ತಂದೆ ಹೆಸರು ತಪ್ಪಾಗಿ ಹೇಳಿದ ಮಗಳನ್ನು ಕೊಂದು ಶವ ಹೂತು ಹಾಕಿದ್ದ ಅಪ್ಪನ ಬಂಧನ
ಚಾಮರಾಜನಗರ

ತಂದೆ ಹೆಸರು ತಪ್ಪಾಗಿ ಹೇಳಿದ ಮಗಳನ್ನು ಕೊಂದು ಶವ ಹೂತು ಹಾಕಿದ್ದ ಅಪ್ಪನ ಬಂಧನ

March 8, 2020

ಹನೂರು,ಮಾ.7(ಸೋಮಶೇಖರ್)- ತನ್ನ ಆರು ವರ್ಷದ ಪುತ್ರಿಯನ್ನು ತಂದೆಯೇ ಹತ್ಯೆಗೈಯ್ದು ಶವವನ್ನು ಹೂತು ಹಾಕಿದ್ದ ಪ್ರಕರಣವನ್ನು ಆರು ತಿಂಗಳ ಬಳಿಕ ಭೇದಿ ಸುವಲ್ಲಿ ಯಶಸ್ವಿಯಾಗಿರುವ ರಾಮಾಪುರ ಠಾಣೆ ಪೊಲೀಸರು, ಕೊಲೆ ಗಡುಕ ತಂದೆಯನ್ನು ಬಂಧಿಸಿ ಹೂತಿಟ್ಟ ಶವದ ಅಂಗಾಂಗ ಗಳನ್ನು ಹೊರ ತೆಗೆದು ಮರಣೋ ತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ರಾಮಾಪುರ ಹೊರ ವಲ ಯದ ಮುತ್ತುಶೆಟ್ಟಿಯೂರು ಗ್ರಾಮದ ನಾಗರಾಜ್ ಅಲಿಯಾಸ್ ಕೆಂಡ ತನ್ನ ಪುತ್ರಿ ಆರು ವರ್ಷದ ಪೂರ್ಣಿಮಾ ಎಂಬಾಕೆಯನ್ನು ಹತ್ಯೆ ಮಾಡಿ ಶವವನ್ನು ಹೂತು ಹಾಕಿದ್ದ. ಕಳೆದ ಆರು ತಿಂಗಳ ಹಿಂದೆಯೇ ಈ ಹತ್ಯೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ತಲೆಮರೆಸಿಕೊಂಡಿದ್ದ ನಾಗ ರಾಜನನ್ನು ವಶಕ್ಕೆ ಪಡೆದು ವಿಚಾರಣೆಗೊ ಳಪಡಿಸಿದಾಗ ಹತ್ಯೆ ಪ್ರಕರಣ ಬಯಲಾಗಿದೆ.

ವಿವರ: ನಾಗರಾಜು 2010ರಲ್ಲಿ ಮಹ ದೇಶ್ವರ ಬೆಟ್ಟದ ರಾಜೇಶ್ವರಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಒಂದು ಗಂಡು ಮತ್ತು ಹೆಣ್ಣು ಮಗು ವಾಗಿತ್ತು. 2013ರಲ್ಲಿ ಆತ ಪತ್ನಿಯನ್ನು ತೊರೆದಿದ್ದ. ಆಗ ಹೆಣ್ಣು ಮಗು ಪೂರ್ಣಿ ಮಾಳಿಗೆ ಕೇವಲ 6 ತಿಂಗಳು. ಕಳವು ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀ ನು ಪಡೆದು ಹೊರ ಬಂದ ನಂತರ ಈತ ತಲೆಮರೆಸಿಕೊಂಡಿದ್ದ. ಈ ಮಧ್ಯೆ ರಾಜೇಶ್ವರಿ ಮಹೇಶ್ ಎಂಬಾತನನ್ನು ವಿವಾಹವಾಗಿದ್ದಳು.

ಕಳವು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ನಾಗ ರಾಜನನ್ನು ರಾಮಾಪುರ ಪೊಲೀಸರು ಮುತ್ತತ್ತಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತ ಮತ್ತೆ ಜೈಲು ಸೇರಿದ್ದ. ಈ ನಡುವೆ ಆತ ಮುತ್ತತ್ತಿ ಯಲ್ಲೂ ಒಬ್ಬಾಕೆಯನ್ನು ವಿವಾಹವಾಗಿದ್ದ. ಜೈಲು ವಾಸ ಮುಗಿಸಿ ಈತ ಮುತ್ತತ್ತಿಗೆ ತೆರಳಿ ದಾಗ ಅಷ್ಟರಲ್ಲಿ ಆತನ ಎರಡನೇ ಪತ್ನಿಯು ಬೇರೊಬ್ಬನನ್ನು ಮದುವೆಯಾಗಿದ್ದಳು.

ಆಗ 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ರಾಮಾಪುರಕ್ಕೆ ವಾಪಸ್ಸಾದ ಆತ ಒಂದು ದಿನ ರಾಜೇಶ್ವರಿ ಬಳಿ ಇದ್ದ ಮಗ ಏಳು ಮಲೈ ಮತ್ತು ಮಗಳು ಪೂರ್ಣಿಮಾಳನ್ನು ಕರೆದೊಯ್ದು ಮುತ್ತುಶೆಟ್ಟಿಯೂರಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಬಿಟ್ಟಿದ್ದ. ಈ ಮಧ್ಯೆ ಪೂರ್ಣಿಮಾ ಮತ್ತು ತಂದೆ ನಾಗ ರಾಜು ನಾಪತ್ತೆಯಾಗಿದ್ದರು.

ಈ ಸಂಬಂಧ 2019ರ ಸೆ.6ರಂದು ರಾಜೇಶ್ವರಿ ತನ್ನ ಪುತ್ರಿ ನಾಪತ್ತೆಯಾಗಿರುವ ಬಗ್ಗೆ ರಾಮಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಳು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ರಾಮಾಪುರ ಸರ್ಕಲ್ ಇನ್ಸ್‍ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ನಾಗರಾಜ ಆನೆಕಲ್ ಬಳಿ ಇರುವ ಜಿಗಣಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ದೊರೆತ ಮಾಹಿತಿ ಮೇರೆಗೆ ಅವರು ಸಿಬ್ಬಂದಿಗಳಾದ ಸಯ್ಯದ್ ಮಶ್ರಫ್, ಸಿದ್ದರಾಜೇಗೌಡ ಮತ್ತು ಸುರೇಶ್ ತಂಡವನ್ನು ಅಲ್ಲಿಗೆ ಕಳುಹಿಸಿದ್ದರು.

ಮಾ.3ರಂದು ನಾಗರಾಜುವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತನ್ನ ಪುತ್ರಿ ತಂದೆಯ ಹೆಸರು ಕೇಳಿದಾಗ ತನ್ನ ಹೆಸರನ್ನು ಹೇಳದೆ ಪತ್ನಿಯ ಎರಡನೇ ಗಂಡ ಮಹೇಶ್ ಹೆಸರು ಹೇಳಿದ್ದರಿಂದ ದೊಣ್ಣೆಯಲ್ಲಿ ಹೊಡೆದು ಆಕೆಯನ್ನು ಹತ್ಯೆ ಮಾಡಿ ಶವವನ್ನು ಹೂತಿರುವುದಾಗಿ ತಿಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾ ಲಯದ ಆದೇಶ ಪಡೆದು ಶನಿವಾರ ತಹಸೀ ಲ್ದಾರ್ ಬಸವರಾಜು ಚಿಗರಿ ಸಮ್ಮುಖದಲ್ಲಿ ಹೂತಿಟ್ಟ ಶವದ ಅಂಗಾಂಗಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಮೃತ ದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಬಾಲಕಿಯನ್ನು ಆತ ಸುತ್ತಿಟ್ಟಿದ್ದ ಬಟ್ಟೆ ಯೊಳಗೆ ಮೂಳೆಗಳು ಮಾತ್ರ ದೊರೆ ತ್ತಿದ್ದು, ಅದನ್ನು ವಿಧಿ-ವಿಜ್ಞಾನ ಪ್ರಯೋ ಗಾಲಯಕ್ಕೆ ಕಳುಹಿಸಲಾಗಿದೆ.

Translate »