ಕಡೇ ಆಷಾಢ ಶುಕ್ರವಾರ: ಇಂದು ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ
ಮೈಸೂರು

ಕಡೇ ಆಷಾಢ ಶುಕ್ರವಾರ: ಇಂದು ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ

July 17, 2020

ಮೈಸೂರು, ಜು.16- ಕೋವಿಡ್-19 ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಜು.20ರಂದು ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನವನ್ನು ರದ್ದುಪಡಿಸಲಾಗಿದೆ. ಅಲ್ಲದೆ ಆಷಾಢ ಶುಕ್ರವಾರ, ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕರಿಗೆ ಹೇರಲಾಗಿದ್ದ ದೇವರದರ್ಶನ ನಿರ್ಬಂಧವು ಮುಂದುವರಿಯು ವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಪ್ರವೇಶ ನಿಷೇಧವಿರುವ ದಿನಗಳಂದು ಗ್ರಾಮಸ್ಥರ ವಾಹನ ಹಾಗೂ ತುರ್ತು ಸೇವಾ ವಾಹನ ಹೊರತುಪಡಿಸಿ, ಸಾರ್ವಜನಿಕರ ವಾಹನ ಮತ್ತು ಖಾಸಗಿ ವಾಹನಗಳ ಸಂಚಾರನಿಷೇಧಿಸಲಾಗಿದೆ. ಅಲ್ಲದೆ ಚಾಮುಂಡಿಬೆಟ್ಟ ಹಾಗೂ ಉತ್ತನಹಳ್ಳಿ ದೇವಾಲಯದ ಪ್ರದೇಶದಲ್ಲಿ ದೇವಾಲಯದ ವತಿಯಿಂದ ಹಾಗೂ ದಾನಿಗಳಿಂದ ಪ್ರಸಾದ ತಯಾರಿಸುವುದು ಹಾಗೂ ವಿತರಿಸುವುದನ್ನು ನಿಷೇಧಿ ಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »