ಕವಲುದಾರಿಯ ರಾಜಕಾರಣದಿಂದ ಸಂವಿಧಾನಕ್ಕೆ ಅಪಾಯ
ಮಂಡ್ಯ

ಕವಲುದಾರಿಯ ರಾಜಕಾರಣದಿಂದ ಸಂವಿಧಾನಕ್ಕೆ ಅಪಾಯ

August 23, 2021

ಮಂಡ್ಯ, ಆ.22(ಮೋಹನ್‍ರಾಜ್)- ಭಾರತದ ಪ್ರಸ್ತುತ ರಾಜಕಾರಣ ಕವಲು ದಾರಿಯಲ್ಲಿದ್ದು, ಸಂವಿ ಧಾನ ಅಪಾಯಕ್ಕೆ ಸಿಲುಕಿದೆ. ಸಂವಿಧಾನದ ರಕ್ಷಣೆ ಯೊಂದಿಗೆ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ಮನಸ್ಸು ಮಾಡದಿದ್ದರೆ ಜಾತಿವಾದ-ಕೋಮುವಾದ ನಮ್ಮನ್ನು ಮೂಲೆಗುಂಪು ಮಾಡಲಿವೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನು ವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಜನ್ಮ ದಿನೋತ್ಸವ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂವಿಧಾನಿಕ ಸಂಸ್ಥೆಗಳು ರಾಜಕೀಯ ದಾಳಗಳಾ ಗಿವೆ. ಸಂವಿಧಾನದ ಕತ್ತು ಹಿಸುಕುವ ಕೆಲಸವಾಗುತ್ತಿದೆ. ಜಾತಿ, ಹಣಬಲವಿದ್ದವರಿಗಷ್ಟೇ ಅಧಿಕಾರ ಎನ್ನು ವಂತಾಗಿದೆ. ಯೋಗ್ಯರು, ಸಮರ್ಥರು, ವಿವೇಚನೆ ಇರುವವರ ಕೈಗೆ ಅಧಿಕಾರ ಸಿಗದಂತಾಗಿದೆ. ಜಾತಿ ರಹಿತ, ಸಮಸಮಾಜದ ನಿರ್ಮಾಣದ ಕಲ್ಪನೆ ದೂರ ವಾಗಿದೆ. ಸಂವಿಧಾನವಿಲ್ಲದ ಭಾರತ ನಿರ್ಮಾಣದತ್ತ ದಾಪುಗಾಲಿಟ್ಟಿz್ದÉೀವೆ ಎಂದು ಎಚ್ಚರಿಸಿದರು.

ಜಾತಿ ಎನ್ನುವುದು ಚಲನೆ ಇಲ್ಲದಿರುವುದು. ಜಾತಿಗೆ ಚಲನೆ ಕೊಡಬೇಕಾದರೆ ವರ್ಗಸಂಘರ್ಷವಾಗಬೇಕು. ಚಲನಶೀಲ ಸಮಾಜ ನಿರ್ಮಾಣಕ್ಕೆ ವೈಜ್ಞಾನಿಕ ಪ್ರಯತ್ನ ಗಳಿಂದ ಬದಲಾವಣೆ ತರುವುದಕ್ಕೆ ಯತ್ನಿಸಿದವರು ದೇವರಾಜ ಅರಸು. ಯಾವ ಜಾತಿ-ಸಮುದಾಯ ಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಡ ಎಂದಿದ್ದವೋ, ಆ ಜಾತಿಗಳು ಈಗ ನಿಮ್ಮೊಳಗೆ ಸುಳಿದು ನಿಮ್ಮನ್ನು ಒಡೆದು ಆಳುವುದಕ್ಕೆ ಸಂಚು ನಡೆಸಿವೆ ಎಂದು ಆಪಾದಿಸಿದರು.

ಬದುಕಿನ ಎಲ್ಲಾ ಮಜಲುಗಳನ್ನು ಅರಸು ಅರಿತಿದ್ದರು. ಅನುಭವದೊಂದಿಗೆ ಬದುಕಿನ ಪರಿಪಕ್ವತೆ ಸಂಪಾದಿಸಿದ್ದರು. ಹಳ್ಳಿಯ ಬದುಕಿನ ಸೊಗಡು ಮಂತ್ರಿಯಾದರೂ ಅವರನ್ನು ಬಿಟ್ಟಿರಲಿಲ್ಲ. ಜಾತಿಯ ಬೆಂಬಲವಿಲ್ಲದೆ ಯಶಸ್ವಿ ಹಾಗೂ ಸಮಾಜಮುಖಿ ರಾಜಕಾರಣಿಯಾಗಿ ಮುಖ್ಯ ಮಂತ್ರಿ ಹುದ್ದೆಯನ್ನೂ ಅಲಂಕರಿಸಿದ್ದರು. ಸಾಮಾನ್ಯ ಜನರ ನೋವು-ನಲಿವುಗಳಿಗೆ ಹತ್ತಿರದಿಂದ ಸ್ಪಂದಿಸು ತ್ತಿದ್ದರು. ಅವರ ಕಷ್ಟಗಳಿಗೆ ಮಿಡಿಯುವ ಬದ್ಧತೆ ಪ್ರದರ್ಶಿಸಿ ದ್ದರು. ಅಂತಹ ರಾಜಕೀಯ ಔದಾರ್ಯತೆ, ಜನಸ್ಪಂದನೆ ಯನ್ನು ಇಂದಿನ ರಾಜಕಾರಣದೊಳಗೆ ಕಲ್ಪನೆ ಮಾಡಿ ಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಅರಸು ಜ್ಞಾನದ ಮಹತ್ವವನ್ನು ಚೆನ್ನಾಗಿ ತಿಳಿದಿ ದ್ದರು. ಶಾಲೆಯಲ್ಲಿ ಕಲಿಯುವುದು ಅಕ್ಷರ ಜ್ಞಾನ, ಹಳ್ಳಿಯ ಲ್ಲಿರುವುದೇ ನಿಜವಾದ ಜ್ಞಾನ ಎಂದು ಅರಿತಿದ್ದರು. ಉಳುವವನೇ ಭೂಮಿಯ ಒಡೆಯ ಎಂದು ತೀರ್ಮಾನ ಮಾಡಿ 8 ಲಕ್ಷ ಜನರಿಗೆ ಜಮೀನು ದೊರಕಿಸಿಕೊಟ್ಟರು. ಇದರಿಂದ ಆ ಸಮುದಾಯದ ಜನರಿಗೆ ಸಾಮಾಜಿಕ ಸ್ಥಾನ-ಮಾನ ದೊರಕಿತು. ಅಲ್ಲದೆ, ಆರ್ಥಿಕ ಅಭಿ ವೃದ್ಧಿ, ಉದ್ಯೋಗ, ಸ್ವಾಭಿಮಾನದ ಬದುಕು ದೊರ ಕಿತು. ಜೀತ ವಿಮುಕ್ತಿ-ಪುನರ್ವಸತಿ ಯೋಜನೆಯನ್ನು ಜಾರಿಗೆ ತಂದು ಸ್ವಾವಲಂಬಿ ಜೀವನವನ್ನು ಕಲ್ಪಿಸಿ ಕೊಟ್ಟರು ಎಂದು ಸ್ಮರಿಸಿದರು.

ಜಾತಿ ಹಾಗೂ ಹಣ ಬಲವಿಲ್ಲದೆ 72 ಕ್ಕೂ ಹೆಚ್ಚು ಜನ ರನ್ನು ಚುನಾವಣಾ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು. ಅಭಿವೃದ್ಧಿ, ಸಾಮಾಜಿಕ ನ್ಯಾಯ, ಧ್ವನಿ ಇಲ್ಲದವರಿಗೆ ಧ್ವನಿಯಾ ಗಿದ್ದ ಅರಸು ಅವರು ಇಂದಿರಾಗಾಂಧಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿ ಯಾಗುವಂತೆ ಜಾರಿಗೆ ತಂದರು. ಆದರೆ, ಅವರಿಂದಲೇ ಅರಸು ಅಧಿಕಾರ ಕಳೆದುಕೊಂಡಿದ್ದು ವಿಪರ್ಯಾಸದ ಸಂಗತಿಯೂ ಹೌದು ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಬಿ-ಫಾರಂ ಕೊಡುವುದರಿಂದ ಆರಂಭವಾಗಿ ಮಂತ್ರಿ, ಮುಖ್ಯಮಂತ್ರಿ ಅಧಿಕಾರದ ಹಂಚಿಕೆಯೂ ಜಾತಿ ಆಧಾರದ ಮೇಲೆ ನಡೆಯುತ್ತಿವೆ. ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜನಪರ ಚಿಂತನೆಗಳು, ಆಲೋಚನೆ ಗಳನ್ನು ಹೊಂದಿರುವವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಜಾತಿ ಬಲ, ಆರ್ಥಿಕ ಬಲ ಪ್ರಮುಖ ಕಾರಣವಾಗಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕವನ್ನು ದೂರ ಮಾಡುವ ಪ್ರಕ್ರಿಯೆ ದೂರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮರ್ಥರು, ಜ್ಞಾನಿಗಳು, ಸಾಮಾಜಿಕ ಹೋರಾಟ ಗಾರರು ಅಧಿಕಾರ ಹಿಡಿಯುವುದು ಇಂದಿನ ರಾಜ ಕೀಯ ವ್ಯವಸ್ಥೆಯೊಳಗೆ ಕಷ್ಟವಾಗಿದೆ. ಹಾಗಾಗಿ ಬದ ಲಾವಣೆಯ ಸವಾಲನ್ನು ಸ್ವೀಕರಿಸಿ ಜನರು ಹೋರಾ ಟಕ್ಕೆ ಸಿದ್ಧರಾಗಬೇಕು. ಅದರಿಂದ ನವ ಸಮಾಜವನ್ನು ಸೃಷ್ಟಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮಮದಲ್ಲಿ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಮಾಜಿ ನಿರ್ದೇಶಕ ಪೆÇ್ರ.ಎನ್.ವಿ. ನರಸಿಂಹಯ್ಯ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್ ಅವರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿಜೆಸಿಎಂ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ್, ನಿವೃತ್ತ ಇಂಜಿನಿಯರ್ ಶಿವರಾಜ್, ಮನ್‍ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣಗೌಡ, ಅಖಿಲ ಕರ್ನಾಟಕ ವೀರಘಂಟೆ ಮಾಚಿದೇವ ಪ್ರತಿಷ್ಠಾನದ ಅಧ್ಯಕ್ಷ ಟಿ.ವೀರಣ್ಣ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ, ಸಿದ್ದಶೆಟ್ಟಿ ಇತರರಿದ್ದರು.

Translate »