ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಎಚ್.ಎಸ್. ಮಂಜು, ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವಿರೋಧ ಆಯ್ಕೆ
ಮಂಡ್ಯ

ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಎಚ್.ಎಸ್. ಮಂಜು, ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವಿರೋಧ ಆಯ್ಕೆ

November 3, 2020

ಮಂಡ್ಯ, ನ.2- ಇಲ್ಲಿನ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‍ನ ಎಚ್.ಎಸ್. ಮಂಜು ಹಾಗೂ ಉಪಾಧ್ಯಕ್ಷರಾಗಿ ಇಸ್ರಾತ್ ಫಾತಿಮಾ ಅವರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಯಾಗಿ 20ನೇ ವಾರ್ಡ್‍ನ ಎಚ್.ಎಸ್. ಮಂಜು, ಕಾಂಗ್ರೆಸ್‍ನಿಂದ 10ನೇ ವಾರ್ಡ್‍ನ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಯಾಗಿ 13ನೇ ವಾರ್ಡ್‍ನ ಇಸ್ರಾತ್ ಫಾತಿಮಾ ಹಾಗೂ ಕಾಂಗ್ರೆಸ್‍ನಿಂದ 5ನೇ ವಾರ್ಡ್‍ನ ನಯೀಮ್ ನಾಮಪತ್ರ ಸಲ್ಲಿಸಿ ಕಣದಲ್ಲಿದ್ದರು. ಚುನಾವಣೆ ನಡೆಯುವುದು ಕೆಲ ಸಮಯ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಇದರಿಂದ ಚುನಾವಣಾದಿ üಕಾರಿಯಾಗಿದ್ದ ನೇಹ ಜೈನ್ ಅವರು ಅಧ್ಯಕ್ಷ ರಾಗಿ ಹೆಚ್.ಎಸ್.ಮಂಜು, ಉಪಾಧ್ಯಕ್ಷ ರಾಗಿ ಇಸ್ರಾತ್ ಫಾತಿಮಾ ಅವರು ಆಯ್ಕೆ ಯಾಗಿದ್ದಾರೆ ಎಂದು ಘೋಷಿಸಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು. ನಗರ ಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಜೆಡಿಎಸ್ – 18, ಕಾಂಗ್ರೆಸ್ – 10, ಬಿಜೆಪಿ- 2, ಐದು ಜನ ಪಕ್ಷೇತರರಿದ್ದಾರೆ. ಇಲ್ಲಿ ವಿಶೇಷ ವಾಗಿ ಜೆಡಿಎಸ್ 18 ಸದಸ್ಯರ ಬಲದೊಂದಿಗೆ ಶಾಸಕ ಎಂ.ಶ್ರೀನಿವಾಸ್ ಅವರ ಒಂದು ಮತ ಸೇರಿದತೆ 19 ಆಗಿತ್ತು. ಇದರಿಂದ ಅಧಿಕಾರಿದ ಚುಕ್ಕಾಣಿಗೆ ಈ 19 ಮ್ಯಾಜಿಕ್ ನಂಬರ್ ಕೆಲಸ ಮಾಡಿದೆ. ಜತೆಗೆ ಪಕ್ಷೇತರ ಸದಸ್ಯರು ಮತ್ತು ಬಿಜೆಪಿ ಸದಸ್ಯರು ಕೂಡ ಜೆಡಿಎಸ್‍ಗೆ ಜಿಲ್ಲೆಯ ಅಭಿವೃದ್ಧಿ ದೃಷ್ಠಿ ಯಿಂದ ಬೆಂಬಲ ವ್ಯಕ್ತಪಡಿಸಿದ್ದರು.

ಚುನಾವಣೆ ಮೊದಲು ಅಜ್ಞಾತ ಸ್ಥಳದಲ್ಲಿ ಶಾಸಕ ಎಂ.ಶ್ರೀನಿವಾಸ್ ಪಕ್ಷದ ಸದಸ್ಯ ರೊಂದಿಗೆ ಅಧಿಕಾರ ಹಿಡಿಯುವ ಬಗ್ಗೆ ಚರ್ಚೆ ನಡೆಸಿದ್ದರು. ಜೆಡಿಎಸ್ ವರಿಷ್ಠರ ಭರ ವಸೆಗಳೂ ಸದಸ್ಯರಿಗೆ ಮನವರಿಕೆ ಯಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗೆ ಅವಕಾಶ ವಾಗಲಿಲ್ಲ, ವರಿಷ್ಠರ ಒಗ್ಗಟ್ಟು ಪ್ರದರ್ಶನ ಮಾಡಿ ಎಂಬ ಮಾತುಗಳು ಚುನಾ ವಣೆ ಶಾಂತಿಯುತವಾಗಿ ನಡೆಯಲು ಕಾರಣವಾಗಿದೆ.

ಪಕ್ಷಾತೀತವಾಗಿ ಶುಭಾಶಯ ಕೋರಿದ ಮುಖಂಡರು: ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ನಗರಸಭೆ ಕಾಂಪೌಂಡ್ ಬಳಿ ಪಟಾಕಿ ಸಿಡಿಸಿ ಟಮಟೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದರ ನಡುವೆ ಅಧ್ಯಕ್ಷ ಮಂಜು ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದ ಅವರ ಸ್ನೇಹಿತರು ಕೂಡ ಪಕ್ಷಾತೀತವಾಗಿ ಶುಭಾಶಯ ಕೋರಿದರು.

ಪೊಲೀಸ್ ಭದ್ರತೆ : ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯ ದಂತೆ ಪೊಲೀಸರು ಎಚ್ಚರ ವಹಿಸಿದ್ದರು. 50 ಕ್ಕೂ ಹೆಚ್ಚು ಕಾನ್‍ಸ್ಟಬಲ್‍ಗಳನ್ನು ನಿಯೋಜಿಸ ಲಾಗಿತ್ತು. ಎಎಸ್ಪಿ ಧನಂಜಯ ಹಾಗೂ ಡಿವೈಎಸ್‍ಪಿ ನವೀನ್‍ಕುಮಾರ್, ವೃತ್ತ ನಿರೀಕ್ಷಕ ಸಂತೋಷ್, ಅಬ್ ಇನ್‍ಸ್ಪೆಕ್ಟರ್ ಸ್ಥಳದಲ್ಲೇ ಇದ್ದು ಕಾರ್ಯ ನಿರ್ವಹಿಸಿದರು. ಪೋಟೊ: 01

 

 

Translate »