ಭಜರಂಗಿ 2 ಟೀಸರ್‍ಗೆ ಭರ್ಜರಿ ರೆಸ್ಪಾನ್ಸ್ !
ಸಿನಿಮಾ

ಭಜರಂಗಿ 2 ಟೀಸರ್‍ಗೆ ಭರ್ಜರಿ ರೆಸ್ಪಾನ್ಸ್ !

July 17, 2020

ಮೊನ್ನೆ ನಡೆದ ಹ್ಯಾಟ್ರಿಕ್‍ಹೀರೋ ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ವರ್ಣರಂಜಿತವಾಗಿಸಿರುವುದು ಅವರ ಅಭಿನಯದ ಹೊಸ ಸಿನಿಮಾಗಳ ಘೋಷಣೆ ಮತ್ತು ಬಿಡುಗಡೆಯಾಗಿರುವ ಭಜರಂಗಿ-2 ಚಿತ್ರದ ಟೀಸರ್. ಶಿವಣ್ಣ ಅವರ ಬರ್ತ್‍ಡೇ ಪ್ರಯುಕ್ತ ರಿಲೀಸಾದ ಹರ್ಷ ಅವರ ನಿರ್ದೇಶನದ ಭಜರಂಗಿ-2 ಸಿನಿಮಾದ ಟೀಸರ್ ನೋಡುಗರನ್ನು ಭರ್ಜರಿಯಾಗಿ ಆಕರ್ಷಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆಯುವುದರ ಮೂಲಕ ದಾಖಲೆ ಮಾಡಿದೆ. ಈ ಹಿಂದೆ ಹರ್ಷ ಸಾರಥ್ಯದಲ್ಲಿ ತಯಾರಾಗಿದ್ದ ಭಜರಂಗಿ ಚಿತ್ರ ಕೂಡ ಸೂಪರ್‍ಹಿಟ್ ಆಗಿತ್ತು. ಅತಿಮಾನುಷ ಶಕ್ತಿಯ ಕಥಾಹಿನ್ನೆಲೆಯನ್ನು ಹೊಂದಿದ್ದ ಆ ಚಿತ್ರವು ಶಿವಣ್ಣ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಈಗ ಬಹುತೇಕ ಅದೇ ತಂಡವೇ ಸೇರಿ ಭಜರಂಗಿ 2 ಸಿನಿಮಾ ತಯಾರು ಮಾಡುತ್ತಿದೆ. ಹೆಸರಾಂತ ವಿತರಕ ಹಾಗೂ ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ಜೋಡಿ ಈ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಶಿವಣ್ಣ ಹುಟ್ಟುಹಬ್ಬದ ಕೊಡುಗೆಯಾಗಿ ಈ ಚಿತ್ರದ ಟೀಸರ್‍ನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದ ಒಂದು ಸಣ್ಣ ಝಲಕ್‍ನ್ನು ಈ ಟ್ರೇಲರ್ ಪ್ರೇP್ಷÀಕರಿಗೆ ನೀಡುತ್ತಿದೆ. ಸಿನಿಮಾ ನೋಡಲೇಬೇಕೆಂಬ ಕುತೂಹಲವನ್ನು ಇದು ಮತ್ತಷ್ಟು ಹೆಚ್ಚು ಮಾಡುತ್ತಿದೆ.

2.28 ನಿಮಿಷಗಳಿರುವ ಈ ಟ್ರೇಲರ್‍ನಲ್ಲಿ ನಾಯಕ ಶಿವರಾಜ್‍ಕುಮಾರ್ ಅವರು ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರ ಒಳಗೊಂಡಿರುವ ಕುತೂಹಕಾರಿ ಅಂಶಗಳನ್ನು ಈ ಟ್ರೇಲರ್ ಪ್ರೇP್ಷÀಕರಿಗೆ ಪರಿಚಯ ಮಾಡಿಸುತ್ತದೆ. ಈ ಟ್ರೇಲರ್‍ನಲ್ಲಿರುವ ಆಶ್ಚರ್ಯಕರ ಸಂಗತಿ ಎಂದರೆ ಹಿರಿಯ ನಟಿ ಶ್ರುತಿ. ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡಿz್ದÁರೆ. ಚಿತ್ರದ ಟ್ರೇಲರ್‍ನಲ್ಲಿ ನಟ ಶಿವರಾಜ್‍ಕುಮಾರ್ ಅವರನ್ನು ಬಿಟ್ಟರೆ ಹೆಚ್ಚು ಗಮನ ಸೆಳೆಯುವುದು ಶ್ರುತಿ ಅವರ ಪಾತ್ರವೇ ಎನ್ನಬಹುದು. ಅವರು ಈ ಹಿಂದೆಂದೂ ಮಾಡಿರದಂಥ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿz್ದÁರೆ. ನರಾಚಿಗಿಂತಲೂ ಭಯಂಕರವಾದ ಕಥೆ ನಡೆಯುವ ಸ್ಥಳ, ಭಯ ಹುಟ್ಟಿಸುವ ವಿಲನ್‍ಗಳು, ಅದ್ದೂರಿ ವೆಚ್ಚದಲ್ಲಿ ತಯಾರಾದ ಸೆಟ್‍ಗಳು, ಚಿತ್ರವಿಚಿತ್ರ ಆಚರಣೆಗಳು, ಶಿವಣ್ಣನ ಭರ್ಜರಿ ಎಂಟ್ರಿ, ಅಬ್ಬರದ ಸಂಗೀತ ಎಲ್ಲವೂ ಈ ಚಿತ್ರದ ಟೀಸರನ್ನು ಶ್ರೀಮಂತಗೊಳಿಸಿವೆ. ಕುತೂಹಲಭರಿತಗೊಳಿಸಿದೆ. ಹಲವು ಪ್ರಮುಖ ನಟರು ಸಿನಿಮಾದಲ್ಲಿ ನಟಸಿರುವುದು ಚಿತ್ರದ ಮತ್ತೊಂದು ವಿಶೇಷ. ಇನ್ನು ಭಜರಂಗಿ 2 ಸಿನಿಮಾದಲ್ಲಿ ಭಾವನಾ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿz್ದÁರೆ. ಪಾರ್ಟ್ 1 ನಲ್ಲಿದ್ದ ಸೂರ್ಯ ಲೋಕೇಶ್ ಸೇರಿದಂತೆ ಇನ್ನೂ ಹಲವು ಪ್ರಮುಖ ನಟರು ಎರಡನೇ ಭಾಗದಲ್ಲೂ ನಟಿಸಿz್ದÁರೆ. ಕರೋನಾ ಹಾವಳಿ ಮುಗಿದ ನಂತರ ಈ ಚಿತ್ರ ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.

Translate »