ಅಭಿಮನ್ಯು ಹೆಗಲಿಗೆ ಅಂಬಾರಿ
ಮೈಸೂರು

ಅಭಿಮನ್ಯು ಹೆಗಲಿಗೆ ಅಂಬಾರಿ

September 13, 2020

ಮೈಸೂರು: ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಷ್ಠಾಪಿತ ಚಿನ್ನದ ಅಂಬಾರಿ ಯನ್ನು ಹೊರುವ ಜವಾ ಬ್ದಾರಿಯನ್ನು ಅಭಿಮನ್ಯು ನಿರ್ವಹಿಸಲಿದ್ದಾನೆ. ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧ ರಿಸಲಾಗಿದ್ದು, ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕೃತ ವಾಗಿ ಪ್ರಕಟಿಸಿದರು. ಅರ್ಜುನನಿಗೆ 60 ವರ್ಷ ಮೀರಿರುವುದರಿಂದ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅಂಬಾರಿ ಹೊರುವ

ಅವಕಾಶವಿಲ್ಲ. ಹಾಗಾಗಿ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಅಭಿಮನ್ಯು 1,100ವರೆಗೂ ಕೆ.ಜಿ. ಭಾರ ಹೊರುವ ಸಾಮಥ್ರ್ಯ ಹೊಂದಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈಗಾಗಲೇ ಹಲವು ಬಾರಿ ಭಾರ ಹೊರುವ ತರಬೇತಿ ನೀಡಲಾಗಿದೆ. ಅಂಬಾರಿ ಆನೆ ಅಭಿಮನ್ಯು ಜೊತೆಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.

ಈ ಬಾರಿ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ನಿರ್ವಹಿಸುವ ಖಚಿತತೆ ಬಗ್ಗೆ `ಮೈಸೂರು ಮಿತ್ರ’ ಸೆ.7ರ ಸಂಚಿಕೆಯಲ್ಲಿ `ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ಅಂಬಾರಿ ಹೊರುವ ಜವಾಬ್ದಾರಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

 

Translate »