ಸಂವಿಧಾನ ವಿರುದ್ಧದ ಕಾನೂನನ್ನು ಒಗ್ಗಟ್ಟಿನಿಂದ ವಿರೋಧಿಸಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
ಚಾಮರಾಜನಗರ

ಸಂವಿಧಾನ ವಿರುದ್ಧದ ಕಾನೂನನ್ನು ಒಗ್ಗಟ್ಟಿನಿಂದ ವಿರೋಧಿಸಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

March 8, 2020

ಚಾಮರಾಜನಗರ, ಮಾ.7(ಎಸ್‍ಎಸ್)- ಸಂವಿಧಾನ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ಸಂವಿಧಾನಕ್ಕೆ ವಿರುದ್ಧವಾಗಿರುವ ಯಾವುದೇ ಕಾನೂನು ಬಂದರೂ ಅದನ್ನು ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂವಿಧಾನ ಪ್ರಚಾರ ಸಮಿತಿ ವೇದಿಕೆ, ಇಸ್ಲಾಹುಲ್ ಮುಸ್ಲೀ ಮಿನ್ ಕಮಿಟಿ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಎನ್‍ಆರ್‍ಪಿ, ಸಿಎಎ ಹಾಗೂ ಎನ್‍ಆರ್ ಸಿಯಿಂದ ದೇಶದಲ್ಲಿರುವ ಕಡು ಬಡವರಿಗೆ, ಬಡ ರೈತರಿಗೆ, ದೀನ ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ತೊಂದರೆ ಇದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಒಗ್ಗಟ್ಟಾಗಿ ವಿರೋಧಿಸಬೇಕು. ಈ ಮೂಲಕ ದೇಶವನ್ನು ಉಳಿಸಿಕೊಳ್ಳಲು ಪ್ರಯತ್ನಿಸ ಬೇಕಾಗಿದೆ ಎಂದು ಸಲಹೆ ನೀಡಿದರು.
ಎನ್‍ಆರ್‍ಪಿ, ಸಿಎಎ, ಎನ್‍ಆರ್‍ಸಿ ಯಿಂದ ಬರೀ ಮುಸ್ಲಿಮರಿಗೆ ತೊಂದರೆ ಇದೆ ಎಂದು ಕೆಲವು ಜನ ಹೇಳುತ್ತಿದ್ದಾರೆ. ಇದು ಸುಳ್ಳು. ಇದರಿಂದ ಎಲ್ಲರಿಗೂ ತೊಂದರೆ ಇದೆ. ಪ್ರತಿಯೊಬ್ಬರೂ ಸಂವಿಧಾನದ ಪ್ರಕಾರ ನಡೆದು ದೇಶ ಉಳಿಸಿಕೊಳ್ಳಬೇಕಿದೆ ಎಂದರು.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಸಿಎಎ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸಂವಿ ಧಾನದ ವಿರೋಧಿಯಾಗಿದೆ. ಇದರಿಂದ ದೇಶದ ಜನರಿಗೆ ಸಂಕಷ್ಟ ಎದುರಾದ ಹಿನ್ನೆಲೆ ಯಲ್ಲಿ ಬೇರೆ ಮಾರ್ಗವಿಲ್ಲದೇ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ ಎಂದರು.

ಎಲ್‍ಐಸಿಯನ್ನು ಖಾಸಗೀಕರಣಗೊಳಿ ಸಲಾಯಿತು. ಏರ್ ಇಂಡಿಯಾವನ್ನು ಬಾಗಿಲು ಹಾಕಿಸಲಾಗುತ್ತಿದೆ. ಟಿಎಂಟಿ ಯನ್ನು ಮುಚ್ಚಿಸಲಾಯಿತು. ಆದರೂ ಸಹ ನಿಮ್ಮ ಬಡಾಯಿ ಮಾತ್ರ ನಿಂತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತರಾಟೆ ತೆಗೆದುಕೊಂಡ ಅವರು, ಮೋದಿ ಅವರು ಸುಳ್ಳು ಹೇಳಿ ಇಡೀ ದೇಶವನ್ನು ಆತಂಕ ದಲ್ಲಿ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಕೇಂದ್ರ ಸರ್ಕಾರವನ್ನು ನಾಗ ಪುರದಲ್ಲಿರುವ ಆರ್‍ಎಸ್‍ಎಸ್ ಸಂಘಟನೆ ನಡೆಸುತ್ತಿದೆ ಎಂದು ಆರೋಪಿಸಿದರು.

ಹಜ್ರತ್ ಮೌಲಾನ ಕಾಯಿಲ್ ನಯೀಂ -ಉಲ್-ಹಕ್ ಸಾಹೇಬ್ ಬಾಖವಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮಾಜಿ ಸಂಸದರಾದ ಆರ್.ಧ್ರುವನಾರಾ ಯಣ್, ಎಂ.ಶಿವಣ್ಣ, ಶಾಸಕರಾದ ಸಿ.ಪುಟ್ಟ ರಂಗಶೆಟ್ಟಿ, ಆರ್.ನರೇಂದ್ರ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲ ರಾಜ್, ಜಯಣ್ಣ, ಕಳಲೆ ಕೇಶವಮೂರ್ತಿ, ಜಿಪಂ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಸದಸ್ಯ ಕೆರಹಳ್ಳಿ ನವೀನ್, ಸಂತ ಪೌಲರ ಚರ್ಚ್‍ನ ಮುಖ್ಯಸ್ಥ ಜೋಸೆಫ್ ಮರಿ ಇತರರು ಉಪಸ್ಥಿ ತರಿದ್ದರು. ಹೈಕೋರ್ಟ್ ವಕೀಲ ಬಾಲಣ್ಣ ಮುಖ್ಯ ಭಾಷಣ ಮಾಡಿದರು. ಸಾವಿರಾರು ನಾಗರಿಕರು ಸಭೆಯಲ್ಲಿ ಭಾಗವಹಿಸಿದ್ದರು.

Translate »