ಆಲದಮರಕ್ಕೆ ಮರುಜೀವ ನೀಡಿದ ಯುವ ಬ್ರಿಗೇಡ್ 
ಮೈಸೂರು ಗ್ರಾಮಾಂತರ

ಆಲದಮರಕ್ಕೆ ಮರುಜೀವ ನೀಡಿದ ಯುವ ಬ್ರಿಗೇಡ್ 

May 4, 2020

ನಂಜನಗೂಡು, ಮೇ 3(ರವಿ)-  ಹೆದ್ದಾರಿ ಕಾಮಗಾರಿಗಾಗಿ ಉರುಳಿಸ ಲಾಗಿದ್ದ ಬೃಹದಾಕಾರದ ಆಲದಮರಕ್ಕೆ ಯುವ ಬ್ರಿಗೆಡ್ ಕಾರ್ಯಕರ್ತರು ಮರು ಜೀವ ನೀಡಬೇಕೆಂಬ ಆಶಯ- ಶ್ರಮಕ್ಕೆ ಫಲ ದೊರೆತಿದ್ದು, ಬುಡ ಸಮೇತ ಸ್ಥಳಾಂ ತರಿಸಿ ಸಲಹಿದ  ಪರಿಣಾಮ ಮರದಲ್ಲಿ ಎಲೆ ಗಳು ಚಿಗುರೊಡೆದು ಮೈತಳೆದು ನಿಂತಿದೆ.

ನಂಜನಗೂಡು ತಾಲೂಕಿನ ಗೋಳೂರು ಸಮೀಪ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150`ಎ’  ಅಭಿವೃದ್ಧಿ ಕಾಮಗಾರಿಗಾಗಿ ಇತ್ತೀಚೆಗೆ  ರಸ್ತೆಬದಿಯಲ್ಲಿದ್ದ ಬೃಹತ್ ಆಲದಮರವನ್ನು ರೆಂಬೆ ಕೊಂಬೆ ಗಳನ್ನು ಕತ್ತರಿಸುವ ಮೂಲಕ ಬುಡ ಸಮೇತ ಉರುಳಿಸಲಾಗಿತ್ತು.

ಇದನ್ನು ಕಂಡು ಮರುಗಿದ ಯುವ ಬ್ರಿಗೇಡ್ ಕಾರ್ಯಕರ್ತರು ಬೃಹತ್ ಮರಕ್ಕೆ ಜೀವ ಕೊಡುವ ಕಾಯಕಲ್ಪಕ್ಕೆ ಚಿಂತಿಸಿ. ಮರಗಳ ತಜ್ಞ ವಿಜಯ್ ನಿಶಾಂತ್ ಅವರ ಮಾರ್ಗದರ್ಶನದಲ್ಲಿ ಕಳೆದ ಜ.27 ರಂದು ಕ್ರೇನ್ ಬಳಸಿ ಟ್ರಾಕ್ಟರ್ ಮೂಲಕ ಮರವನ್ನು ಸುಮಾರು ಒಂದೂವರೇ ಕಿ.ಮೀ. ದೂರದಲ್ಲಿರುವ ಶ್ರೀಕಂಠೇಶ್ವರಸ್ವಾಮಿ ಕಪಿಲಾ ನದಿ ಸ್ನಾನ ಘಟ್ಟದ ಹದಿನಾರು ಕಾಲು ಮಂಟಪ ಬಳಿ ನೆಟ್ಟು, ಪೋಷಿಸುತ್ತಿದ್ದರು.

ಸತತ ಎರಡೂವರೇ ತಿಂಗಳ ಬಳಿಕ ಮರ ದಲ್ಲಿ ಎಲೆಗಳು ಚಿಗುರೊಡೆದು ರೆಂಬೆಕೊಂಬೆ ಗಳು ಕವಲೊಡೆಯುತ್ತಿವೆ. ಇದರಿಂದ ಅಂದು ಶ್ರಮಪಟ್ಟ ಯುವ ಬ್ರಿಗೆಡ್ ಕಾರ್ಯ ಕರ್ತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಂದು ಮರ ಸಾಗಿಸಿ ಪುನರ್ಜನ್ಮ ನೀಡದೇ ಹೋಗಿದ್ದರೆ ನಾಲ್ಕೈದು ವರ್ಷಗಳಿಂದ ಬೆಳೆದು ನಿಂತಿದ್ದ ಬೃಹತ್ ಮರವೂ ಇಷ್ಟೊ ತ್ತಿಗಾಗಲೇ ಒಣಗಿ ಹೋಗಿರುತ್ತಿತ್ತು. ಸಾಹಸಮಯ ಸೇವಾ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಯುವ ಬ್ರಿಗೆಡ್ ಕಾರ್ಯಕರ್ತರ ಈ ಕಾರ್ಯಕ್ಕೆ ಇದೀಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

 

 

 

 

Translate »