ಪ್ರಧಾನಿ ಮೋದಿಯವರೇ ಅಭ್ಯರ್ಥಿಗಳ ಆಯ್ಕೆ ಮಾಡ್ತಾರೆ…
News

ಪ್ರಧಾನಿ ಮೋದಿಯವರೇ ಅಭ್ಯರ್ಥಿಗಳ ಆಯ್ಕೆ ಮಾಡ್ತಾರೆ…

October 14, 2022

ಬೆಂಗಳೂರು, ಅ.13(ಕೆಎಂಶಿ)- ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ಮಾಡಲಿದ್ದಾರೆ ಎಂದು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರೂ ಆದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಗಳ ಆಯ್ಕೆಗೆ ಈಗಾಗಲೇ ವರಿಷ್ಠರು ಕಸರತ್ತು ನಡೆಸಿ ದ್ದಾರೆ. ಪಕ್ಷಕ್ಕಾಗಿ ದುಡಿದ ಹಾಗೂ ಕ್ಷೇತ್ರದಲ್ಲಿ ಜನರ ಜೊತೆ ಸಂಪರ್ಕ ಇರುವವ ರಿಗಷ್ಟೇ ಪಕ್ಷದ ಟಿಕೆಟ್ ದೊರೆಯುತ್ತದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಚುನಾವಣಾ ರಾಜಕೀಯ ತಂತ್ರ ದಿಂದಲೇ ನಾವು ಕೇಂದ್ರದಲ್ಲಿ ಸತತವಾಗಿ ಅಧಿ ಕಾರಕ್ಕೆ ಬಂದಿರುವುದಲ್ಲದೆ, ಬಹುತೇಕ ರಾಜ್ಯ ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಖಾತೆ ತೆರೆದಿದೆ. ಅಧಿಕಾರದಲ್ಲಿರುವ ನಮ್ಮ ರಾಜ್ಯವನ್ನು ಬೇರೆ ಪಕ್ಷಗಳಿಗೆ ಯಾವುದೇ ಕಾರಣಕ್ಕೂ ವರಿಷ್ಠರು ಬಿಟ್ಟುಕೊಡುವುದಿಲ್ಲ.

ವಿಧಾನಸಭಾ ಚುನಾವಣೆಗೆ ಇನ್ನೂ ಆರೇಳು ತಿಂಗಳು ಇರುವಾಗಲೇ ಗೌಪ್ಯವಾಗಿ ಅಭ್ಯರ್ಥಿ ಗಳು ಯಾರಾಗಬೇಕೆಂಬುದರ ವಿಚಾರದಲ್ಲಿ ಸಮೀಕ್ಷೆಗಳನ್ನು ಮೋದಿಯವರೇ ಮಾಡಿಸು ತ್ತಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಮೀಕ್ಷೆ ಗಳು ನಡೆಯುತ್ತಿವೆ. ಇದನ್ನು ಅರ್ಥ ಮಾಡಿ ಕೊಂಡು ಮುಖಂಡರು ಮತ್ತು ಕಾರ್ಯ ಕರ್ತರು ಪಕ್ಷ ಸಂಘಟನೆ ಮತ್ತು ಜನರ ಜೊತೆ ಬೆರೆಯಬೇಕು. ಇಸ್ತ್ರಿ ಬಟ್ಟೆ ಹಾಕಿಕೊಂಡು ನಾಯಕರ ಮನೆ ಸುತ್ತಿದರೆ ಟಿಕೆಟ್ ದೊರೆಯುವುದಿಲ್ಲ. ಜನಮನ್ನಣೆ ಇರುವವರಿಗೆ ಮಾತ್ರ ಟಿಕೆಟ್. ವರಿಷ್ಠರ ಬಳಿ ಯಾರ ಪ್ರಭಾವವೂ ನಡೆಯು ವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ನಿಮ್ಮ ಕೆಲಸ ಮಾಡಿ ಎಂದು ಜನೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ. ವರಿಷ್ಠರು ಅಷ್ಟೇ ಅಲ್ಲ ರಾಜ್ಯ ಸರ್ಕಾರವೂ ಪಕ್ಷದ ಮುಖಂಡರ ಕೆಲಸ ನೋಡಿ ಮಾಹಿತಿ ರವಾನಿಸಲಿದೆ.

ರಾಜ್ಯ ಘಟಕವೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸರ್ವೇ ಮಾಡಿಸುತ್ತಿದೆ. ನಮಗೆ ದೊರೆತಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ಎಂಬುದು ತಿರುಕನ ಕನಸು. ರಾಷ್ಟ್ರದಲ್ಲಿ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದ ಕಡೆ ಅದಕ್ಕೆ ವಿಳಾಸವೇ ಇಲ್ಲ. ಕರ್ನಾಟಕದಲ್ಲಿ ವಿಳಾಸ ಹುಡುಕಲು ಆ ಪಕ್ಷದ ಮುಖಂಡ ರಾಹುಲ್‍ಗಾಂಧಿ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಲೇವಡಿ ಮಾಡಿದ್ದಾರೆ.

Translate »