ಕೋವಿಡ್ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ
ಮೈಸೂರು

ಕೋವಿಡ್ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ

April 28, 2021

ಗುಂಡ್ಲುಪೇಟೆ, ಏ.27(ಸೋಮ್.ಜಿ)-ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗ ಮದ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಆಡಳಿತ ವೈದ್ಯಾಧಿಕಾರಿ ಡಾ.ಮಂಜು ನಾಥ್‍ರಿಂದ ಮಾಹಿತಿ ಪಡೆದರು.

ಪಟ್ಟಣ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಹಾಗೂ ಇಷ್ಟು ದಿನ ಎಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂಬ ವಿವರ ಪಡೆದರು. ನಂತರ ಕೋವಿಡ್ ಬೆಡ್‍ಗಳು, ಆಕ್ಸಿಜನ್ ಲಭ್ಯತೆ ಹಾಗೂ ಔಷಧ ದಾಸ್ತಾನು ಸೇರಿದಂತೆ ಕೋವಿಡ್ ಸೋಂಕಿತರ ಚಿಕಿ ತ್ಸಗೆ ಸಂಬಂಧಪಟ್ಟ ವಿವರಗಳನ್ನು ಸಾರ್ವ ಜನಿಕರಿಗೆ ತಿಳಿಯುವಂತೆ ಬೋರ್ಡ್‍ನಲ್ಲಿ ಪ್ರದರ್ಶಿಸಿ. ಇದರಿಂದ ರೋಗಿಗಳಿಗೆ ಧೈರ್ಯ ಬರುತ್ತದೆ. ಇಲ್ಲದಿದ್ದರೆ ಬೆಡ್ ಇಲ್ಲ, ಟ್ರೀಟ್ ಮೆಂಟ್ ಸಿಗುತ್ತಿಲ್ಲ ಎಂಬ ಊಹಾಪೋಹ ಹರಡುತ್ತದೆ ಎಂದು ಸಲಹೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಶಾಸಕರು, ಜನತಾ ಕರ್ಫ್ಯೂ ಜಾರಿಗೊಳಿಸಿದ ನಂತರ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಇಳಿಕೆ ಯಾಗುತ್ತಿದೆ. ಜನತೆಯ ಹಿತಾಸಕ್ತಿಯಿಂದ ಸರ್ಕಾರ ಜಾರಿಗೊಳಿಸಿದ ಕಫ್ರ್ಯೂ ಪಾಲಿಸುವ ಮೂಲಕ ಈ ಸೋಂಕಿನಿಂದ ದೂರವಿರಬೇಕು. ಜಾತ್ರೆಗಳನ್ನು ಮುಂದೂಡಿ, ಮದುವೆ ಮುಂತಾದ ಶುಭ ಸಮಾರಂಭ ಗಳಿಗೆ ಸೀಮಿತ ಜನರು ಭಾಗವಹಿಸಿ ಪರ ಸ್ಪರ ಅಂತರ ನಿರ್ವಹಣೆ, ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಸರ್ ಬಳಕೆ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವ ಜನಿಕರಲ್ಲಿ ಮನವಿ ಮಾಡಿದರು.

Translate »