ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ
ಮಂಡ್ಯ

ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

March 8, 2020

ಕೆ.ಆರ್.ಪೇಟೆ,ಮಾ.7(ಶ್ರೀನಿವಾಸ್)- ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತ ರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡು ವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ನೂರಾರು ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಲೋಕೋಪಯೋಗಿ ಕಚೇರಿ ಮುಂಭಾಗ ಸಮಾವೇಶಗೊಂಡ ನೂರಾರು ರೈತರು ಪರಿಹಾರ ನೀಡುವಂತೆ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

40 ವರ್ಷಗಳ ಹಿಂದೆ ತಾಲೂಕಿನ ಬೂಕನಕೆರೆ-ಅಟ್ಟುಪ್ಪೆ-ಚಿಕ್ಕಗಾಡಿಗನಹಳ್ಳಿ-ಕಟ್ಟಹಳ್ಳಿ ಮಾರ್ಗದ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡುವಂತೆ ಹೈ ಕೋರ್ಟ್ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದೆ. ಕೂಡಲೇ ನ್ಯಾಯಾಲಯದ ಆದೇಶ ದಂತೆ ಅಧಿಕಾರಿಗಳು ಪರಿಹಾರ ನೀಡÀ ಬೇಕು ಎಂದು ಆಗ್ರಹಿಸಿದರು.

1980ರಲ್ಲಿ ಬೂಕನಕೆರೆ ಗ್ರಾಮದಿಂದ ಕಟ್ಟಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 60ಅಡಿ ರಸ್ತೆ ನಿರ್ಮಾಣಕ್ಕೆ ಐದು ಗ್ರಾಮಗಳ 140ಮಂದಿ ರೈತರ ಸುಮಾರು 35 ಎಕರೆಯಷ್ಟು ಭೂಮಿ ಯನ್ನು  ಭೂ ಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗಿದೆ. ಪರಿಹಾರ ನೀಡುವಂತೆ ಹಲವು ಭಾರಿ ಸಂಬಂಧಪಟ್ಟ ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪರಿಹಾರ ಕಳೆದ 40ವರ್ಷಗಳಿಂದ ಲೋಕೋಪಯೋಗಿ ಇಲಾಖೆಯು ಹಾಗೂ ಮಂಡ್ಯ ಜಿಲ್ಲಾಡಳಿತವು ನೀಡಿರ ಲಿಲ್ಲ. ಇದರಿಂದ ದಿಕ್ಕು ತೋಚದಂತಾದ ರೈತರು ಹೈ ಕೋರ್ಟ್ ಮೊರೆ ಹೋದಾಗ ರೈತರ ಮನವಿ ಆಲಿಸಿ ನ್ಯಾಯಾಲಯ ಸಂಬಂಧಪಟ್ಟ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು ಪರಿಹಾರ ನೀಡುವಂತೆ ಸೂಚಿಸಿದೆ ಎಂದು ತಿಳಿಸಿದರು.

3 ತಿಂಗಳೊಳಗೆ ಭೂಸ್ವಾಧೀನ ತಿದ್ದು ಪಡಿ ಕಾಯ್ದೆ 2013ರ ಅನ್ವಯ ವೈಜ್ಞಾನಿಕ ಪರಿಹಾರ ನೀಡುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಫೆ. 26, 2020ರಂದು ಹೈ ಕೋರ್ಟ್ ಆದೇಶ ಹೊರಡಿಸಿದೆ. ಈ ಪ್ರಕಾರ ಮಂಡ್ಯ ಜಿಲ್ಲಾಧಿಕಾರಿಗಳು, ಭೂ ಸ್ವಾಧೀನ ಇಲಾ ಖೆಯ, ಪಾಂಡವಪುರ ಉಪವಿಭಾ ಗಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಬೂಕನಕೆರೆ, ಅಟ್ಟುಪ್ಪೆ, ಚಿಕ್ಕಗಾಡಿ ಗನಹಳ್ಳಿ, ಯಗಚಗುಪ್ಪೆ, ಹೊಡಿಕೆಶೆಟ್ಟಿಹಳ್ಳಿ, ಕುರಬಹಳ್ಳಿ, ಕೆ.ಶೆಟ್ಟಿಹಳ್ಳಿ, ಕಟ್ಟಹಳ್ಳಿ ಮತ್ತಿತ ರರ ಗ್ರಾಮಗಳ ನೂರಾರು ರೈತರು  ನ್ಯಾಯ ವಾದಿ ವಿ.ಎಸ್.ಧನಂಜಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ವೆಂಕಟರಮ ಣಯ್ಯ  ಅವರು ರೈತರ ಮನವಿ ಸ್ವೀಕರಿಸಿ, ಶೀಘ್ರವೇ ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಸಂತ್ರಸ್ಥ ರೈತರಾದ ಬಿ.ಟಿ.ಕೃಷ್ಣೇಗೌಡ, ರಾಮಕೃಷ್ಣ, ಬೋರಲಿಂಗೇಗೌಡ, ಸೋಮೇಗೌಡ, ಕುಮಾರ್, ಜಗದೀಶ್, ಈರಪ್ಪ, ಚೆಲು ವಯ್ಯ, ಪುಟ್ಟರಾಜು, ನಂದಕುಮಾರ್, ಪುಟ್ಟರಾಜು, ನರಸಿಂಹೇಗೌಡ, ಬಿ.ಟಿ.ಕೃಷ್ಣ ಸೇರಿದಂತೆ ನೂರಾರು ರೈತರು ಇದ್ದರು.

Translate »