ನಿಧಿಮಾ ಪಾತ್ರದಲ್ಲಿ ತಮನ್ನಾ !
ಸಿನಿಮಾ

ನಿಧಿಮಾ ಪಾತ್ರದಲ್ಲಿ ತಮನ್ನಾ !

July 17, 2020

ಈವರ್ಷ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಹಾಗೂ ಪ್ರೇP್ಷÀಕರ ಮನಗೆದ್ದ ಕೆಲವೇ ಚಿತ್ರಗಳಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ‘ಲವ್ ಮಾಕ್ಟೇಲï’ ಚಿತ್ರ ಕೂಡ ಒಂದಾಗಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಚಿತ್ರದ ಕಲೆಕ್ಷನ್‍ಗೆ ಕೊರೋನಾ ಲಾಕ್‍ಡೌನ್ ದೊಡ್ಡ ಪೆಟ್ಟು ಕೊಟ್ಟಿತು. ನಂತರ ಆ ಚಿತ್ರ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆಯಾದಾಗ ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಪಡೆದುಕೊಂಡಿತು. ಪರಭಾಷಾ ಸ್ಟಾರ್‍ಗಳೂ ಚಿತ್ರವನ್ನು ನೋಡಿ ಮೆಚ್ಚಿಕೊಂಡರು. ಅಲ್ಲದೆ ಚಿತ್ರವನ್ನು ತಮ್ಮ ಭಾಷೆಯಲ್ಲಿ ರೀಮೇಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಅದಕ್ಕೆ ಚಾಲನೆ ಸಿಕ್ಕಿದೆ. ಕನ್ನಡದ ಹೆಸರಾಂತ ನಿರ್ದೇಶಕ ನಾಗಶೇಖರ್ ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶನ ಮಾಡುವುದು ಖಾತರಿಯಾಗಿದೆ. ಕನ್ನಡದಲ್ಲಿ ನಾಯಕನಟ ಕೃಷ್ಣ ಅವರೇ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿದ್ದರು. ಜೊತೆಗೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದರು. ಕನ್ನಡದಲ್ಲಿ ಸಂಜು ವೆಡ್ಸ್ ಗೀತಾ, ಮಾಸ್ತಿಗುಡಿ, ಮೈನಾ, ಅಮರ್‍ನಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರು ನಿರ್ದೇಶನದ ಜಿತೆ ನಿರ್ಮಾಣ ಸಹ ಮಾಡುತ್ತಿದ್ದಾರೆ. ತೆಲುಗಿನ ಭವಾನಿ ರವಿ ಅವರ ಜತೆಗೂಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿz್ದÁರೆ.

ನಟಿ ಮಿಲನಾ ನಾಗರಾಜ್ ಲವ್‍ಮಾಕ್ಟೇಲ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅವರು ನಿರ್ವಹಿಸಿದ್ದ ನಿಧಿಮಾ ಎನ್ನುವ ಪಾತ್ರವನ್ನು ತೆಲುಗಿನಲ್ಲಿ ಮಿಲ್ಕಿಬ್ಯೂಟಿ ತಮನ್ನಾ ಭಾಟಿಯಾ ಅವರು ನಿರ್ವವಹಿಸುವುದು ಖಚಿತವಾಗಿದೆ. ಮತ್ತೊಬ್ಬ ಪ್ರತಿಭಾವಂತ ನಟ ಸತ್ಯದೇವ್ ಅವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿz್ದÁರೆ. ನಾಗಶೇಖರ್ ಮೂವೀಸ್ ಬ್ಯಾನರ್‍ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಅಲ್ಲದೆ ಕಾಲ ಭೈರವ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಲಿದ್ದು, ಸಂಜು ವೆಡ್ಸ್ ಗೀತಾ ಖ್ಯಾತಿಯ ಸತ್ಯ ಹೆಗ್ಡೆ ಚಿತ್ರದ ಕ್ಯಾಮೆರಾಮ್ಯಾನ್ ಕೆಲಸ ನಿರ್ವಹಿಸಲಿದ್ದಾರೆ. ಕನ್ನಡದಲ್ಲಿ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಅಲ್ಲದೆ ಕ್ರೇಜಿ ಮೈಂಡ್ಸ್ ಶ್ರೀ ಛಾಯಾಗ್ರಹಣ ಮಾಡಿದ್ದರು. ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ ವೇಳೆಗೆ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ. ಉಳಿದಂತೆ ಇತರೆ ಪ್ರಮುಖ ಪಾತ್ರಗಳು ಹಾಗೂ ತಂತ್ರಜ್ಞರ ತಂಡದ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.

Translate »