ಸೋಮವಾರ ಮೈಸೂರಲ್ಲಿ 100 ಮಂದಿ ಸೋಂಕಿತರು
ಮೈಸೂರು

ಸೋಮವಾರ ಮೈಸೂರಲ್ಲಿ 100 ಮಂದಿ ಸೋಂಕಿತರು

November 3, 2020

165 ಜನ ಗುಣಮುಖ ರಾಜ್ಯದಲ್ಲಿ 2576 ಜನರಿಗೆ ಸೋಂಕು

ಮೈಸೂರು, ನ.2(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 100 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 165 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿ ತರ ಸಂಖ್ಯೆ 47,931ಕ್ಕೆ ಏರಿಕೆಯಾಗಿದ್ದು,  ಈವರೆಗೆ ಒಟ್ಟು 45,455 ಸೋಂಕಿತರು ಗುಣಮುಖರಾದಂತಾಗಿದೆ. ಚಿಕಿತ್ಸೆ ಫಲಕಾರಿ ಯಾಗದೆ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 961ಕ್ಕೆ ಹೆಚ್ಚಿದೆ.

ಗುಣಮುಖರಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿಸಿ ಜಿಲ್ಲೆಯಲ್ಲಿನ್ನು 1,515 ಸಕ್ರಿಯ ಪ್ರಕರಣಗಳಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ 133, ಖಾಸಗಿ ಆಸ್ಪತ್ರೆಯಲ್ಲಿ 388, ಸರ್ಕಾರಿ ಹೆಲ್ತ್‍ಕೇರ್ಸ್‍ಗಳಲ್ಲಿ 56, ಖಾಸಗಿ ಹೆಲ್ತ್‍ಕೇರ್ಸ್‍ಗಳಲ್ಲಿ 87, ಸರ್ಕಾರಿ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 92 ಹಾಗೂ ಖಾಸಗಿ ಸಿಸಿ ಸೆಂಟರ್‍ಗಳಲ್ಲಿ 23 ಮಂದಿ ದಾಖಲಾಗಿ ದ್ದಾರೆ. ಇನ್ನು 736 ಸೋಂಕಿತರು ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು (ಹೋಂ ಐಸೊಲೇಷನ್) ಶುಶ್ರೂಷೆ ಪಡೆಯು ತ್ತಿದ್ದಾರೆ. ಜಿಲ್ಲೆಯಲ್ಲಿ ಒಂದೇ ದಿನ 4,052 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸ ಲಾಗಿದ್ದು, ಖಾಸಗಿ ಲ್ಯಾಬ್‍ಗಳಲ್ಲಿ 34,546 ಸೇರಿದಂತೆ ಒಟ್ಟು ಈವರೆಗೆ  3,43,807 ಟೆಸ್ಟಿಂಗ್ ನಡೆಸಲಾಗಿದೆ. ತಿಂಗಳಿಂದ ಸೋಂಕಿ ತರು ಹಾಗೂ ಸಾವಿನ ಸಂಖ್ಯೆ ಗಣನೀಯ ವಾಗಿ ಇಳಿಕೆಯಾಗಿದೆ. ಆದರೆ ದಸರಾ ಸಂದರ್ಭದಲ್ಲಿ ಪ್ರವಾಸಿಗರು ಬಂದಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಳಿಗಾಲದ ಜೊತೆಗೆ ಹಬ್ಬದ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ಸೋಂಕು ಮತ್ತಷ್ಟು ಹರಡಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ 04, ಬಳ್ಳಾರಿ 60, ಬೆಳಗಾವಿ 29, ಬೆಂಗಳೂರು ಗ್ರಾಮಾಂ ತರ 36, ಬೆಂಗಳೂರು ನಗರ 1,439, ಬೀದರ್ 04, ಚಾಮರಾಜನಗರ 19, ಚಿಕ್ಕಬಳ್ಳಾಪುರ 58, ಚಿಕ್ಕಮಗಳೂರು 46, ಚಿತ್ರದುರ್ಗ 44, ದಕ್ಷಿಣಕನ್ನಡ 51, ದಾವಣಗೆರೆ 32, ಧಾರವಾಡ 18, ಗದಗ 07, ಹಾಸನ 87, ಹಾವೇರಿ 06, ಕಲಬುರಗಿ 31, ಕೊಡಗು 03, ಕೋಲಾರ 16, ಕೊಪ್ಪಳ 28, ಮಂಡ್ಯ 92, ಮೈಸೂರು 100, ರಾಯಚೂರು 34, ರಾಮನಗರ 20, ಶಿವಮೊಗ್ಗ 44, ತುಮಕೂರು 123, ಉಡುಪಿ 31, ಉತ್ತರಕನ್ನಡ 44, ವಿಜಯಪುರ 46 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 24 ಸೇರಿ ದಂತೆ ರಾಜ್ಯದಲ್ಲಿ ಸೋಮ ವಾರ 2,576 ಪ್ರಕರಣ ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 8,29,640ಕ್ಕೆ ಏರಿಕೆ ಯಾಗಿದೆ. ಸೋಮ ವಾರ ಡಿಸ್ಚಾರ್ಜ್ ಆದ 8,334 ಮಂದಿ ಸೇರಿ ಈವರೆಗೆ ಒಟ್ಟು 7,73,595 ಸೋಂಕಿತರು ಗುಣ ಮುಖರಾಗಿದ್ದಾರೆ. ಮತ್ತೆ 29 ಸೋಂಕಿತರು ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 11,221ಕ್ಕೆ ಹೆಚ್ಚಿದೆ. ಇನ್ನು 44,805 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಮನೆ, ಆಸ್ಪತ್ರೆ ಇನ್ನಿತರ ನಿಗಾ ಕೇಂದ್ರಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

Translate »