ಮೈಸೂರು ದಸರಾ ಮಹೋತ್ಸವ-೨೦೨೨ ಇಂದು ಗಜಪಯಣ
ಮೈಸೂರು

ಮೈಸೂರು ದಸರಾ ಮಹೋತ್ಸವ-೨೦೨೨ ಇಂದು ಗಜಪಯಣ

August 7, 2022

ದಸರಾ ವಿಶೇಷ ಆಕರ್ಷಣೆ ಅಭಿಮನ್ಯು ನೇತೃತ್ವದ ಗಜಪಡೆಗೆ ವೀರನ ಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಕೆಯೊಂದಿಗೆ ಚಾಲನೆ

ಸಂಜೆ ವೇಳೆಗೆ ಲಾರಿಗಳ ಮೂಲಕ ೯ ಆನೆಗಳು ಮೈಸೂರು ಅರಣ್ಯ ಭವನಕ್ಕೆ ಆಗಮನ

ಗಜಪಡೆ ಪೋಸ್ಟರ್ ಬಿಡುಗಡೆ…: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗಳ ಮಾಹಿತಿಯನ್ನು ಒಳಗೊಂಡ ಪೋಸ್ಟರ್ ಅನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಶಾಸಕರಾದ ಹರ್ಷವರ್ಧನ್, ತನ್ವೀರ್ ಸೇಠ್, ಸಾ.ರಾ.ಮಹೇಶ್, ಮಂಜೇಗೌಡ, ಡಾ. ತಿಮ್ಮಯ್ಯ, ನಿಗಮ ಮಂಡಳಿಗಳ ಅಧ್ಯಕ್ಷರಾದ ರಘು ಕೌಟಿಲ್ಯ, ಕಾಪು ಸಿದ್ದಲಿಂಗಸ್ವಾಮಿ, ಪ್ರಭಾರ ಮೇಯರ್ ಸುನಂದಾ ಪಾಲನೇತ್ರ, ಡಿಸಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಎಫ್ ಕರಿಕಾಳನ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರು, ಆ.೬(ಎಂಕೆ)-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಾಳೆ(ಆ.೭) ಬೆಳಗ್ಗೆ ೯.೦೧ರಿಂದ ೯.೩೫ರೊಳಗೆ ಸಲ್ಲುವ ಕನ್ಯಾ ಲಗ್ನ ದಲ್ಲಿ ಗಜಪೂಜೆ ನೆರವೇರಿಸುವ ಮೂಲಕ ‘ಗಜಪಯಣ’ಕ್ಕೆ ಚಾಲನೆ ನೀಡಲಿದ್ದು, ಮೊದಲ ಹಂತದಲ್ಲಿ ೯ ಆನೆ ಗಳನ್ನು ಕರೆತರಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಹುಣಸೂರಿನ ವೀರನ ಹೊಸಹಳ್ಳಿಯಿಂದ ಗಜಪಯಣಕ್ಕೆ ಚಾಲನೆ ದೊರ ಕಲಿದ್ದು, ಈ ಬಾರಿ ದಸರಾ ಉತ್ಸವದಲ್ಲಿ ೧೪ ಆನೆಗಳು ಭಾಗವಹಿಸಲಿವೆ. ದಸರಾ ಹೈ-ಪವರ್ ಕಮಿಟಿ ಮೀಟಿಂಗ್ ನಲ್ಲಿ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆತರಬೇಕು ಎಂದು ಚರ್ಚಿಸಿ, ಮನವಿ ಮಾಡಲಾಗಿತ್ತು. ಆದರೆ ಇತ್ತೀಚಿನ ಸುಪ್ರೀಂಕೋರ್ಟ್ ಆದೇಶದನ್ವಯ ಆನೆಗಳು ಸುಮಾರು ೧೫ ಕಿಲೋ ಮೀಟರ್ ದೂರವಷ್ಟೇ ಕಾಲ್ನಡಿಗೆಯಲ್ಲಿ ಸಾಗಬೇಕು ಎಂದು ನಿರ್ಬಂಧ ವಿಧಿಸಲಾಗಿದೆ. ಮೈಸೂರು ಅರಮನೆವರೆಗೆ ಸುಮಾರು ೭೬ ಕಿ.ಮೀಟರ್ ದೂರ ಇರುವುದರಿಂದ ಎಂದಿ ನಂತೆ ವಾಹನಗಳನ್ನು ಬಳಸಿ ಕರೆತರಲಾಗುವುದು. ಆ.೧೦ರಂದು ಮೈಸೂರು ಅರಮನೆ ಆವರಣದಲ್ಲಿ ಗಜಪಡೆಯ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ೧೪ ಆನೆಗಳ ಪೈಕಿ ೩ ಆನೆಗಳು ಶ್ರೀರಂಗ ಪಟ್ಟಣ ಹಾಗೂ ಚಾಮರಾಜನಗರ ದಸರಾ ಉತ್ಸವ ದಲ್ಲಿ ಭಾಗವಹಿಸಲಿವೆ. ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸರ್ಕಾರದಿಂದ ತಲಾ ೧ ಕೋಟಿ ರೂ. ಅನುದಾನ ನೀಡಲು ನಿರ್ಧ ರಿಸಲಾಗಿದೆ. ಮೈಸೂರುದಸರಾ ಆಚರಣೆಯಲ್ಲಿ ಅರಮನೆ ಆವರಣದಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಗಳ ಸುಮಾರು ೫ ಕೋಟಿ ರೂ. ಖರ್ಚನ್ನು ಅರಮನೆ ಮಂಡಳಿಯೇ ಭರಿಸಬೇಕು. ಹೊರಗಡೆ ನಡೆಯುವ ಕಾರ್ಯಕ್ರಮಗಳಿಗೆ ಮುಡಾದಿಂದ ೧೦ ಕೋಟಿ ರೂ. ನೀಡಬೇಕು ಎಂದು ತಿರ್ಮಾನಿಸಿದ್ದು, ಉಳಿದ ಖರ್ಚಿನ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.

೧೬ ಉಪ ಸಮಿತಿ: ದಸರಾ ಆಚರಣೆ ಹಿನ್ನೆಲೆಯಲ್ಲಿ ೧೬ ಉಪ ಸಮಿತಿಗಳ ರಚನೆ ಮಾಡಿದ್ದು, ಇವುಗಳಲ್ಲಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಇರಲಿದ್ದಾರೆ. ಕಮಿಟಿಯಲ್ಲಿ ಯಾರಿದ್ದಾರೆ ಎಂಬುದನ್ನು ಸದ್ಯದಲ್ಲಿಯೇ ತಿಳಿಸಲಾಗುವುದು. ಅಲ್ಲದೆ ಸ್ಥಳೀಯ ಶಾಸಕರು, ಸಂಸದರು, ನಿಗಮ ಮಂಡಳಿ ಸದಸ್ಯರುಗಳನ್ನು ಉಪ ಸಮಿತಿಗಳಲ್ಲಿ ಸೇರ್ಪಡೆಗೊಳಿಸಬೇಕು ಎಂಬ ಸಲಹೆಗಳು ಕೇಳಿ ಬಂದಿದ್ದು, ಮತ್ತೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸಾಂಸ್ಕೃತಿಕ ಹಾಗೂ ಅದ್ದೂರಿ ದಸರಾ ಆಚರಣೆ: ಈ ವರ್ಷದ ದಸರಾ ಆಚರಣೆಯನ್ನು ಸಾಂಸ್ಕೃತಿಕ ಹಾಗೂ ಅದ್ದೂರಿ ಆಚರಣೆಗೆ ನಿರ್ಧರಿಸಲಾಗಿದೆ. ಯುವ ದಸರಾ, ರೈತ ದಸರಾ ಇನ್ನಿತರೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡಲು ತಿರ್ಮಾನಿಸಲಾಗಿದೆ. ೧೫ ದಿನಗಳಿಗೂ ಮುಂಚಿತವಾಗಿಯೇ ವಸ್ತುಪ್ರದರ್ಶನ ಉದ್ಘಾಟಿಸಲಾಗುವುದು. ೭೫ನೇ ಸ್ವಾತಂತ್ರö್ಯ ಮಹೋತ್ಸವ ಹಿನ್ನೆಲೆ ಪ್ರವಾಸೋಧ್ಯಮವನ್ನು ಗಮನದಲ್ಲಿಟ್ಟುಕೊಂಡು ದಸರಾ ಮಹೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಅನುಸರಿಸಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ದಸರಾ ಉದ್ಘಾಟಕರ ಆಯ್ಕೆ ಸಿಎಂ ನಿರ್ಧಾರಕ್ಕೆ: ಪ್ರತಿ ವರ್ಷ ದಸರಾ ಉದ್ಘಾಟಕರ ಕುರಿತು ಸಲಹೆಗಳು ಕೇಳಿ ಬರುತ್ತಿದ್ದವು. ಆದರೆ ಈ ವರ್ಷ ಇಲ್ಲಿಯವರೆಗೆ ಒಂದೇ ಒಂದು ಸಲಹೆಯೂ ಬಂದಿಲ್ಲ. ಅಲ್ಲದೆ ಉದ್ಘಾಟಕರ ಆಯ್ಕೆ ವಿಚಾರವನ್ನು ಮುಖ್ಯಮಂತ್ರಿಗಳಿಗೆ ಬಿಡಲಾಗಿದೆ. ಯಾರಾದರೂ ಸಲಹೆ ನೀಡಿದರೆ ಅದನ್ನು ಸಿಎಂ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಹಾಗೆಯೇ ದಸರಾ ಮುಗಿದ ಕೂಡಲೇ ಮೊದಲಿನಂತೆ ಲೆಕ್ಕ ನೀಡಲಾಗುವುದು. ಯಾವುದೇ ಗೊಂದಲ ಉಂಟಾಗದAತೆ ನಿರ್ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸದ್ಯದಲ್ಲಿ ಮೇಯರ್ ಕುರಿತು ನಿರ್ಧಾರ…: ಆ.೯ಕ್ಕೆ ಮೈಸೂರು ಮೇಯರ್ ಸ್ಥಾನದ ಮೀಸಲಾತಿ ಪ್ರಕಟ ಆಗಲಿದೆ. ಈ ಬಾರಿ ಮೈಸೂರು ಮೇಯರ್ ಯಾರಾಗಬೇಕು ಎಂಬುದು ಮುಂದೆ ತೀರ್ಮಾನ ಆಗುತ್ತದೆ ಎಂದು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಇರುವ ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್‌ನಿಂದ ಮೇಯರ್ ಆಯ್ಕೆ ಆಗಬೇಕಿದೆ. ಈ ಕುರಿತು ಸದ್ಯದಲ್ಲಿಯೇ ಮಾಹಿತಿ ನೀಡಲಾಗುವುದು. ದಸರಾ ವೇಳೆ ಹೊಸ ಮೇಯರ್ ಮತ್ತು ಉಪ ಮೇಯರ್ ಇರಲಿದ್ದಾರೆ ಎಂದರು.

Translate »