ಕೆ.ಆರ್.ನಗರ, ಮಾ.7-ಮೊಪೆಡ್‍ಗೆ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೌಡೇನಹಳ್ಳಿ ಬಳಿ ನಡೆದಿದೆ. ತಾಲೂಕಿನ ಮಾವತ್ತೂರು ಪ್ರೌಢ ಶಾಲಾ ಮುಖ್ಯಶಿಕ್ಷಕಿ ತಾರಾ(52) ಮೃತಪಟ್ಟವರು. ಇವರು ಎಂದಿನಂತೆ ಶಾಲೆ ಮುಗಿಸಿಕೊಂಡು ತಮ್ಮ ಮೊಪೆಡ್‍ನಲ್ಲಿ ಕೆ.ಆರ್.ನಗರಕ್ಕೆ ಬರುತ್ತಿದ್ದ ವೇಳೆ ಗೌಡೇನಹಳ್ಳಿ ಬಳಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತಾರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ಮೈಸೂರಿನವರಾದ ತಾರಾ, 3 ವರ್ಷಗಳಿಂದ ಮಾವತ್ತೂರು ಪ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪಟ್ಟಣ ಠಾಣೆ ಪೊಲೀಸರು, ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಪ್ರಕರಣ ದಾಖಲಿಸಿಕೊಂಡಿದ್ದಾರೆ.