ಮೈಸೂರು, ಜು.7(ಆರ್‍ಕೆ)- ಮೈಸೂ ರಿನ ಕಲಾಮಂದಿರದ ಮನೆಯಂಗಳ ದಲ್ಲಿ ಮಂಗಳವಾರ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ನಾಗೇಂದ್ರ ಅವರು, ಸಮಾಜದಲ್ಲಿ ಬದಲಾವಣೆ ತರಲು ಜೀವನವನ್ನೇ ಸವೆಸಿದ ಹಡಪದ ಅಪ್ಪಣ್ಣ ಅವರು ಸಾಮಾಜಿಕ ಕ್ರಾಂತಿ ಮೂಲಕ ಬಸವಣ್ಣ ಅವರ ಅನುಭವ ಮಂಟಪದ ಸಾರವನ್ನು ಸಾರಿದ್ದರು ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೆ ಗೈರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಕಳುಹಿಸಿದ್ದ ಸಂದೇಶವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ ವಾಚಿಸಿದರು.
ಹಡಪದ ಅಪ್ಪಣ್ಣ ಅವರು ವಚನ ಚಳುವಳಿಯ ಹರಿಕಾರರಾಗಿದ್ದ ಬಸವಣ್ಣ ನವರ ಒಡನಾಡಿಗಳಾಗಿದ್ದರು. ಅದೇ ಕಾರಣದಿಂದ ಹಡಪದ ಅಪ್ಪಣ್ಣ ಸಹ ಸಮಾಜದ ಒಳಿತಿಗಾಗಿ ದುಡಿದು ಜನ ಮನದಲ್ಲಿ ಉಳಿದಿದ್ದಾರೆ ಎಂದು ಸಚಿ ವರು ತಮ್ಮ ಸಂದೇಶದಲ್ಲಿ ಶ್ಲಾಘಿಸಿ, ಸ್ಮರಿಸಿ ದ್ದಾರೆ. ಉಪವಿಭಾಗಾಧಿಕಾರಿ ವೆಂಕಟ ರಾಜು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಸವಿತಾ ಸಮಾ ಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ಪ್ರಧಾನ ಕಾರ್ಯದರ್ಶಿ ಹರೀಶ್ ರೆಡ್ಡಿ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು