ತಿ.ನರಸೀಪುರ ವಿವಿಧ ಗ್ರಾಮದ ಬಡವರಿಗೆ ದವಸ-ಧಾನ್ಯ ವಿತರಣೆ
ಮೈಸೂರು ಗ್ರಾಮಾಂತರ

ತಿ.ನರಸೀಪುರ ವಿವಿಧ ಗ್ರಾಮದ ಬಡವರಿಗೆ ದವಸ-ಧಾನ್ಯ ವಿತರಣೆ

May 4, 2020

ತಿ.ನರಸೀಪುರ, ಮೇ 3(ಎಸ್‍ಕೆ)- ಸರ್ಕಾರಿ ಉದ್ಯೋಗಿಗಳು ಸೇರಿದಂತೆ ನಿವೃತ್ತ ನೌಕರರು, ಆರ್ಥಿಕ ಶಕ್ತಿಯುಳ್ಳವರು, ಗುತ್ತಿಗೆ ದಾರರು ಹಾಗೂ ಕಟ್ಟಡ ಕಾರ್ಮಿಕರ ನೆರವು ಪಡೆದು ಸಂಗ್ರಹಿಸಿದ್ದ ಆಹಾರ ಪದಾರ್ಥ ಗಳ ಕಿಟ್ ಹಾಗೂ ತರಕಾರಿಗಳನ್ನು ಲಾಕ್ ಡೌನ್‍ನಿಂದ ತೊಂದರೆಗೆ ಸಿಲುಕಿರುವ ಬಡವ ರಿಗೆ ಭಾನುವಾರ ಪಟ್ಟಣದ ಭೈರಾಪುರದ ಶ್ರೀ ರಾಚಪ್ಪಾಜಿ ದೇವಾಲಯದಲ್ಲಿ ಯಜ ಮಾನರು ಹಾಗೂ ಮುಖಂಡರು ವಿತರಿಸಿದರು.

ಈ ವೇಳೆ ಮಾತನಾಡಿದ ಪುರಸಭಾ ಸದಸ್ಯ ಎಲ್.ಮಂಜುನಾಥ್, ಕೊರೊನಾ ಹಿನ್ನೆಲೆಯಲ್ಲಿ ಗ್ರಾಮದ ಜನತೆ ಸಂಕಷ್ಟಕ್ಕೀ ಡಾಗಿದ್ದು, ಲಾಕ್‍ಡೌನ್ ತೆರವಾಗುವವರೆಗೆ ಯಾವುದೇ ಕೂಲಿ ಕೆಲಸ ದೊರಕುವುದು ಅನುಮಾನ. ಗ್ರಾಮದ ಜನತೆ ಕೃಷಿಗೆ ಅವಲಂಬಿತರಾಗಿದ್ದಾರೆ. ಇನ್ನೂ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರೆದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಮುಂದಾ ಗಿರುವುದು ಶ್ಲಾಘನೀಯ ಎಂದರು.

ಹಿರಿಯ ಮುಖಂಡ ಪಿ.ಶೇಷಯ್ಯ ಮಾತ ನಾಡಿ, ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಯಾಗಿ ತಿಂಗಳುಗಳೇ ಕಳೆದರೂ ಕೂಲಿ ಕಾರ್ಮಿಕರು ಸೇರಿದಂತೆ ಬಡವರು ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿರುವ ಭೈರಾಪುರ ಗ್ರಾಮದ ಕಡೆ ಶಾಸಕ, ಸಂಸದ, ವಿಧಾನ ಪರಿಷತ್ ಸದಸ್ಯರಾಗಲೀ ಅಥವಾ ತಾಲೂಕು ಆಡಳಿತವಾಗಲಿ ಸೌಜನ್ಯಕ್ಕೂ ತಿರುಗಿಯೂ ನೋಡಿಲ್ಲ. ಮುಖಂಡರೆನಿಸಿ ಕೊಂಡ ಕೆಲವರಷ್ಟೇ ಮನೆಮುಂದೆ ಯಾರಿಗೂ ಬೇಡದ ಬಿಸ್ಕತ್ತು, ಬ್ರೆಡ್ ಮತ್ತು ಬಾಳೆ ಹಣ್ಣು ಹಂಚಿದ್ದಾರೆ. ಜನರಿಗೆ ಹಸಿವು ನೀಗಿ ಸಲು ಅಗತ್ಯವಿರುವ ಅಕ್ಕಿಯನ್ನು ಜನರಿಗೆ ಕೊಟ್ಟಿಲ್ಲ. ಬಡವರ ಕಷ್ಟಕ್ಕೆ ಸ್ಪಂದಿಸ ಬೇಕೆಂಬ ಕಾಳಜಿಯಿಂದ ಹಲವರ ನೆರವು ಪಡೆದು ಆಹಾರ ಪದಾರ್ಥ ಹಾಗೂ ತರಕಾರಿ ಗಳನ್ನು ಸಂಗ್ರಹಿಸಿ ಕೊಡುತ್ತಿದ್ದೇವೆ. ಭೈರಾ ಪುರದಲ್ಲಿನ ಪ್ರತಿಯೊಂದು ಮನೆಗೂ ತೆರಳಿ ನಿವಾಸಿಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ತಾಪಂ ಮಾಜಿ ಸದಸ್ಯ ಬಿ.ಎಲ್. ಮಹ ದೇವ್, ಗುತ್ತಿಗೆದಾರ ಸಿ.ಸ್ವಾಮಿ, ಎಂ. ಎಂ. ಮಹದೇವ, ಮುಖಂಡರಾದ ದಿಲೀಪ್ ಕುಮಾರ್, ಬಿ.ಮಹದೇವ, ರಾಜೇಶ್, ಸುಂದರನ್, ಚಿಕ್ಕಲಿಂಗಯ್ಯ, ತಬಲ ರಾಜು, ಎಂ.ಮಹದೇವಸ್ವಾಮಿ, ಕೆ.ರಾಚಯ್ಯ, ಎಸ್.ಕುಮಾರ, ಕಂಡಕ್ಟರ್ ಸ್ವಾಮಿ, ಡ್ರೈವರ್ ಮಹದೇವಸ್ವಾಮಿ, ಆನಂದ, ಕೆಎಸ್‍ಐಸಿಯ ನಿವೃತ್ತ ನೌಕರ ಸೋಮಣ್ಣ, ಕೆಎಸ್‍ಆರ್‍ಟಿಸಿ ರಾಜೇಶ್, ಮಾಧು, ಆರ್.ರಾಜು, ಮಹದೇವ, ಚಂದ್ರು, ಎಂ.ಬಾಲು, ವಾಟರ್‍ಮನ್ ಕೂಸಣ್ಣ ಹಾಗೂ ಇನ್ನಿತರರಿದ್ದರು.

ಹೆಳವರಹುಂಡಿಯಲ್ಲಿ ಪಡಿತರ ವಿತರಣೆ: ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿ 400ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಪುರ ಸಭಾ ಸದಸ್ಯ ಹೆಳವರಹುಂಡಿ ಸೋಮು ದವಸ-ಧಾನ್ಯಗಳ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನತೆ ಕೃಷಿ ಚಟುವಟಿಕೆಗಳನ್ನೇ ಹೆಚ್ಚು ಅವಲಂಬಿಸಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಗ್ರಾಮೀಣ ಭಾಗಗಳಲ್ಲಿ ವಾಸವಿರುವ ಬಡ ಜನತೆ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿ, ಅದರಲ್ಲೇ ಜೀವನ ನಿರ್ವಹಣೆ ಮಾಡುತ್ತಿ ದ್ದಾರೆ. ಕೃಷಿ ಬಿಟ್ಟು ಬೇರಾವುದೇ ವ್ಯವಹಾರ ಗಳು ಅವರಿಗೆ ಗೊತ್ತಿಲ್ಲ. ಹಾಗಾಗಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‍ಡೌನ್ ಮಾಡಿರುವುದರಿಂದ ಗ್ರಾಮದ ಜನತೆಗೆ ಆದಾಯವೇ ಇಲ್ಲದಂತಾಗಿದೆ. ಅಲ್ಲದೆ ಜೀವನ ನಿರ್ವಹಣೆಗೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸನ್ನಿ ವೇಶದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸ ಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ತಾವು ಮಾನವೀಯ ದೃಷ್ಟಿಯಿಂದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ್ದ ಕಿಟ್‍ಗಳ ಜೊತೆಗೆ ವೈಯಕ್ತಿಕವಾಗಿ ಆಹಾರದ ಕಿಟ್ ನೀಡುವ ಮೂಲಕ ಕೈಲಾದ ಅಲ್ಪ ಸಹಾಯ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಮುಖಂಡ ಹೆಚ್.ಎಸ್.ಮಾದಯ್ಯ, ಶೇಖರಪ್ಪ, ಕೇಬಲ್ ಸುರೇಶ್, ಸಿದ್ದಪ್ಪ, ಅಮಾಸ್ಯೇಗೌಡ, ರಾಜಣ್ಣ, ರೇವಣ್ಣ, ಬಸಪ್ಪ, ಮಾದೇಗೌಡ ಇದ್ದರು.

Translate »