7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ
Uncategorized

7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ

July 8, 2021

ಬೇಗೂರು, ಜು.7- ‘ದುಡಿಮೆಯ ನಂಬಿ ಬದುಕು… ಅದರಲೇ ದೇವರ ಹುಡುಕು… ವರನಟ ಡಾ.ರಾಜ್ ಕುಮಾರ್ ಅವರು ನಟಿಸಿರುವ ‘ಬಂಗಾರದ ಮನುಷ್ಯ’ ಚಿತ್ರದ ಈ ಹಾಡು ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಹಾಡಿನ ತಾತ್ಪರ್ಯದಂತೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿ ಗ್ರಾಮದ ರೈತ ಹೆಚ್.ಎಲ್.ಶಿವಪ್ಪ ಅವರು ಏಳೂವರೆ ತಿಂಗಳ ಅವಧಿ ಯಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬನ್ನು ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ.

ರೈತ ಹೆಚ್.ಎಲ್.ಶಿವಪ್ಪ ಅವರು 7 ಎಕರೆಯಲ್ಲಿ ಹನಿ ನೀರಾವರಿ ಮೂಲಕ ಎರಡು ತಳಿಯ ಕಬ್ಬು ಬೆಳೆದಿದ್ದಾರೆ. ಸದ್ಯ 3.5 ಎಕರೆ ಜಮೀನಿನಲ್ಲಿ 284 ಟನ್ ಬಿತ್ತನೆ ಕಬ್ಬನ್ನು ಬೆಳೆದು ಈಗಾ ಗಲೇ ಮಾರಾಟ ಮಾಡುವ ಮೂಲಕ 6.5 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಏಳೂವರೆ ತಿಂಗಳ ಅವಧಿಯಲ್ಲಿ ಬಿತ್ತ ನೆಗೆ ಕಬ್ಬು ಕಟಾವು ಮಾಡಿ ತೂಕ ಹಾಕಿ ದಾಗ 3.5 ಎಕರೆಗೆ 284ಟನ್ ಇಳುವರಿ ಬಂದಿರುವುದು ಖಚಿತವಾಗಿದೆ. ಇದ ರಿಂದ ಎಕರೆಗೆ ಸರಾಸರಿ 81ಟನ್ ಇಳು ವರಿ ಬಂದಂತಾಗಿದೆ. ಒಂದು ವೇಳೆ ಇದೇ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ 12 ತಿಂಗಳ ಬಳಿಕ ಮಾರಾಟ ಮಾಡಿದ್ದರೆ ಎಕರೆಗೆ 100 ಟನ್‍ಗೂ ಹೆಚ್ಚು ಇಳುವರಿ ಬರುತ್ತಿತ್ತು ಎಂದು ಅಂದಾಜಿಸಲಾಗಿದೆ.

ಒಣ ಭೂಮಿಯಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಬಿತ್ತನೆ ಬೀಜ ಹೊಸ ತಳಿ(ಸಿಓವಿಸಿ 18061) ನಾಟಿ ಮಾಡಿದ ಕಬ್ಬು ಇದಾಗಿದೆ. ಬೆಳೆಗೆ ಕಾರ್ಖಾನೆಯ ಬಯೋ ಉತ್ಪನ್ನಗಳು ಹಾಗೂ ಅಗತ್ಯ ರಸಾಯನಿಕ ಗೊಬ್ಬರ ಬಳಕೆ ಮಾಡಿದ್ದು, ಇಳುವರಿ ಬರಲು ಕಾರಣವಾಗಿದೆ. ಬೇಗೂರು ಭಾಗದ ಮಳೆ ಆಶ್ರಿತ ಪ್ರದೇಶದಲ್ಲಿ ನೀರಿನ ಅಭಾವದ ನಡುವೆಯೂ ರೈತ ಹೆಚ್. ಎಲ್.ಶಿವಪ್ಪ ಹನಿ ನೀರಾವರಿ ಮೂಲಕ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದು ಇತರೆ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.

ನಿರೀಕ್ಷೆಗೂ ಮೀರಿ ಕಬ್ಬು ಬೆಳೆದ ರೈತ ಶಿವಪ್ಪ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಾಲ್ಕುವರೇ ಅಡಿ ಅಂತರ ಬೇಸಾಯದಲ್ಲಿ ಕಬ್ಬು ನಾಟಿ ಮಾಡಿದ್ದು, ಇಳುವರಿ ಬರಲು ಕಾರಣ. ಅಂತರ ಬೇಸಾಯ, ಹನಿ ನೀರಾವರಿ ಹಾಗೂ ಯಂತ್ರಗಳ ಬಳಕೆ ಮೂಲಕ ಬೆಳೆ ತೆಗೆದಿದ್ದೇನೆ. ಜಿಲ್ಲೆಯಲ್ಲೇ ನಮ್ಮ ಜಮೀನಿ ನಲ್ಲಿ 1 ಎಕರೆಗೆ ಬಿತ್ತನೆ ಕಬ್ಬು 81 ಟನ್ ಬಂದಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Translate »