ಪ್ರತಿನಿತ್ಯ ಹಸಿದ ಹೊಟ್ಟೆಗಳ ಸರತಿಯ ಸಾಲು ಜನತಾ ಕಫ್ರ್ಯೂ ನಡುವೆಯೂ ಅನ್ನದಾನಿಗಳ ಮಾನವೀಯ ಕಾರ್ಯ
ಮೈಸೂರು

ಪ್ರತಿನಿತ್ಯ ಹಸಿದ ಹೊಟ್ಟೆಗಳ ಸರತಿಯ ಸಾಲು ಜನತಾ ಕಫ್ರ್ಯೂ ನಡುವೆಯೂ ಅನ್ನದಾನಿಗಳ ಮಾನವೀಯ ಕಾರ್ಯ

May 1, 2021

ಮೈಸೂರು, ಏ.30(ಆರ್‍ಕೆಬಿ)- ಕೈಯ್ಯಲ್ಲಿ ಕಾಸಿಲ್ಲ, ಮಾಡಲು ಕೆಲಸವಿಲ್ಲ, ಊರಿಗೆ ತೆರಳಲು ಬಸ್‍ಗಳಿಲ್ಲ. ಹೀಗಾಗಿ ಹಸಿದ ಹೊಟ್ಟೆಗಳು ಪ್ರತಿನಿತ್ಯ ಎಲ್ಲಾದರೂ ಹೊಟ್ಟೆಗೆ ಏನಾದರೂ ಸಿಗಬಹುದೇನೋ ಎಂಬ ಸ್ಥಿತಿಯಲ್ಲಿ ಅಲೆಯುವಂತಾಗಿದೆ. ಅಂಥದೊದ್ದು ಚಿತ್ರಣ ಮೈಸೂರಿನ ಕೆ.ಆರ್ ಆಸ್ಪತ್ರೆ ವೃತ್ತದ ಬಳಿ, ರೈಲ್ವೆ ನಿಲ್ದಾಣದ ಬಳಿ, ಜಗನ್ಮೋಹನ ಅರಮನೆ ಎದುರು ಕಂಡು ಬರುತ್ತದೆ. ಇದು ದಿನನಿತ್ಯದ ಚಿತ್ರಣ.

ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ 14 ದಿನಗಳ ಜನತಾ ಕಫ್ರ್ಯೂ ಮೈಸೂರಿನ ಬೀದಿ ಬೀದಿಗಳಲ್ಲಿ ನಿರಾಶ್ರಿತರ ಸಂಖ್ಯೆಯೂ ಹೆಚ್ಚುವಂತೆ ಮಾಡಿದೆ. ನಿರಾಶ್ರಿತರು, ಕೂಲಿ ಕಾರ್ಮಿ ಕರು, ವಿವಿಧ ಊರುಗಳಿಗೆ ತೆರಳಲಾರದೆ ಅಲ್ಲಲ್ಲಿಯೇ ನೆಲೆ ನಿಂತ ಕಾರ್ಮಿಕರು, ಅತ್ತ ವ್ಯಾಪಾರವಿಲ್ಲದೆ ಬೀದಿಬದಿ ವ್ಯಾಪಾರಿ ಗಳೇ ಸಂಖ್ಯೆಯೂ ಹೆಚ್ಚಾಗಿದೆ. ಬೆಳಗಿನ ಉಪ ಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಕ್ಕಾಗಿ ಪರದಾಡುವ ಸ್ಥಿತಿ ಇವರದ್ದಾಗಿದೆ.

ಮೈಸೂರಿನ ಕೆ.ಆರ್.ಆಸ್ಪತ್ರೆ ಎದುರಿನ ವೃತ್ತದಲ್ಲಿ ಪ್ರತಿದಿನ ಬೆಳಿಗ್ಗೆ 8.30 ವೇಳೆಗೆ ಉಪಾಹಾರ, ಮಧ್ಯಾಹ್ನ 12.30 ಮತ್ತು ರಾತ್ರಿ 7.30ಕ್ಕೆ ಊಟ ನೀಡುವ ಮಾನ ವೀಯ ಕಾರ್ಯ ನಡೆಯುತ್ತಿದೆ. ಇಲ್ಲಿ ಆಹಾರ ಸಿಗುತ್ತದೆಂಬ ಮಾಹಿತಿ ತಿಳಿದ ಹಸಿದ ಹೊಟ್ಟೆಗಳು ಊಟ ಬರುವ ಮೊದಲೇ ಅಲ್ಲಿಗೆ ಆಗಮಿಸಿ, ಸರತಿಯ ಸಾಲಿನಲ್ಲಿ ನಿಲ್ಲುತ್ತಾರೆ. ಅವರನ್ನು ಕೋವಿಡ್ ಅಂತರದಡಿ ನಿಲ್ಲಿಸುವ ಕೆಲಸವನ್ನೂ ಫೌಂಡೇಷನ್‍ನ ಸಿಬ್ಬಂದಿ ಮಾಡುತ್ತಿದ್ದಾರೆ.
ದಿನಕ್ಕೊಂದು ರೀತಿಯ ಆಹಾರವನ್ನು ಹಸಿದ ಹೊಟ್ಟೆಗಳಿಗೆ ಉಣಬಡಿಸಲಾಗು ತ್ತಿದೆ. ಬೆಳಿಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಪುಳಿ ಯೊಗರೆ, ಚಿತ್ರಾನ್ನ, ಬೇಳೆಬಾತ್, ರೈಸ್ ಬಾತ್, ಮೊಸರನ್ನ, ಕೆಲವೊಮ್ಮೆ ಸಿಹಿ ವಿತರಿ ಸಲಾಗುತ್ತಿದೆ. ಅಲ್ಲದೆ ಆಸ್ಪತ್ರೆ, ಕೊಳೆಗೇರಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತ್ಯಾದಿ ಗಳಲ್ಲಿ ವಿವಿಧ ಸಂಘಟನೆಗಳು ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದು, ಇದು ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿವೆ.

Translate »