ಗಾ ಎಂದರೆ ದೇವರ ಪ್ರಾರ್ಥನೆ ಮಾಡುವವರ ಹೆಸರಿನಲ್ಲಿ ಕಟ್ಟುವುದು ಇದೆ. ಆದರೆ ಈತ ಸೇನಾಧಿಕಾರಿ ಆಗಿದ್ದವ ಎಂದರು.
ನಾನು ಅಲ್ಲೇ ಯೋಚನೆ ಮಾಡಿದ್ದೆ ನೇಂದರೆ, ಚುನಾವಣೆ ಬಂದರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿ ಜುಟ್ಟು ಹಿಡಿದು ಬೇಕಾದರೂ ಕೊಟ್ಟು ಬಿಡು ತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿಮಗೊಂದು ಪುಸ್ತಕ ತೋರಿಸುತ್ತೇನೆ ಎಂದು `ಒಥಿ ಈಡಿozeಟಿ ಖಿuಡಿbuಟeಟಿಛಿe iಟಿ ಏಚಿshmiಡಿ’ಎಂಬ ಪುಸ್ತಕ ಪ್ರದರ್ಶಿಸಿದ ಅವರು, ಇದನ್ನು ಜಗಮೋಹನ್ ಎನ್ನುವವರು ಬರೆದಿ ದ್ದಾರೆ. ಅವರು ಕಾಶ್ಮೀರ ಗೌರ್ನರ್ ಆಗಿದ್ದವರು. ಕಾಶ್ಮೀರದಲ್ಲಿ ಇಂದು ಏನಾಗಿದೆ, ದೆಹಲಿಯಲ್ಲಿ ಇದ್ದ ಆಡಳಿತಗಾರರು ಓಟಿಗಾಗಿ ಏನೆಲ್ಲಾ ಮಾರಿಕೊಂಡ ಬಗ್ಗೆ ಇದರಲ್ಲಿ ಬರೆದಿದ್ದಾರೆ. ಈ ಪುಸ್ತಕವನ್ನು ಈಗ ನಾನು ಓದುತ್ತಿದ್ದೇನೆ. ನೀವು ಓದಬೇಕು ಎಂದು ಸಲಹೆ ನೀಡಿದರು.

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರ ವಿರುದ್ಧ ವಿನಾಕಾರಣ ವಿರೋಧ ವ್ಯಕ್ತಪಡಿಸಲಾಯಿತು. ಅವರು ಕೊಡಗಿ ನವರು. ಟಿಪ್ಪು ಕೊಡಗಿನಲ್ಲಿ ಎಷ್ಟೋ ಜನ ಬಡವರನ್ನು ಹತ್ಯೆ ಮಾಡಿ, ಎಷ್ಟೋ ಜನರನ್ನು ಮತಾಂತರ ಮಾಡಿದ. ತಮ್ಮ ಮನೆತನದವರು ಎಷ್ಟೊ ಜನ ಟಿಪ್ಪುವಿನಿಂದ ಸಾವನ್ನಪ್ಪಿದರು ಎಂಬುದು ಕಾರ್ಯಪ್ಪನವರಿಗೆ ಗೊತ್ತಿತ್ತು. ಅವರು ಭಾಷಣದಲ್ಲಿ ಅದನ್ನು ಹೇಳಿದ್ದರು. ಅದಕ್ಕೆ ಇವರಿಗೆ ಕೋಪ ಬಂದಿತು. ರಂಗಾಯಣದ ಈ ಹಿಂದಿನ ನಿರ್ದೇಶಕರು ರಂಗಾಯಣಕ್ಕೆ ಬಂದು ಚಳ ವಳಿಯನ್ನೇ ಆರಂಭಿಸಿದರು ಎಂದರು. ಕಾರ್ಯಪ್ಪರನ್ನು ವಜಾಗೊಳಿಸ ಬೇಕು ಎಂದು ಹೋರಾಟ ಮಾಡಿದರು. ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಮನವಿ ಸಲ್ಲಿಸಿದರು. ದಿನ ಕಳೆದಂತೆ ಹೋರಾಟ ಕೈಬಿಟ್ಟರು. ನಾಟಕದ ಮೂಲಕ ಚಳವಳಿ ಮಾಡಬೇಕೆಂದು ಅವರು ಮುಕ್ತ ವಾಗಿಯೇ ಹೇಳುತ್ತಾರೆ. ಕಾಳಿದಾಸ ನಾಟಕ ಬರೆದಿದ್ದು ಚಳುವಳಿ ಮಾಡಲೇ? ಎಂದು ಪ್ರಶ್ನಿಸಿದ ಅವರು, ಇಲ್ಲಿ ರಸಾನುಭವ ಮುಖ್ಯ. ಚಳುವಳಿ ಮಾಡದವರು ಸಾಹಿತಿಯೇ ಅಲ್ಲ ಎಂದು ಇವರು ಪ್ರತಿಪಾದಿಸುತ್ತಾರೆ. ಕಾರ್ಯಪ್ಪರನ್ನು ರಂಗಾಯಣದ ನಿರ್ದೇಶಕ ಸ್ಥಾನದಿಂದ ತೆಗೆಸಬೇಕು ಎಂದು ಬಹಳ ಪ್ರಯತ್ನಿಸಿದರು. ಆದರೆ ಅವರು ಬಗ್ಗಲಿಲ್ಲ. ಸರ್ಕಾರವೂ ಗಟ್ಟಿಯಾಗಿತ್ತು ಎಂದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್ ಮತ್ತಿತರರು ಹಾಜರಿದ್ದರು.

Translate »