ತಮಿಳು ತೆಲುಗು ಸೇರಿ 4 ಭಾಷೆಗಳಿಗೆ ಕನ್ನಡ್ ಗೊತ್ತಿಲ್ಲ
ಸಿನಿಮಾ

ತಮಿಳು ತೆಲುಗು ಸೇರಿ 4 ಭಾಷೆಗಳಿಗೆ ಕನ್ನಡ್ ಗೊತ್ತಿಲ್ಲ

July 17, 2020

ರೇಡಿಯೋ ಜಾಕಿ ಆಗಿದ್ದ ಮಯೂರ ರಾಘವೇಂದ್ರ ಅವರ ನಿರ್ದೇಶನದ ಮೊದಲ ಚಿತ್ರ ಕನ್ನಡ್ ಗೊತ್ತಿಲ್ಲ. ಈ ಚಿತ್ರ ಚಿತ್ರಮಂದಿರಗಳಲ್ಲಿ ಅಷ್ಟಾಗಿ ಯಶಸ್ವಿಯಾಗದಿದ್ರೂ ಓಟಿಟಿಯಲ್ಲಿ ಬಿಡುಗಡೆಯಾಗಿ 20 ಮಿಲಿಯನ್‍ಗೂ ಹೆಚ್ಚು ವೀಕ್ಷಣೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಕನ್ನಡ್ ಗೊತ್ತಿಲ್ಲ ಈಗ ದಕ್ಷಿಣ ಭಾರತದ 4 ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.

ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆದು ಯಶಸ್ವಿಯಾದ ನಂತರ, ಬಾಲಿವುಡ್‍ನ ಸಂಜಯ್ ಲಾಲ್ವಾನಿ ಪೆÇ್ರಡP್ಷÀನ್ಸ್ ಚಿತ್ರದ ಡಬ್ಬಿಂಗ್ ಹಕ್ಕನ್ನು ಖರೀದಿಸಿದೆ. ಅವರು ಈ ಚಿತ್ರವನ್ನು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಥ್ರಿಲ್ಲರ್ ಕಥಾನಕದ ಹಿನ್ನೆಲೆಯಲ್ಲಿ ಹೇಳಿರುವ ಈ ಚಿತ್ರವನ್ನು ಕುಮಾರ ಕಠೀರವ ಅವರು ನಿರ್ಮಾಣ ಮಾಡಿದ್ದಾರೆ. ಸೂಜಿದಾರ ಬೆಡಗಿ ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ, ಸಿಹಿಕಹಿ ಚಂದ್ರು ಸಹ ಕಾಣಿಸಿಕೊಂಡಿz್ದÁರೆ. ನನ್ನ ಮೊದಲ ನಿರ್ದೇಶನದ ಚಿತ್ರ ಅನೇಕ ಭಾಷೆಗಳ ಪ್ರೇP್ಷÀಕರನ್ನು ತಲುಪುತ್ತಿದೆ ಎನ್ನುವುದು ನನಗೆ ಖುಷಿಯ ಸಂಗತಿ ಎಂದು ನಿರ್ದೇಶಕ ಮಯೂರ ರಾಘವೇಂದ್ರ ಅವರು ಹೇಳಿz್ದÁರೆ.

Translate »