ಚಾಲಕನಿಲ್ಲದೆ ಚಲಿಸಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ
ಕೊಡಗು

ಚಾಲಕನಿಲ್ಲದೆ ಚಲಿಸಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

November 5, 2018

ಸೋಮವಾರಪೇಟೆ:  ರಸ್ತೆಯಲ್ಲಿ ನಿಲುಗಡೆ ಯಾಗಿದ್ದ ಲಾರಿಯೊಂದು ದಿಢೀರ್ ಚಲಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಸಂಭವಿಸಿದ್ದು, ಅದೃಷ್ಟ ವಶಾತ್ ದುರಂತ ತಪ್ಪಿದೆ.

ಇಲ್ಲಿನ ಮಡಿಕೇರಿ ರಸ್ತೆಯ ವರ್ಕ್‍ಶಾಪ್ ಬಳಿ ವಿಕ್ಟರ್ ಎಂಬವರು ತಮ್ಮ ಲಾರಿಯನ್ನು ನಿಲ್ಲಿಸಿ ವರ್ಕ್‍ಶಾಪ್ ನೊಳಗೆ ತೆರಳಿದ್ದರು. ಈ ಸಂದರ್ಭ ಏಕಾಏಕಿ ಮುಂಭಾಗ ಚಲಿಸಿದ ಲಾರಿ ಮುಂದಕ್ಕೆ ಹೋಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕಂಬ ತುಂಡಾದ್ದರಿಂದ ವರ್ಕ್ ಶಾಪ್‍ಗೆ ಸಂಪರ್ಕ ನೀಡಲಾಗಿದ್ದ ವಯರ್‍ಗಳೂ ತುಂಡಾಗಿವೆ. ಘಟನೆ ನಡೆದ ಸಂದರ್ಭ ರಸ್ತೆಯಲ್ಲಿ ಇತರ ವಾಹನಗಳ ಸಂಚಾರ ಇಲ್ಲದ್ದರಿಂದ ಭಾರೀ ದುರಂತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

Translate »