`ಫ್ರೆಂಚ್ ಬಿರಿಯಾನಿ’ ಟ್ರೇಲರ್ ಬಿಡುಗಡೆ
ಸಿನಿಮಾ

`ಫ್ರೆಂಚ್ ಬಿರಿಯಾನಿ’ ಟ್ರೇಲರ್ ಬಿಡುಗಡೆ

July 17, 2020

ಪುನೀತ್ ರಾಜ್‍ಕುಮಾರ್ ನಿರ್ಮಾಣದ ಇನ್ನೊಂದು ಸಿನಿಮಾ ‘ಫ್ರೆಂಚ್ ಬಿರಿಯಾನಿ ಟ್ರೇಲರ್ ಜುಲೈ 16 ರಂದು ಬಿಡುಗಡೆ ಆಯಿತು. ಈ ಸಂಬಂಧ ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದು, ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಫ್ರೆಂಚ್ ಬಿರಿಯಾನಿ ಜುಲೈ 24ರಿಂದ ಅಮೇಜಾನ್ ಪ್ರೈಮ್‍ನಲ್ಲಿ ಪ್ರಸಾರ ಆರಂಭಿಸಲಿದೆ. ಪುನೀತ್ ಅವರ ಪಿಆರ್‍ಕೆ ಪೆÇ್ರಡಕ್ಷನ್ಸ್ ಸಂಸ್ಥೆ. ಈ ಹಿಂದೆ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗೆ ನಿರ್ದೇಶನ ಮಾಡಿದ್ದ ಪನ್ನಗಭರಣ, ‘ಫ್ರೆಂಚ್ ಬಿರಿಯಾನಿ’ಗೆ ನಿರ್ದೇಶನ ಮಾಡಿದ್ದಾರೆ.

ಶಿವಾಜಿನಗರದ ಆಟೋ ಡ್ರೈವರ್ ಹಾಗೂ ಫ್ರೆಂಚ್ ವ್ಯಕ್ತಿ ನಡುವೆ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ನಟ ಡ್ಯಾನೀಶ್ ಸೇಠ್, ‘ಫ್ರೆಂಚ್ ಬಿರಿಯಾನಿ’ಯಲ್ಲಿ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಫ್ರೆಂಚ್ ವ್ಯಕ್ತಿಯಾಗಿ ಬಾಲಿವುಡ್ ನಟ ಸಾಲ್ ಯೂಸೂಫ್ ಬಣ್ಣ ಹಚ್ಚಿದ್ದಾರೆ. ರಂಗಾಯಣ ರಘು, ದಿಶಾ ಮದನ್, ನಾಗಭೂಷಣ್, ಸಿಂಧೂ ಶ್ರೀನಿವಾಸಮೂರ್ತಿ ಮುಂತಾದವರು ಚಿತ್ರದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಕಾರ್ತಿಕ್ ಇದರ ಛಾಯಾಗ್ರಹಣ ಮಾಡಿದ್ದಾರೆ.

Translate »