9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಮೈಸೂರು

9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

March 10, 2021

ಮೈಸೂರು, ಮಾ. 9(ಆರ್‍ಕೆ)-ಮೈಸೂ ರಿನ ಮೂವರು ಸೇರಿ ರಾಜ್ಯದ 11 ಜಿಲ್ಲೆ ಗಳ 9 ಅಧಿಕಾರಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.

ಅಕ್ರಮವಾಗಿ ಅಧಿಕ ಆಸ್ತಿ ಹೊಂದಿದ್ದಾ ರೆಂಬ ಸುಳಿವಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡಿದ್ದ ಎಸಿಬಿ ಪೊಲೀಸರು, ಮಂಗಳ ವಾರ ಮುಂಜಾನೆ ಏಕಕಾಲದಲ್ಲಿ 9 ಅಧಿ ಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿದಂತೆ 9 ಜಿಲ್ಲೆಗಳ 12 ಸ್ಥಳಗಳಲ್ಲಿ ದಾಳಿ ನಡೆಸಿ ಸಂಜೆವರೆಗೂ ಶೋಧ ನಡೆಸಿ ದರು. ಚೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿ ಯರ್ ಕೆ.ಎಂ.ಮುನಿಗೋಪಲರಾಜು ಅವರ ಗೋಕುಲಂ ಮನೆ, ಕುವೆಂಪುನಗರದ ಕಚೇರಿಗಳಲ್ಲಿ ಪರಿಶೀಲಿಸಿದ ಮೈಸೂರಿನ ಎಸಿಬಿ ಎಸ್ಪಿ ಅರುಣಾಂಶುಗಿರಿ, ಡಿವೈಎಸ್ಪಿ ಮುದ್ದು ಮಾದಪ್ಪ ನೇತೃತ್ವದ ಅಧಿಕಾರಿಗಳ ತಂಡವು, ಆಸ್ತಿಗಳ ದಾಖಲಾತಿಗಳನ್ನು ವಶಪಡಿಸಿಕೊಂಡಿತು.

ಸುಬ್ರಹ್ಮಣ್ಯ ಕೆ. ವದ್ದರ್: ಮೈಸೂರಿನ ನಗರ ಯೋಜನೆ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ.ವದ್ದರ್ ಅವರ ಕುವೆಂಪು ನಗರದ ಬಾಡಿಗೆ ಮನೆ, ರಾಮಕೃಷ್ಣ ನಗರದ ಕಚೇರಿ, ಉಡುಪಿಯ ನಿವಾಸ, ಕಾರವಾರದ ತಾಯಿಯ ಮನೆಯಲ್ಲೂ ಪೊಲೀಸರು ಶೋಧ ನಡೆಸಿದರು.

ಚೆನ್ನವೀರಪ್ಪ: ಮೈಸೂರಿನ ಪಶ್ಚಿಮ ಆರ್‍ಟಿಓ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಚೆನ್ನವೀರಪ್ಪ ಅವರ ಕಚೇರಿ, ಮಂಡ್ಯ ನಗರದ ಕುವೆಂಪು ನಗರದ ನಿವಾಸ, ಸ್ವಗ್ರಾಮವಾದ ಹನಕೆರೆ ಗ್ರಾಮದ ಮನೆ ಮೇಲೆ ಎಸಿಬಿ ಮಂಡ್ಯ ಠಾಣೆ ಪೊಲೀಸರು ದಾಳಿ ನಡೆಸಿದರು. ಸೋಮವಾರ ರಾತ್ರಿಯೇ ಖಾಸಗಿ ವಾಹನ ಗಳಲ್ಲಿ ಮೈಸೂರಿಗೆ ಬಂದಿದ್ದ ಬೇರೆ ಜಿಲ್ಲೆ ಗಳ ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪ್ರವಾಸಕ್ಕೆ ಬಂದಿರುವುದಾಗಿ ತಿಳಿಸಿ ಲಾಡ್ಜ್ ಗಳಲ್ಲಿ ಕೊಠಡಿ ಪಡೆದು ಉಳಿದುಕೊಂಡಿ ದ್ದರು. ಅದೇ ರೀತಿ ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಿರ್ದೇ ಶಕರಾಗಿರುವ ಕೃಷ್ಣೇಗೌಡರ ಮನೆ, ಕಚೇರಿ, ಸಹೋದರನ ಮನೆ, ಬೆಳಗಾವಿಯ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹನುಮಂತ ಶಿವಪ್ಪ ಅವರ ಮನೆಗಳು, ಯಾದಗಿರಿಯ ಚೆಸ್ಕಾಂ ಲೆಕ್ಕಾಧಿಕಾರಿ ರಾಜು ಪಟ್ಟಾರೆ, ಬಿಎಂ ಟಿಎಫ್ ಪೊಲೀಸ್ ಇನ್ಸ್‍ಪೆಕ್ಟರ್ ವಿಕ್ಟರ್ ಸಿಮನ್ ಅವರ ಬೆಂಗಳೂರು ಮನೆ, ಮೈಸೂ ರಿನ ವಿಜಯನಗರ 3ನೇ ಹಂತದ ಮಾವನ ಮನೆ ಮೇಲೂ ದಾಳಿ ನಡೆಸಲಾಯಿತು.

ಬಿಬಿಎಂಪಿ ನಗರ ಯೋಜನಾ ಅಸಿಸ್ಟೆಂಟ್ ಡೈರೆಕ್ಟರ್ ಕೆ.ಸುಬ್ರಹ್ಮಣ್ಯಂ, ದಾವಣಗೆರೆಯ ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಡೆಪ್ಯುಟಿ ಡೈರೆಕ್ಟರ್ ಕೆ.ಎಂ.ಪ್ರಥಮ್ ಮನೆ, ಕಚೇರಿ ಗಳ ಮೇಲೂ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರ ಸಹಾಯದಿಂದ ಭ್ರಷ್ಟ ಅಧಿಕಾರಿಗಳ ಮನೆ ಯಲ್ಲಿ ದೊರೆತ ಚಿನ್ನಾಭರಣ ಪರೀಕ್ಷಿಸಿ ಮೌಲ್ಯ ನಿರ್ಧರಣೆ ನಡೆಸಿದರು.

Translate »