ರಾಜ್ಯದಲ್ಲಿ ದಾಖಲೆ 1272 ಸೋಂಕು 
ಮೈಸೂರು

ರಾಜ್ಯದಲ್ಲಿ ದಾಖಲೆ 1272 ಸೋಂಕು 

July 2, 2020

ಒಟ್ಟು ಸೋಂಕಿತರು 16,514

ಇದುವರೆಗೆ ಸತ್ತವರು 253

ಬೆಂಗಳೂರು, ಜು. 1- ರಾಜ್ಯದಲ್ಲಿ ಬುಧವಾರವೂ ಕೊರೊನಾ ಆರ್ಭಟಿಸಿದ್ದು, 1,272 ಮಂದಿಗೆ ಸೋಂಕು ದೃಢಪಟ್ಟಿದೆ. ಇದ ರೊಂದಿಗೆ ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆಯಾಗಿದೆ. ಇಂದು 145 ಮಂದಿ ಸೇರಿದಂತೆ ಈವರೆಗೆ 8,063 ಮಂದಿ ಗುಣ ಮುಖರಾಗಿದ್ದು, ಉಳಿದ 8,194 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 292 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದ 24,771 ಮತ್ತು ದ್ವಿತೀಯ ಸಂಪರ್ಕದ 20,487 ಮಂದಿ ಸೇರಿದಂತೆ 45,258 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇಂದು 7 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 253ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 735 ಮಂದಿಗೆ ಇಂದು ಸೋಂಕು ಪತ್ತೆಯಾಗಿದ್ದು, ಇಲ್ಲಿ ಸೋಂಕಿತರ ಸಂಖ್ಯೆ 5290ಕ್ಕೆ ಏರಿಕೆಯಾಗಿದೆ. ಬಳ್ಳಾರಿ 85, ದಕ್ಷಿಣ ಕನ್ನಡ 84, ಮೈಸೂರು 51, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ ಮತ್ತು ಹಾಸನ ತಲಾ 28, ಉತ್ತರ ಕನ್ನಡ 23, ಉಡುಪಿ ಮತ್ತು ಚಾಮರಾಜನಗರ ತಲಾ 22, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ಕಲಬುರಗಿ ಮತ್ತು ರಾಮನಗರ ತಲಾ 14, ಕೊಪ್ಪಳ ಮತ್ತು ಕೊಡಗು ತಲಾ 13, ರಾಯಚೂರು ಮತ್ತು ಚಿತ್ರದುರ್ಗ ತಲಾ 12, ಯಾದಗಿರಿ, ಬೀದರ್ ಮತ್ತು ಬೆಳಗಾವಿ ತಲಾ 8, ಮಂಡ್ಯ ಮತ್ತು ಕೋಲಾರ ತಲಾ 5, ಶಿವಮೊಗ್ಗ 3, ಗದಗ 2, ಚಿಕ್ಕಮಗಳೂರಿನಲ್ಲಿ ಒಂದು ಪ್ರಕರಣ ಇಂದು ದಾಖಲಾಗಿದೆ.

 

 

Translate »