ಕಾಮನ್‍ವೆಲ್ತ್-2022 ಕ್ರೀಡಾಕೂಟಕ್ಕೆ ವೈಭವದ ತೆರೆ 22 ಚಿನ್ನಸೇರಿ ಭಾರತಕ್ಕೆ61 ಪದಕ
News

ಕಾಮನ್‍ವೆಲ್ತ್-2022 ಕ್ರೀಡಾಕೂಟಕ್ಕೆ ವೈಭವದ ತೆರೆ 22 ಚಿನ್ನಸೇರಿ ಭಾರತಕ್ಕೆ61 ಪದಕ

August 9, 2022

ಬರ್ಮಿಂಗ್‍ಹ್ಯಾಮ್, ಆ.8- ಇಲ್ಲಿನ ಅಲೆಗ್ಸಾಂಡರ್ ಕ್ರೀಡಾಂಗಣದಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ 22ನೇ ಆವೃತ್ತಿಯ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರ ವರ್ಣರಂಜಿತ ತೆರೆಬಿದ್ದಿದೆ. ಕೊನೆಯ ದಿನ ಭಾರತ ವಿವಿಧ ವಿಭಾಗ ಗಳಲ್ಲಿ ಒಟ್ಟು 6 ಪದಕಗಳನ್ನು ಗೆಲ್ಲುವ ಮೂಲಕ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕ ಸೇರಿದಂತೆ 61 ಪದಕಗಳನ್ನು ತನ್ನದಾಗಿಸಿಕೊಂಡು ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಸಿಂಧು ಚಿನ್ನದ ಬೇಟೆ: ಕೊನೆಯ ದಿನ ಬ್ಯಾಡ್ಮಿಂಟನ್ ಸಿಂಗಲ್ಸ್‍ನಲ್ಲಿ ಪಿವಿ ಸಿಂಧು ಕೆನಡಾದ ಎದುರಾಳಿಯ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಬ್ಯಾಡ್ಮಿಂಟನ್‍ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯಸೇನ್ ಹಾಗೂ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‍ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಚಿನ್ನದ ಪದಕ ಗೆಲ್ಲು ವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದಂತೆ ಆಸ್ಟ್ರೇಲಿ ಯಾದ ವಿರುದ್ಧ ನಡೆದ ಹಾಕಿ ಪುರುಷರ ವಿಭಾಗದ ಫೈನಲ್‍ನಲ್ಲಿ ಸೋಲು ಕಂಡ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿ ಕೊಂಡಿತು. ಟೇಬಲ್ ಟೆನಿಸ್‍ನ ಪುರುಷರ ಸಿಂಗಲ್ಸ್‍ನಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್‍ಗೆ ಕಂಚಿನ ಪದಕ ಬಂದಿದೆ.

ಒಟ್ಟಾರೇ ಭಾರತ ಪುರುಷರ ವಿಭಾಗ ದಲ್ಲಿ 13 ಚಿನ್ನ, 9 ಬೆಳ್ಳಿ, 13 ಕಂಚು ಸೇರಿ 35 ಪದಕಗಳನ್ನು ಗೆದ್ದರೆ, ಮಹಿಳಾ ವಿಭಾಗ ದಲ್ಲಿ 8 ಚಿನ್ನ, 6 ಬೆಳ್ಳಿ, 9 ಕಂಚು ಸೇರಿ 23 ಪದಕ ಹಾಗೂ ಜೋಡಿ ವಿಭಾಗದಲ್ಲಿ ತಲಾ ಒಂದೊಂದು ಚಿನ್ನ, ಬೆಳ್ಳಿ ಹಾಗೂ ಕಂಚಿ ನೊಂದಿಗೆ 3 ಪದಕಗಳನ್ನು ಗೆದ್ದಿದ್ದಾರೆ.
ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಒಟ್ಟು 178 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆತಿಥೇಯ ಇಂಗ್ಲೆಂಡ್ 176, ಕೆನಡಾ 92 ಪದಕಗಳೊಂದಿಗೆ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ. ಭಾರತ 61 ಪದಕಗಳನ್ನು ಗೆಲ್ಲುವ ಮೂಲಕ 4ನೇ ಸ್ಥಾನದಲ್ಲಿದೆ. ಉಳಿದಂತೆ ನ್ಯೂಜಿಲ್ಯಾಂಡ್ 49, ಸ್ಕಾಟಲ್ಯಾಂಡ್ 51, ನೈಜೀರಿಯಾ 35, ವೇಲ್ಸ್ 28, ದಕ್ಷಿಣ ಆಫ್ರಿಕಾ 27, ಮಲೇಷ್ಯಾ 23 ಪದಕಗಳನ್ನು ಗೆದ್ದು ಟಾಪ್ 10ರೊಳಗಿನ ಸ್ಥಾನದಲ್ಲಿದೆ.

ಜರೀನ್, ಶರತ್ ಕಮಲ್‍ಗೆ ಧ್ವಜ ಗೌರವ: ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಪಥ ಸಂಚಲನದಲ್ಲಿ ವಿಶ್ವ ಚಾಂಪಿಯನ್ ಹಾಗೂ ವನಿತೆಯರ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಹಾಗೂ ಟೇಬಲ್ ಟೆನಿಸ್ ತಂಡದ ನಾಯಕ ಅಜಂತಾ ಶರತ್ ಕಮಲ್ ಭಾರತದ ತ್ರಿವರ್ಣ ಧ್ವಜ ಹಿಡಿದು ಗೌರವ ಪಡೆದರು.

Translate »