ವಿರಾಜಪೇಟೆ: ಇತಿಹಾಸ ನಿರ್ಮಿ ಸಿರುವ ಕನ್ನಡ ನಾಡು ನುಡಿ ಭಾಷೆಯನ್ನು ಉಳಿಸಲು ಕನ್ನಡಿಗರೆಲ್ಲ ಒಂದಾಗಿ ಗಡಿ ಭಾಗದಲ್ಲಿ ಕನ್ನಡದ ನೆಲವನ್ನು ಉಳಿಸ ಬೇಕಾಗಿದೆ ಎಂದು ವಕೀಲರು ಹಾಗೂ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು.
63ನೇ ಕನ್ನಡ ರಾಜ್ಯೋತ್ಸವದ ಅಂಗ ವಾಗಿ ವಿರಾಜಪೇಟೆ ಕರ್ನಾಟಕ ಸಂಘ ಸ್ಥಳೀಯ ಪುರಭವನದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿದ ಅವರು, ಶಿಲ್ಪ ಕಲೆಯ ಬೀಡು, ಕನ್ನಡ ಭೂಮಿಯನ್ನು ರಕ್ಷಿಸಲು ಪ್ರತಿ ಯೊಬ್ಬರು ಮುಂದಾಗಬೇಕು. ಹಿಂದೆ ದಿ.ಡಿ.ಜೆ.ಪದ್ಮನಾಭ ಅವರು ಗಡಿ ಭಾಗ ವಾದ ವಿರಾಜಪೇಟೆಯಲ್ಲಿ ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘದ ಕಟ್ಟಡವನ್ನು ಕಟ್ಟಿ ದರು. ಅಂದಿನಿಂದ ಸಂಘದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ಗಡಿಭಾಗದಲ್ಲಿ ರುವ ಇತರ ಭಾಷಿಗರಿಗೆ ಕನ್ನಡವನ್ನು ಕಲಿಸುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿದೆ ಎಂದರು.
ಇದೇ ವೇದಿಕೆಯಲ್ಲಿ ಹರದಾಸ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವದ ನೆನಪಿ ಗಾಗಿ ರಂಗಭೂಮಿ ಪ್ರತಿಷ್ಠಾನದ ವತಿಯಿಂದ ಅಮರ ಕಾವ್ಯ ‘ಹರದಾಸ ಕವಿ ಕಾವ್ಯ ಹಾಗೂ ಸಂಗೀತ ನಿರೂಪಣಾ ಕಾರ್ಯ ಕ್ರಮ’ದಲ್ಲಿ ಅಡ್ಡಂಡ ಸಿ.ಕಾರ್ಯಪ್ಪ ಮಾತ ನಾಡಿ, ಕೊಡಗಿನ ಮೇರು ಕವಿ ಹರದಾಸ ಅಪ್ಪಚ್ಚಕವಿ ಬರೆದಂತ ನಾಟಕ, ಕವಿ ಹರ ದಾಸ ಅಪ್ಪಚ್ಚಕವಿಯ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಕೊಡವರು ಕೂಡ ಕನ್ನ ಡದ ಅವಿಬಾಜ್ಯ ಅಂಗ, 1956ರಲ್ಲಿ ರಾಜ್ಯ ಪುನರ್ರಚನೆಯಾದಾಗ ಮೈಸೂರು ರಾಜ್ಯದ ಪ್ರಥಮ ಸ್ಪೀಕರ್ ಆಗಿ ಕೊಡಗಿನ ಬಿ.ಎಲ್. ಕುಶಾಲಪ್ಪ ಆಯ್ಕೆಯಾಗಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿ ನಲ್ಲಿ ಮುಂದಿನ ದಿನದಲ್ಲಿ ಹೆಚ್ಚು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದರು. ವೇದಿಕೆಯಲ್ಲಿ ವಿರಾ ಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಂಚೀರ ನಾಣಯ್ಯ, ಕರ್ನಾಟಕ ಸಂಘದ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ ಹಾಗೂ ಸಮಿತಿಯ ಎಲ್ಲಾ ಸದ ಸ್ಯರುಗಳು ಉಪಸ್ಥಿತರಿದ್ದರು. ಚೇನಂಡ ಸುರೇಶ್ ನಾಣಯ್ಯ ಸ್ವಾಗತಿಸಿ ವಂದಿಸಿದರು.