ಆ ಕರಾಳ ರಾತ್ರಿ ಈಗ ಪುಸ್ತಕ ರೂಪದಲ್ಲಿ
ಸಿನಿಮಾ

ಆ ಕರಾಳ ರಾತ್ರಿ ಈಗ ಪುಸ್ತಕ ರೂಪದಲ್ಲಿ

July 17, 2020

ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ಆ ಕರಾಳ ರಾತ್ರಿ ಚಲನಚಿತ್ರ ಬಿಡುಗಡೆಯಾಗಿ ಕಳೆದ ಜೂನ್ ಒಂದಕ್ಕೆ ಎರಡು ವರ್ಷಗಳನ್ನು ಪೂರೈಸಿದೆ. ಆ ನೆನಪಿಗಾಗಿ ನಿರ್ದೇಶಕ ದಯಾಳ್ ಮತ್ತು ಅವರ ತಂಡ ಆ ಕರಾಳ ರಾತ್ರಿ ಸಿನಿಮಾವನ್ನು ಪುಸ್ತಕ ರೂಪದಲ್ಲಿ ತಂದು ಬಿಡುಗಡೆ ಮಾಡಿz್ದÁರೆ.

ಆ ಕರಾಳ ರಾತ್ರಿ ಚಿತ್ರದಲ್ಲಿ ಜೈರಾಮ್ ಕಾರ್ತಿಕ್ ನಾಯಕನಾಗಿ ಮತ್ತು ಅನುಪಮಾ ಗೌಡ ನಾಯಕಿಯ ಪಾತ್ರದಲ್ಲಿ ನಟಿಸಿದ್ದರು. ರಂಗಾಯಣ ರಘು, ವೀಣಾ ಸುಂದರ್ ಹಾಗೂ ನವೀನ್ ಕೃಷ್ಣ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇದೀದ ನಿರ್ದೇಶಕ ದಯಾಳ್ ಪದ್ಮನಾಭನ್ ಹಾಗೂ ನವೀನ್ ಕೃಷ್ಣ ಮತ್ತು ಪ್ರಕಾಶಕ ಮೋಹನ್ ಹಬ್ಬು ಈ ಮೂವರೂ ಸೇರಿ ಸಿನಿಮಾದ ಕಥಾಹಂದರವನ್ನು ಕಾದಂಬರಿಯ ರೂಪದಲ್ಲಿ ಹೊರತಂದಿz್ದÁರೆ.

ಆ ಕರಾಳ ರಾತ್ರಿ ಚಿತ್ರಕ್ಕೆ ನಟ, ಸಾಹಿತಿ ನವೀನ್ ಕೃಷ್ಣ ಅವರು ಚಿತ್ರಕಥೆ ಬರೆದಿದ್ದರು. ಇತ್ತೀಚೆಗೆ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂ ಲೈವ್‍ನಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿz್ದÁರೆ. ಆ ಕರಾಳ ರಾತ್ರಿ ಕಥೆ ನಾಟಕ ಆಧಾರಿತವಾಗಿದ್ದು, ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಅದಕ್ಕೆ ಸಿನಿಮಾ ರೂಪ ನೀಡಿದ್ದರು. ಇದೀಗ ಅದೇ ಸ್ಕ್ರಿಪ್ಟ್‍ನ್ನು ಪುಸ್ತಕದಲ್ಲಿ ದಾಖಲಿಸಿz್ದÁರೆ. ಸದ್ಯ ಕೊರೋನಾ ಲಾಕ್‍ಡೌನ್ ಸಮಯವಾದ್ದರಿಂದ ಸಾಮಾಜಿಕ ಜಾಲತಾಣದ ಮೂಲಕ ಪುಸ್ತಕವನ್ನು ಬಿಡುಗಡೆ ಮಾಡಿz್ದÁರೆ. ಮರ್ಡರ್ ಮಿಸ್ಟ್ರಿ ಹಾಗೂ ಥ್ರಿಲ್ಲರ್ ಕಥೆ ಹೊಂದಿರುವ ಆ ಕರಾಳ ರಾತ್ರಿ ಸಿನಿಮಾ 2018ರಲ್ಲಿ ಮೊದಲ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಟ ವೀಣಾ ಸುಂದರ್ ಅವರಿಗೆ ಅತ್ಯುತ್ತಮ ಪೆÇೀಷಕ ನಟಿ ಎಂಬ ಪ್ರಶಸ್ತಿ ಲಭಿಸಿತ್ತು.

Translate »