ಮೈಸೂರು,ಮೇ3(ಪಿಎಂ)- ನಗರ ದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಮೈಸೂರು ಮಹಾನಗರಪಾಲಿಕೆಯು ವಿವಿಧ ಸಂಘ-ಸಂಸ್ಥೆಗಳ ಸಹಯೋಗ ದಲ್ಲಿ ಆರಂಭಿಸಿದÀ 12 ಮೊಬೈಲ್ ಕ್ಲಿನಿಕ್ ಗಳು ಭಾನುವಾರ ವಿವಿಧ ಪ್ರದೇಶಗಳಲ್ಲಿ ಒಟ್ಟು 1,738 ಮಂದಿಯ ಆರೋಗ್ಯ ತಪಾಸಣೆ ನಡೆಸಿವೆ. ದೇವಯ್ಯನಹುಂಡಿ, ಕುವೆಂಪುನಗರ, ಕುವೆಂಪುನಗರ ಎಂ ಬ್ಲಾಕ್, ವಿದ್ಯಾರಣ್ಯಪುರಂ, ರಾಜೀವನಗರ, ಕುರುಬಾರಹಳ್ಳಿ, ಇರ್ವಿನ್ ರಸ್ತೆ, ಪಡುವಾರ ಹಳ್ಳಿ, ವಿಜಯನಗರ, ಆಲನಹಳ್ಳಿ, ಗೌಸಿಯಾನಗರ ಹಾಗೂ ನೆಹರು ನಗರ ದಲ್ಲಿ ತಪಾಸಣಾ ಶಿಬಿರ ನಡೆಸಲಾ ಯಿತು. ವೈದ್ಯಕೀಯ ಪರೀಕ್ಷೆಗಾಗಿ ಬಂದಿದ್ದ ಎಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಿದ್ದು, ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ.
ಶನಿವಾರ ಹೊಸಕೇರಿ, ಟಿಕೆ ಲೇಔಟ್, ಲಕ್ಷ್ಮಿಕಾಂತನಗರ, ಲಷ್ಕರ್ ಮೊಹಲ್ಲಾ, ಕುಕ್ಕರಹಳ್ಳಿ, ನಂದಗೋಕುಲ, ಜನತಾ ಬಡಾವಣೆ, ಮಹದೇಶ್ವರ ಬಡಾವಣೆ, ಎನ್‍ಆರ್ ಮೊಹಲ್ಲಾ, ಬನ್ನಿಮಂಟಪ, ಕೆಎನ್‍ಪುರ, ಮೋಮಿನ್ ನಗರದಲ್ಲಿ 1,797 ಮಂದಿಯ ತಪಾಸಣೆ ಮಾಡಿವೆ.
ಮೇ 4 ಭೇಟಿ ಸ್ಥಳ: ಕೆಜಿ ಕೊಪ್ಪಲು, ಅರವಿಂದನಗರ, ಬೃಂದಾವನ ಬಡಾ ವಣೆ, ಯಲ್ಲಮ್ಮ ಕಾಲೋನಿ, ಶಾರದದೇವಿ ನಗರ, ಗಣೇಶನಗರ, ಸುಭಾಷ್‍ನಗರ, ಉದಯಗಿರಿ, ಅಲ್‍ಬದರ್ ಸರ್ಕಲ್, ಅಂಬೇಡ್ಕರ್ ಕಾಲೋನಿ, ಯರಗನ ಹಳ್ಳಿ, ಗೌಸಿಯಾನಗರ.