ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿಗೆ ಒತ್ತಾಯ
ಕೊಡಗು

ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿಗೆ ಒತ್ತಾಯ

March 8, 2020

ಮಡಿಕೇರಿ,ಮಾ.7-ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಸಂದರ್ಭ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿ ಪಡಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಕೊಡವ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಆಸಕ್ತಿ ತೋರಿ ಸಿಎನ್‍ಸಿ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ಆಂತರಿಕ ಮೀಸಲಾತಿ ಗಾಗಿ ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.

ದೇಶದ ಸಂವಿಧಾನ ವಿವಿಧ ಜನಾಂಗ, ವಿಭಿನ್ನ ಸಂಸ್ಕøತಿ, ಹಲವಾರು ಭಾಷೆ, ಪರಂ ಪರೆ ಸಂರಕ್ಷಿಸಲು ಹಾಗೂ ಲಿಂಗ ತಾರತಮ್ಯ ವಿಲ್ಲದಂತೆ ಪೋಷಿಸಲು ಕಟಿಬದ್ಧ ವಾಗಿದೆ. ಭಾರತೀಯ ಮಹಿಳೆಯರಿಗೆ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಬೇಕೆನ್ನುವ ಪ್ರಸ್ತಾಪ ಕಳೆದ 30 ವರ್ಷಗಳಿಂದ ಜಾರಿಯಾಗದೇ ನೆನೆಗುದಿಗೆ ಬಿದ್ದಿದೆ. ಆದರೆ ಮಹಿಳಾ ಮೀಸಲಾತಿ ಪ್ರಕ್ರಿಯೆ ಶೀಘ್ರ ಅನುಷ್ಠಾನಗೊಳ್ಳುತ್ತದೆ ಎನ್ನುವ ವಿಶ್ವಾಸ ಸಿಎನ್‍ಸಿ ಸಂಘಟನೆಗಿದ್ದು, ಈ ಸಂದರ್ಭ ಅತ್ಯಂತ ಸೂಕ್ಷ್ಮ ಜನಾಂಗವಾದ ಕೊಡವ ಮಹಿಳೆಯರಿಗೂ ಆಂತರಿಕ ಮೀಸ ಲಾತಿ ನೀಡುವ ಕುರಿತು ಗಮನ ಹರಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.

Translate »