ಯುವಕರು ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ
ಮೈಸೂರು

ಯುವಕರು ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ

May 1, 2021

ಮೈಸೂರು,ಏ.30(ಆರ್‍ಕೆಬಿ)- ಕೋವಿಡ್ ತಡೆಗಟ್ಟಲು ರಾಜ್ಯದಲ್ಲಿ ಜನತಾ ಕಫ್ರ್ಯೂ ಜಾರಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ನಾಗರಿಕರ ಚಿಕಿತ್ಸೆಗೆ ಸಕಾಲಕ್ಕೆ ರಕ್ತ ಸಿಗದೇ ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ಅಪಘಾತಗಳಲ್ಲಿ ಗಾಯಗೊಂಡವರಿಗೆ ರಕ್ತದ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಯುವಕರು ರಕ್ತ ನೀಡಲು ಮುಂದೆ ಬರಬೇಕು ಎಂಬ ಘೋಷ ಫಲಕದೊಡನೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಸೂರಿನ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಮೈಸೂರಿನಲ್ಲಿ ಹಮ್ಮಿಕೊಂ ಡಿದ್ದ `ಯುವಕರೇ… ಮೊದಲು ರಕ್ತ ನೀಡಿ, ನಂತರ ಲಸಿಕೆ ಪಡೆಯಿರಿ’ ಕಾರ್ಯಕ್ರಮ ದಲ್ಲಿ ಅವರೊಂದಿಗೆ 80ಕ್ಕೂ ಹೆಚ್ಚು ಮಂದಿ ಯುವಕ, ಯುವತಿಯರು ರಕ್ತ ದಾನ ಮಾಡಿದರು.

ನಂತರ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಆರೋಗ್ಯ ಇಲಾಖೆ ನಾಗರಿಕರನ್ನು ಕೋವಿಡ್-19ನಿಂದ ರಕ್ಷಿ ಸಲು ಕೋವಿಡ್ ಲಸಿಕೆ ನೀಡುತ್ತಿದೆ. ಇದೇ ವೇಳೆ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರು ತ್ತದೆ. ಅಲ್ಲದೆ ಕೋವಿಡ್ ಅಲ್ಲದ ಅಪ ಘಾತಗಳಲ್ಲಿ ಗಾಯಗೊಂಡವರಿಗೂ ತುರ್ತು ರಕ್ತದ ಅವಶ್ಯಕತೆ ಇರುತ್ತದೆ. ರಕ್ತ ಶೇಖ ರಣೆ ಶೇ.30ಕ್ಕೆ ಕುಸಿದಿದ್ದು, ಇದನ್ನು ಮನ ಗಂಡು ರಕ್ತದ ಶೇಖರಣೆಗೆ ಎಲ್ಲರೂ ರಕ್ತ ದಾನ ಮಾಡುವ ಮೂಲಕ ಅಮೂಲ್ಯ ಜೀವ ಗಳ ರಕ್ಷಣೆಗೆ ನೆರವಾಗಬೇಕಾಗಿದೆ ಎಂದು ಮನವಿ ಮಾಡಿದರು.
ಕೋವಿಡ್ ಪೋರ್ಟಲ್‍ನಲ್ಲಿ ಈಗಾಗಲೇ ಲಸಿಕೆಗೆ ನೋಂದಣಿ ಮಾಡಿಕೊಂಡಿರುವ ಯುವಕರು ಮೊದಲು ರಕ್ತ ನೀಡಿ ಬಳಿಕ ಲಸಿಕೆ ಪಡೆದುಕೊಳ್ಳಬೇಕು. ರಕ್ತದಾನ ಮಾಡಿದವರಿಗೆ ಲಸಿಕೆ ಪಡೆಯಲು ಮೊದಲ ಆದ್ಯತೆ ನೀಡÀಲು ಸರ್ಕಾರ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡರಾದ ಅಪೂರ್ವ ಸುರೇಶ್, ಸಾಮ್ಯುಯಲ್ ವಿಲ್ಸನ್, ಡಾ.ಮಮತಾ, ಡಾ. ರಾಧಾ, ತೇರಾಪಂತ್ ಯುವಕರ ಬಳಗದ ಅಧ್ಯಕ್ಷ ದಿನೇಶ್, ಕೊಠಾರಿ, ದೇವೇಂದರ್, ಆನಂದ್ ಇನ್ನಿತರರು ಉಪಸ್ಥಿತರಿದ್ದರು.

Translate »