ಕೆ.ಆರ್.ಪೇಟೆ ಬಳಿ ನದಿಯಲ್ಲಿ ಮುಳುಗಿ ಯುವಕ ಸಾವು
ಮಂಡ್ಯ

ಕೆ.ಆರ್.ಪೇಟೆ ಬಳಿ ನದಿಯಲ್ಲಿ ಮುಳುಗಿ ಯುವಕ ಸಾವು

November 3, 2020

ಕೆ.ಆರ್.ಪೇಟೆ, ನ.2- ತಾಲ್ಲೂಕಿನ ಹೇಮಗಿರಿಯ ಬಳಿ ಹೇಮಾವತಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಸಾವಿಗೀಡಾಗಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯ ಪಿ.ಎಲ್.ಡಿ ಬ್ಯಾಂಕ್ ಬಳಿ ಮೆಸ್ ನಡೆಸುತ್ತಿದ್ದ ಪಾಂಡವಪುರ ತಾಲೂಕಿನ ನಳ್ಳೇನ ಹಳ್ಳಿಯ ಬೆಟ್ಟೇಗೌಡರ ಪುತ್ರ ಎನ್.ಬಿ. ಅಭಿಷೇಕ್ (28)ಮೃತ ಯುವಕ. ಅಭಿಷೇಕ್ ತನ್ನ ಗೆಳೆಯರೊಂದಿಗೆ ಸ್ನೇಹಿತನೊಬ್ಬನ ಹುಟ್ಟುಹಬ್ಬಕೆಂದು ಕೆ.ಆರ್.ಪೇಟೆಗೆ ತೆರಳಿದ್ದನೆನ್ನಲಾಗಿದೆ. ಶನಿವಾರ ರಾತ್ರಿ ಪಾರ್ಟಿ ಮುಗಿಸಿದ ಗೆಳೆಯರು ಭಾನು ವಾರ ಹೇಮಾವತಿ ನದಿ ಬಳಿ ವಿಹಾರ ತೆರಳಿದ್ದರು. ಈ ವೇಳೆ ನದಿಗೆ ಇಳಿದ ಅಭಿಷೇಕ್ ಜೊಂಡಿನ ನಡುವೆ ಸಿಲುಕಿ ಮೃತಪಟ್ಟನೆಂದು ಜೊತೆ ಯಲ್ಲೇ ಇದ್ದ ಗೆಳೆಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್‍ಪಿ ನವೀನ್ ಕುಮಾರ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್ ಬೇಟಿ ನೀಡಿ ನಿನ್ನೆ ರಾತ್ರಿ ಮೃತ ಅಭಿಷÉೀಕ್ ಜೊತೆ ಪಾರ್ಟಿ ಯಲ್ಲಿ ಭಾಗವಹಿಸಿದ್ದ ಆತನ ನಾಲ್ವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಮಗನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಪೋಷಕರು ಸ್ನೇಹಿತ ರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದ ಅಭಿಷೇಕ್‍ನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿ ರುವ ಪೊಲೀಸರು ಅಭಿಷೇಕ್ ಜೊತೆಯಲ್ಲಿ ಇದ್ದ ಗೆಳೆಯರನ್ನು ವಿಚಾರಣೆ ನಡೆಸುತ್ತಿದ್ದಾರೆ.

 

Translate »