ನಾಲೆಯಲ್ಲಿ ಕುರಿ ತೊಳೆಯಲು ಹೋಗಿ ಅಪ್ಪ, ಮಗ ದಾರುಣ ಸಾವು
ಮಂಡ್ಯ

ನಾಲೆಯಲ್ಲಿ ಕುರಿ ತೊಳೆಯಲು ಹೋಗಿ ಅಪ್ಪ, ಮಗ ದಾರುಣ ಸಾವು

November 3, 2020

ಮಂಡ್ಯ, ನ.2- ಕುರಿತೊಳೆಯಲು ಹೋಗಿ ಅಪ್ಪ ಮತ್ತು ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ತಾಲ್ಲೂಕಿನ ಗೊರವಾಲೆ ಗ್ರಾಮದ ವಿ.ಸಿ.ನಾಲೆಯಲ್ಲಿ ನಡೆದಿದೆ. ಗೊರವಾಲೆ ಗ್ರಾಮದ ಹನುಮಂತೇಗೌಡ(48) ಮತ್ತು ಮಗ ಹೇಮಂತ್(13) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವವರು. ಭಾನುವಾರ ಮಧ್ಯಾಹ್ನ ಕುರಿಗಳನ್ನು ವಿಶ್ವೇಶ್ವರಯ್ಯ ನಾಲೆಯಲ್ಲಿ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ಹೇಮಂತ್ ನೀರಿಗೆ ಬಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಅಪ್ಪ ಹನುಮಂತೇಗೌಡ ಮಗನನ್ನು ರಕ್ಷಣೆ ಮಾಡಲು ಹೋಗಿ ಅವರೂ ಸಹ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮಗನ ಮೃತದೇಹವು ನಾಲೆಯ ಸ್ವಲ್ಪದೂರದಲ್ಲೇ ಸಿಕ್ಕಿದೆ. ಆದರೆ, ತಂದೆಯ ಮೃತದೇಹ ಮಾತ್ರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಆನಂತರ ವಿಷಯವನ್ನು ಶಿವಳ್ಳಿ ಪೊಲೀಸ್ ಠಾಣೆಗೆ ತಿಳಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಮಂಡ್ಯ ತಾಲೂಕಿನ ಈಚಗೆರೆ ಗ್ರಾಮ ನಾಲೆಯ ತೂಬಿನ ಬಳಿ ಸೋಮವಾರ ಹನುಮಂತೇಗೌಡ ಅವರ ಶವ ಸಿಕ್ಕಿದೆ. ಹನು ಮಂತೇಗೌಡ ಅವರ ಮೃತದೇಹವು ಸುಮಾರು 15 ಕಿಲೊ ಮೀಟರ್‍ಗೂ ಹೆಚ್ಚು ದೂರು ನೀರಿನಲ್ಲಿ ಕೊಚ್ಚಿಕೊಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.

ಜಿಲ್ಲಾಸ್ಪತ್ರೆಯ ಶವಾÀಗಾರದಲ್ಲಿ ಇಬ್ಬರ ಮೃತದೇಹವನ್ನು ಪಂಚನಾಮೆ ನಡೆಸಿ, ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಮೃತರ ಸಂಬಂಧಿ ರಾಮಪ್ಪ ಎಂಬುವವರು ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಇದು ಅಸಹಜ ಸಾವೋ ಅಥವಾ ಬೇರೆ ಏನಾದರೂ ಇರಬಹುದೇನೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ. ಪೋಟೊ: 02,03

 

Translate »