ಖಾಸಗಿ ಸಂಸ್ಥೆಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುವಂತಹವರನ್ನು ಕುಲಪತಿಯಾಗಿ ಆಯ್ಕೆ ಮಾಡಲೇಬಾರದು
ಮೈಸೂರು

ಖಾಸಗಿ ಸಂಸ್ಥೆಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುವಂತಹವರನ್ನು ಕುಲಪತಿಯಾಗಿ ಆಯ್ಕೆ ಮಾಡಲೇಬಾರದು

February 16, 2023

ಮೈಸೂರು,ಫೆ.15(ಪಿಎಂ)-ಮೈಸೂರು ವಿವಿಯಲ್ಲಿ ಆರ್ಥಿಕ ಸಂಪನ್ಮೂಲದ ಸೋರಿಕೆ ತಡೆಗಟ್ಟಿ ವಿವಿ ಗೌರವ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಸ್ವಹಿತಾಸಕ್ತಿ ಇಲ್ಲದ, ಬೇರೆ ಬೇರೆ ಟ್ರಸ್ಟ್‍ಗಳಲ್ಲಿ ಟ್ರಸ್ಟಿಗಳಾಗಿರದವರನ್ನೇ ಕುಲಪತಿ ಯಾಗಿ ಆಯ್ಕೆ ಮಾಡಬೇಕೆಂಬ ಕೂಗು ಮೈಸೂರಿನಿಂದ ಹೊರಹೊಮ್ಮಬೇಕಿದೆ ಎಂದು ಸಂಸದ ಪ್ರತಾಪ್‍ಸಿಂಹ ಅಭಿಪ್ರಾಯಪಟ್ಟರು.

ಮೈಸೂರು ಮಾನಸ ಗಂಗೋತ್ರಿಯ ಮೈಸೂರು ವಿವಿ ವಿಜ್ಞಾನ ಭವನದ ಸೆಮಿ ನಾರ್ ಹಾಲ್‍ನಲ್ಲಿ ಮೈಸೂರು ವಿವಿಯ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಬುಧ ವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐಟಿಸಿ ಕಂಪನಿಯ ಸಿಎಸ್‍ಆರ್ ನಿಧಿಯಡಿ ವಿವಿಯ ಹಿಂದುಳಿದ ವರ್ಗಗಳ ಸಂಶೋ ಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಅವರು ಮಾತನಾಡಿದರು.

ವಿವಿಯಲ್ಲಿ ಅಥವಾ ಸರ್ಕಾರಿ ಅಧೀ ನದ ವಿವಿಯಲ್ಲಿ ಹತ್ತಾರು ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ವಿವಿ ಬಗ್ಗೆ ಅಪಾರ ಪ್ರೀತಿ-ಗೌರವ, ಕಾಳಜಿ ಹೊಂದಿರುವ ಮಾನದಂಡದಲ್ಲಿ ಕುಲಪತಿಗಳ ಆಯ್ಕೆಗೆ ನಿಯಮ ತರುವ ಅಗತ್ಯವಿದೆ. ಯಾವುದೋ ಖಾಸಗಿ ಸಂಸ್ಥೆಯ ಟ್ರಸ್ಟಿಗಳಿದ್ದೂ ಅಂತಹವರು ಏಕೆ ಸರ್ಕಾರಿ ಅಧೀನದ ವಿವಿಗಳಿಗೆ ಕುಲಪತಿಗಳು ಆಗ ಬೇಕು. ಈ ರೀತಿ ಮೈಸೂರು ವಿವಿಯಲ್ಲಿ ಹಿಂದೆ ಆಗಿದ್ದು, ಮತ್ತೊಂದು ಖಾಸಗಿ ಸಂಸ್ಥೆ ಸಾಕಲು ಮೈಸೂರು ವಿವಿಯೇನು ಕಾಮಧೇನು ಅಲ್ಲ ಎಂದು ಕಿಡಿಕಾರಿದರು.

ಸೋರಿಕೆ ತಡೆಗಟ್ಟಬೇಕು: ಮೈಸೂರು ವಿವಿಯಲ್ಲಿ ಸುಮಾರು 1,400 `ಸಿ’ ಮತ್ತು `ಡಿ’ ಗ್ರೂಪ್ ನೌಕರರು ಇದ್ದು, ಈ ಪೈಕಿ ಶೇ.50ರಷ್ಟು ಮಂದಿ ಅಗತ್ಯವೇ ಇರಲಿಲ್ಲ. ಹೆಚ್ಚುವರಿ ನೇಮಕಾತಿ ಅನಗತ್ಯ ಎಂಬು ದನ್ನು ಹಿಂದಿನ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರಲ್ಲಿಯೂ ಹೇಳಿದ್ದೆ. ಈ ರೀತಿಯ ಸೋರಿಕೆ ತಡೆಗಟ್ಟಿದ್ದರೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೂ ಸರ್ಕಾ ರದ ತಕರಾರು ಇರುತ್ತಿರಲಿಲ್ಲ. ವಿವಿಯ ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಸರ್ಕಾರ ಅನಿವಾರ್ಯವಾಗಿ ಆಕ್ಷೇಪ ವ್ಯಕ್ತಪಡಿಸಿತು ಎಂದು ತಿಳಿಸಿದರು.

ವಿವಿಯಲ್ಲಿ ಆದಾಯಕ್ಕೆ ಅನುಗುಣ ವಾಗಿ ಖರ್ಚು ಇಲ್ಲದೆ, ಸೋರಿಕೆ ಹೆಚ್ಚಿದೆ. ಏನೇನೋ ವ್ಯವಹಾರಿಕವಾಗಿ ನೇಮಕಾತಿ ಮಾಡುತ್ತಾ ಹೋದರೆ ಕೊನೆಗೆ ಅದರಿಂದ ಸೋರಿಕೆ ಆಗಲಿದೆ. `ಸಿ’ ಮತ್ತು `ಡಿ’ ಗ್ರೂಪ್ ನೌಕರರ ಅನಗತ್ಯ ನೇಮಕಾತಿ ತಡೆದಿದ್ದರೆ, ಅವರ ವೇತನಕ್ಕಾಗಿ ವಿನಿಯೋಗಿಸುತ್ತಿ ರುವುದರಲ್ಲಿ ಪ್ರತಿ ತಿಂಗಳು 50 ಲಕ್ಷ ರೂ. ವಿವಿಗೆ ಉಳಿತಾಯ ಆಗುತ್ತಿತ್ತು. ಇದೇ ಹಣವನ್ನು ಸಂಶೋಧಕರ ಫೆಲೋಶಿಪ್ ಹೆಚ್ಚಳಕ್ಕೆ ಸದ್ವಿನಿಯೋಗ ಮಾಡಿಕೊಳ್ಳ ಬಹುದಿತ್ತು ಎಂದರು. ಮೈಸೂರು ವಿವಿಗೆ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವ ಪ್ರಧಾನಿಗಳು, ರಾಷ್ಟ್ರಪತಿಗಳು ಭೇಟಿ ನೀಡಿ ದ್ದಾರೆ. ಮೈಸೂರು ಮಹಾರಾಜರಿಂದ ಸ್ಥಾಪನೆಗೊಂಡು ಶತಮಾನೋತ್ಸವ ಆಚರಿಸಿ ಕೊಂಡು ದೇಶದ ನಾಲ್ಕನೇ ವಿವಿಯಾಗಿ ಹೊರಹೊಮ್ಮಿರುವ ಮೈಸೂರು ವಿವಿಯ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ತಿಳಿಸಿದರು. ಎಸ್‍ಸಿ-ಎಸ್‍ಟಿ ಸಂಶೋ ಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡುತ್ತಿರುವುದು ಸಾಮಾಜಿಕ ನ್ಯಾಯ. ಅಂತೆಯೇ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳೂ ಕಷ್ಟದ ಹಿನ್ನೆಲೆಯಲ್ಲಿ ಬಂದಿರುತ್ತಾರೆಂಬ ಕಾರಣಕ್ಕೆ 45 ಮಂದಿಗೆ ಫೆಲೋಶಿಪ್ ಕೊಡಿಸಲಾ ಯಿತು. ಅದೇ ಮಾದರಿಯಲ್ಲಿ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡಬೇಕೆಂಬ ಮನವಿ ಹಿನ್ನೆಲೆಯಲ್ಲಿ ಐಟಿಸಿ ಕಂಪನಿ ಮೂಲಕ ಮೊದಲ ಹಂತ ದಲ್ಲಿ 30 ಮಂದಿ ಆಯ್ಕೆ ಮಾಡಿ ಅವರಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಅಂತೆಯೇ ಇಂದು 25 ಮಂದಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಗಿದೆ ಎಂದರು.

ಸಿಎಸ್‍ಆರ್ ನಿಧಿಯಡಿ ಕೆರೆಗಳ ಹೂಳೆತ್ತುವ ಬದಲು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡುವಂತೆ ಐಟಿಸಿ ಕಂಪನಿಯವರಿಗೆ ಸಲಹೆ ನೀಡಿದೆ. ಕಾರಣ ಮನ್ರೆಗಾ ಯೋಜ ನೆಯಡಿ ಕೆರೆಗಳ ಹೂಳೆತ್ತುವ ಕೆಲಸ ಮಾಡಿಸಲಾಗುತ್ತಿದೆ. ಮೊದಲ ಬಾರಿಗೆ ಐಟಿಸಿ ಕಂಪನಿ ಮೂಲಕ ಲ್ಯಾಪ್‍ಟಾಪ್ ಕೊಡಿಸುವಾಗ ಕೆಲವರು ಸಿಗರೇಟ್ ಕಂಪನಿ ಮೂಲಕ ಕೊಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗೆ ಮೋಸರಲ್ಲೂ ಕಲ್ಲು ಹುಡುಕುವ ಬುದ್ಧಿಯನ್ನು ಕೆಲವರು ತೋರುತ್ತಾರೆ. ಕರ್ನಾಟಕ ಸರ್ಕಾರದ ಬಜೆಟ್ 2 ಲಕ್ಷ ಕೋಟಿ ರೂ. ಇದ್ದು, ಇದರಲ್ಲಿ 30 ಸಾವಿರ ಕೋಟಿ ಆದಾಯವು ಮದ್ಯ ಮಾರಾಟ ದಿಂದ ಬರುತ್ತಿದೆ. ಕುಡುಕರಿಂದ ಬಂದಿದೆ ಎಂದು ಖರ್ಚು ಮಾಡಬೇಡಿ ಎನ್ನಲು ಸಾಧ್ಯವೇ? ಕ್ಷುಲ್ಲಕ ಕಾರಣಗಳಿಗಾಗಿ ಅಸಮಾಧಾನ ವ್ಯಕ್ತಪಡಿಸುವವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಪ್ರಭಾರ ಕುಲಪತಿ ಪ್ರೊ.ಹೆಚ್.ರಾಜಶೇಖರ್, ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ್, ಐಟಿಸಿ ಕಂಪನಿ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸರೆಡ್ಡಿ, ವ್ಯವಸ್ಥಾಪಕ ಪೂರ್ಣೇಶ್ ಹಾಜರಿದ್ದರು.

Translate »