ಕೊಡಗಲ್ಲಿ ಮಳೆಯೊಂದಿಗೆ ನೆರೆ ಹಾವಳಿ
ಮೈಸೂರು

ಕೊಡಗಲ್ಲಿ ಮಳೆಯೊಂದಿಗೆ ನೆರೆ ಹಾವಳಿ

August 7, 2022

 ಕುಸಿದು ಬಿದ್ದ ರಸ್ತೆಗಳು, ಸಂಗಮ ಮುಳುಗಡೆ
 ಧರೆಗುರುಳಿದ ಮರಗಳು, ಕಗ್ಗತ್ತಲಿನಲ್ಲಿ ಗ್ರಾಮಗಳು
ಸೋಮವಾರಪೇಟೆಯಲ್ಲಿ ಹಲವು ಮನೆಗಳಿಗೆ ಹಾನಿ
 ಜಿಲ್ಲೆಯಾದ್ಯಂತ ‘ರೆಡ್ ಅಲರ್ಟ್’ ಘೋಷಣೆ

ಮಡಿಕೇರಿ,ಆ.೬- ಕೊಡಗು ಜಿಲ್ಲೆಯಾದ್ಯಂತ ಮಳೆ ಆರ್ಭಟಿಸುತ್ತಿದ್ದು, ಅನಾಹುತಗಳು ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತ ವಾಗಿದೆ. ಧಾರಾಕಾರ ಮಳೆಯಿಂದ ಕಾವೇರಿ ನದಿಯಲ್ಲಿ ಪ್ರವಾಹ ಉಕ್ಕೇರಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮರಗಳು ಬುಡಮೇಲಾಗಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿದೆ. ದುರಸ್ತಿ ಕಾರ್ಯಕ್ಕೆ ಗಾಳಿ ಮಳೆ ಅಡ್ಡಿಯಾಗಿದೆ.

ಭೂ ಕುಸಿತ, ಪ್ರವಾಹದಿಂದ ತತ್ತರಿಸಿರುವ ಚೆಂಬು, ಸಂಪಾಜೆ, ಮದೆ ಗ್ರಾಮ ವ್ಯಾಪ್ತಿ ಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ದಬ್ಬಡ್ಕ, ಊರುಬೈಲು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕೂಡ ಕಡಿದುಕೊಂಡಿದ್ದು, ಗ್ರಾಮಗಳಲ್ಲಿ ಟೆಲಿಫೋನ್ ನೆಟ್ವರ್ಕ್ ಕೂಡ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ.

ಕಾವೇರಿ ಪ್ರವಾಹ: ಭಾಗಮಂಡಲ ವ್ಯಾಪ್ತಿ ಯಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯು ತ್ತಿರುವ ಪರಿಣಾಮ ಸತತ ಎರಡನೇ ದಿನವೂ ಸಂಗಮ ಮುಳುಗಡೆಯಾಗಿದೆ. ಭಾಗ ಮಂಡಲ-ಅಯ್ಯAಗೇರಿ ರಸ್ತೆಯ ಮೇಲೆ ಪ್ರವಾಹ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಮೂರ್ನಾಡು-ನಾಪೋಕ್ಲು ರಸ್ತೆ, ನಾಪೋಕ್ಲು-ಬೊಳಿಬಾಣೆ ರಸ್ತೆಗಳಿಗೆ ಕಾವೇರಿ ನದಿ ಪ್ರವಾಹದ ನೀರು ನುಗ್ಗಿದ್ದು, ವಾಹನ ಸಂಚಾರ ಸ್ಥಗಿತ ಗೊಂಡಿದೆ. ನಾಪೋಕ್ಲು-ಚೆರಿಯ ಪರಂಬು-ಕಲ್ಲುಮೊಟ್ಟೆ ರಸ್ತೆ ಸಂಪರ್ಕವೂ ಬಂದ್ ಆದ ಸ್ಥಿತಿಯಲ್ಲಿದೆ.

ಕುಸಿದು ಬಿದ್ದ ರಸ್ತೆ: ಹೊದವಾಡ-ಕೊಟ್ಟ ಮುಡಿ ಮೂಲಕ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿದೆ. ರಸ್ತೆಯ ಅರ್ಧ ಭಾಗ ಕೊಚ್ಚಿ ಹೋಗಿದ್ದು, ಲೋಕೋಪಯೋಗಿ ಇಲಾಖೆ ಮೂಲಕ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಈ ರಸ್ತೆಯಲ್ಲಿ ಲಘು ವಾಹನಗಳ ಓಡಾಟಕ್ಕೆ ಮಾತ್ರವೇ ಅವಕಾಶ ನೀಡಲಾಗುತ್ತಿದ್ದು, ಸ್ಥಳದಲ್ಲಿ ಎಂ. ಸ್ಯಾಂಡ್ ಮೂಟೆಗಳನ್ನು ಅಳವಡಿಸಿ ರಸ್ತೆಗೆ ಮತ್ತಷ್ಟು ಹಾನಿಯಾಗದಂತೆ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ.

ಈ ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾ ಗಿದ್ದು, ಪರ್ಯಾಯ ಮಾರ್ಗವಾಗಿ ಹೊದ ವಾಡ-ಬೊಳಿಬಾಣೆ ಮೂಲಕ ನಾಪೋಕ್ಲು ಹಾಗೂ ಮೂರ್ನಾಡು ಕಡೆಗಳಿಗೆ ಸಂಚರಿ ಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ರಸ್ತೆ ಕುಸಿದ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ, ತಹಸೀಲ್ದಾರ್ ಪಿ.ಎಸ್.ಮಹೇಶ್, ಲೋಕೋ ಪಯೋಗಿ ಇಲಾಖೆ ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಹಾನಿ: ಸೋಮವಾರಪೇಟೆ ವ್ಯಾಪ್ತಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಹಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಹಾನಗಲ್ ಚಂದಮಕ್ಕಿ ಗ್ರಾಮ ನಿವಾಸಿ ಲಕ್ಷ್ಮಣ್ ಹಾಗೂ ಮಾಲಂಬಿ ಕೂಡು ರಸ್ತೆಯ ಲಕ್ಷ್ಮಮ್ಮ ಮುತ್ತಣ್ಣ ಎಂಬವರ ಮನೆ ಕುಸಿದು ಬಿದ್ದಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಕುಟುಂಬಗಳ ಸ್ಥಳಾಂತರ: ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ತೋರ ಗ್ರಾಮದಲ್ಲಿ ೨೦೧೯ರಲ್ಲಿ ಮಲೆಪಾರೆ ಬೆಟ್ಟ ಕುಸಿದು ೧೦ ಮಂದಿ ಸಾವನ್ನಪ್ಪಿದ್ದರು. ಈ ಪ್ರದೇಶದಲ್ಲಿ ಭೂಮಿ ಬಿರುಕುಗಳಿದ್ದು, ಭಾರೀ ಮಳೆ ಮುಂದು ವರೆದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ನೆಲೆಸಿದ್ದ ೧೫ ಕುಟುಂಬದ ೪೧ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಮೀಪದ ತೋಮರ ಸರಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ೪೧ ಮಂದಿಗೆ ಅಲ್ಲಿ ಆಶ್ರಯ ನೀಡಲಾಗಿದೆ.

 

Translate »