ಜಗದೀಪ್ ಧನಕರ್ ಭಾರತದ ನೂತನ ಉಪ ರಾಷ್ಟçಪತಿ
ಮೈಸೂರು

ಜಗದೀಪ್ ಧನಕರ್ ಭಾರತದ ನೂತನ ಉಪ ರಾಷ್ಟçಪತಿ

August 7, 2022

ನವದೆಹಲಿ, ಆ.೬-ಭಾರತದ ಉಪ ರಾಷ್ಟçಪತಿಯಾಗಿ ಜಗದೀಪ್ ಧನಕರ್ ಆಯ್ಕೆ ಯಾಗಿದ್ದಾರೆ. ಶನಿವಾರ ನಡೆದ ಚುನಾ ವಣೆಯಲ್ಲಿ ಧನಕರ್ ೧೪ನೇ ಉಪ ರಾಷ್ಟçಪತಿ ಯಾಗಿ ಭರ್ಜರಿ ಜಯ ಸಾಧಿಸಿದ್ದಾರೆ.

ಒಟ್ಟು ೭೮೦ ಸಂಸದರ ಪೈಕಿ ೭೨೫ ಸಂಸ ದರು ಮತ ಚಲಾಯಿಸಿದ್ದರು. ಇದರೊಂದಿಗೆ ಶೇ.೯೩ರಷ್ಟು ಮತದಾನವಾಗಿದ್ದು, ೫೦ಕ್ಕೂ ಹೆಚ್ಚು ಸಂಸದರು ಮತದಾನದಿಂದ ದೂರ ಉಳಿದರು. ಎನ್‌ಡಿಎ ಅಭ್ಯರ್ಥಿಯಾಗಿದ್ದ ಧನಕರ್ ೫೨೮
ಮತಗಳನ್ನು ಪಡೆದರೆ, ಮಾರ್ಗರೇಟ್ ಆಳ್ವ ೧೮೨ ಮತಗಳನ್ನು ಪಡೆದರು. ಧನಕರ್ ೩೪೬ ಅಧಿಕ ಮತಗಳೊಂದಿಗೆ ಜಯ ಸಾಧಿಸಿದ್ದಾರೆ. ೧೫ ಮತಗಳು ಅಸಿಂಧುವಾದವು.

ವ್ಯಾಪಕ ಬೆಂಬಲ: ಜಗದೀಪ್ ಧನಕರ್ ಅವರಿಗೆ ಹಲವಾರು ಎನ್‌ಡಿಎ ಹೊರತಾದ ಪಕ್ಷಗಳು ಬೆಂಗಲಿಸಿದ್ದವು. ನವೀನ್ ಪಟ್ನಾಯಕ್ ಅವರ ಬೀಜು ಜನತಾದಳ, ಜನನ್ಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್, ಮಾಯಾವತಿಯ ಭೋಜನ ಸಮಾಜ ಪಕ್ಷ ಚಂದ್ರಪ್ರಭಾನಾಯ್ಡು ಅವರ ತೆಲುಗುದೇಶಂ ಪಕ್ಷ, ಜಾರ್ಕಂಡ್ ಮುಕ್ತಿ ಮೋರ್ಚಾ ಅಕಾಲಿ ದಳ ಮತ್ತು ಶಿವಸೇನೆಯ ಏಕ್‌ನಾಥ್ ಶಿಂಧೆ ಬಣ ಬೆಂಬಲಿಸಿದ್ದವು. ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ತೆಲಂಗಾಣ ರಾಷ್ಟç ಸಮಿತಿ, ಆಮ್‌ಆದ್ಮಿ ಪಕ್ಷ ಹಾಗೂ ಶಿವಸೇನೆಯ ಉದ್ದವ್‌ಠಾಕ್ರೆ ಬಣದ ೯ ಸಂಸದರು ಬೆಂಬಲಿಸಿದ್ದರು. ಜಗದೀಪ್ ಧನಕರ್ ಜಾಟ್ ಸಮುದಾಯಕ್ಕೆ ಸೇರಿದವರು. ಇವರು ೧೯೫೧ರಲ್ಲಿ ರಾಜಸ್ಥಾನದ ಇತಾನ ಎಂಬ ಪುಟ್ಟ ಗ್ರಾಮದಲ್ಲಿ ರೈತ ಕುಟುಂಬವೊAದರಲ್ಲಿ ಜನಿಸಿದರು.

ವೃತ್ತಿಯಲ್ಲಿ ವಕೀಲರಾಗಿದ್ದ ಜಗದೀಪ್ ಧನಕರ್ ೧೯೮೯ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ತಮ್ಮ ಶಾಲಾ ಶಿಕ್ಷಣವನ್ನು ಚಿತ್ತೋರಗಡದ ಸೈನಿಕ ಶಾಲೆಯಲ್ಲಿ ಮುಗಿಸಿದರು. ಭೌತಶಾಸ್ತçದಲ್ಲಿ ಪದವಿ ಪಡೆದಿದ್ದರು. ರಾಜಸ್ತಾನದ ಪ್ರಮುಖ ವಕೀಲರಲ್ಲಿ ಒಬ್ಬರಾಗಿದ್ದರು. ರಾಜಸ್ತಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡರಲ್ಲೂ ನ್ಯಾಯವಾದಿಯಾಗಿ ವೃತ್ತಿ ಸಾಧನೆ ಮಾಡಿದ್ದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ರಾಜಸ್ತಾನ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿದ್ದರು. ರಾಜಾಸ್ತಾನದ ಜುಂಜೂನು ಕ್ಷೇತ್ರದಿಂದ ಲೋಕಸಭೆಗೆ ೧೯೮೯ರಲ್ಲಿ ಆಯ್ಕೆಯಾಗಿ ಅಂದಿನ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೩-೯೮ರ ನಡುವೆ ರಾಜಾಸ್ತಾನದ ಅಜ್ಮೀರ್ ಜಿಲ್ಲೆಯ ಕಿಶಾನ್ ಗರ್ಗ್ ಕ್ಷೇತ್ರದ ಶಾಸಕರಾಗಿದ್ದರು. ಆರಂಭದಲ್ಲಿ ಜನತಾ ದಳ ಬಳಿಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಇವರು, ೨೦೦೮ರಲ್ಲಿ ಬಿಜೆಪಿ ಸೇರಿದ್ದರು.

೨೦೧೯ ಜುಲೈನಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಧನಕರ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೆ ನಿರಂತರ ಭಿನ್ನಾಭಿಪ್ರಾಯದ ಮೂಲಕವೇ ಶುದ್ಧಿಯಾಗಿದ್ದರು. ಇವರನ್ನು ಉಪ ರಾಷ್ಟçಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಕೃಷಿ ಹಿನ್ನೆಲೆಯನ್ನು ಉಲ್ಲೇಖಿಸಿ ಆಯ್ಕೆ ಮಾಡಲಾಗಿತ್ತು. ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ, ಇವರನ್ನು ಅಭ್ಯರ್ಥಿಯಾಗಿ ಘೋಷಿಸುವ ವೇಳೆ ಕಿಸಾನ್ ಪುತ್ರ ಎಂದೇ ಕರೆದಿದ್ದರು. ಮೂರು ದಶಕಗಳಿಗೂ ಹೆಚ್ಚು ಕಾಲ ಧನಕರ್, ಸಾರ್ವಜನಿಕ ಜೀವನದಲ್ಲಿದ್ದಾರೆ. ಉಪ ರಾಷ್ಟçಪತಿಗಳ ಅಧಿಕೃತ ನಿವಾಸ ನವದೆಹಲಿಯ ಮೌಲಾನಾ ಆಜಾದ್ ರಸ್ತೆಯಲ್ಲಿದೆ. ಇದನ್ನು ಉಪ ರಾಷ್ಟçಪತಿ ಭವನವೆಂದೇ ಕರೆಯಲಾಗುತ್ತದೆ.

Translate »