ಮೈಸೂರು, ಸೆ.10(ಎಂಟಿವೈ)- ದಸರಾ ಮಹೋ ತ್ಸವ ಸಮೀಪಿಸುತ್ತಿದ್ದು, ಮೈಸೂರು ಅರಮನೆಯಲ್ಲಿ ಗುರುವಾರ ಮನ್ನಾರ್ ಶ್ರೀಕೃಷ್ಣ ಜಯಂತಿ ಸಂಭ್ರಮ ಮನೆ ಮಾಡಿತ್ತು. ಶ್ರೀಕೃಷ್ಣನ ವೇಷ ಧರಿಸಿದ್ದ ಮೊಮ್ಮಗ ಆದ್ಯವೀರ್ ಒಡೆಯರ್ ಜತೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಿಸಿದರು. ಅರಮನೆ ಆವರಣದಲ್ಲಿ ಗುರುವಾರ ಬೆಳಗ್ಗೆ ಧಾರ್ಮಿಕ ಕಾರ್ಯ ಜರುಗಿದವು. ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಶ್ರೀಕೃಷ್ಣನನ್ನು ಪೂಜಿಸಿ ದರು. ಅಜ್ಜಿ ಪ್ರಮೋದಾದೇವಿ ಅವರೊಂದಿಗೆ ಗೋವಿಗೆ ಫಲಹಾರ ನೀಡುವ ಮೂಲಕ ಗಮನ ಸೆಳೆದರು.
ಯದುವೀರ ತಮ್ಮ ಫೇಸ್‍ಬುಕ್‍ನಲ್ಲಿ ಈ ಕ್ಷಣದ ಫೆÇೀಟೋಗಳನ್ನು ಹಂಚಿಕೊಂಡಿದ್ದು, `ಅರಮನೆ ಸಂಪ್ರ ದಾಯದಂತೆ ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಿಸ ಲಾಯಿತು. ಎಲ್ಲರಿಗೆ ಶ್ರೀಕೃಷ್ಣ ಸನ್ಮಂಗಳವನ್ನುಂಟು ಮಾಡಲಿ’ ಎಂದು ಶ್ರೀಪ್ರಸನ್ನ ಕೃಷ್ಣಸ್ವಾಮಿಯಲ್ಲಿ ಪ್ರಾರ್ಥಿಸಲಾಯಿತು ಎಂದು ಬರೆದುಕೊಂಡಿz್ದÁರೆ.