ಮಡಿಕೇರಿ,ಮಾ.7-ಆರ್‍ಟಿಸಿ ವರ್ಗಾ ವಣೆ ಅರ್ಜಿಯನ್ನು ಸಕಾಲದಲ್ಲಿ ವಿಲೇ ವಾರಿ ಮಾಡದೆ ಅಧಿಕಾರಿಗಳು ಸತಾಯಿ ಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊ ಬ್ಬರು ಮಡಿಕೇರಿ ತಾಲೂಕು ಕಚೇರಿಯಲ್ಲಿ ಏಕಾಂಗಿಯಾಗಿ ಧರಣಿ ನಡೆಸಿದರು.
ಅಧಿಕಾರಿಗಳು ತಿಂಗಳಾನುಗಟ್ಟಲೇ ಅಲೆದಾಡಿಸಿ ಆ ನಂತರ ವಿನಾಕಾರಣ ಅರ್ಜಿಯಲ್ಲಿ ನ್ಯೂನತೆಗಳಿವೆ ಎಂದು ಕುಂಟು ನೆಪ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಚೇಲಾವರ ಗ್ರಾಮದ ಬಾಚಮಂಡ ಲೋಕೇಶ್ ಆರೋಪಿಸಿದರು.
ಕಳೆದ ಜುಲೈನಿಂದ ತಾಲೂಕು ಕಚೇರಿಗೆ ತನ್ನ ಕುಟುಂಬದ ಆಸ್ತಿಯ ಆರ್‍ಟಿಸಿ ವರ್ಗಾವಣೆ ಮಾಡಿಸಿಕೊಳ್ಳಲು ಅಲೆದಾ ಡುತ್ತಿದ್ದು ದಾಖಲೆಗಳು ಗಣಕಯಂತ್ರದ ಶಾಖೆಗೆ ರವಾನೆಯಾಗಿದೆ. ಆದರೆ ಅಧಿ ಕಾರಿಗಳು ದಾಖಲೆ ನೀಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ನನ್ನ ಅರ್ಜಿ ಮತ್ತು ದಾಖಲೆಗಳು ಇಲ್ಲಿಯವರೆಗೆ ತಹಶೀಲ್ದಾರರ ಟೇಬಲ್‍ಗೆ ತಲುಪಿಲ್ಲ ವೆಂದು ಅವರು ಅಸಹಾಯಕತೆ ವ್ಯಕ್ತಪಡಿ ಸಿದರು. ಈ ಸಂದರ್ಭ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಧರಣಿ ಕುಳಿತ ಬಗ್ಗೆ ಲೋಕೇಶ್ ಅವರನ್ನು ಪ್ರಶ್ನಿಸಿ ತಹಶೀಲ್ದಾರ್ ಅವರ ಕಚೇರಿಗೆ ಬರು ವಂತೆ ತಿಳಿಸಿದರು.
ನಂತರ ತಹಶೀಲ್ದಾರ್ ಬಳಿ ತಮಗಾಗಿ ರುವ ಅನ್ಯಾಯದ ಕುರಿತು ವಿವರಿಸಿದ ಲೋಕೇಶ್ ಕೆಳಗಿನ ಅಧಿಕಾರಿಗಳು ದರ್ಪ ದಿಂದ ವರ್ತಿಸುತ್ತಿದ್ದಾರೆ. ಕಚೇರಿಗೆ ಅಲೆ ದಾಡಿ ಸಾಕಾಗಿದೆ ಎಂದು ಬೇಸರ ವ್ಯಕ್ತಪ ಡಿಸಿದರು. ಕಡತವನ್ನು ತರಿಸಿಕೊಂಡ ತಹಶೀಲ್ದಾರರು ಅರ್ಜಿಯಲ್ಲಿರುವ ಕೆಲವು ನ್ಯೂನತೆಗಳನ್ನು ಮನವರಿಕೆ ಮಾಡಿ ಕೊಟ್ಟರು. ಇದನ್ನು ಸರಿಪಡಿಸಿದಲ್ಲಿ ಅರ್ಜಿ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು.
ಸತಾಯಿಸುವ ಅಧಿಕಾರಿಗಳು: ಪ್ರತಿಯೊಂದು ಅರ್ಜಿಗಳ ವಿಲೇವಾರಿ ಯಲ್ಲೂ ವಿಳಂಬ ಧೋರಣೆ ತೋರಲಾ ಗುತ್ತಿದೆ. ಕೆಲವು ಅಧಿಕಾರಿಗಳು ಸಹನೆ ಯಿಂದ ವರ್ತಿಸುತ್ತಿಲ್ಲ. ಕಾರಣ ನೀಡದೆ ಕಡತಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶ ಗಳಿಂದ ಬರುವ ಬಡ ವರ್ಗದ ಪಾಡು ಹೇಳ ತೀರದಾಗಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದರು.