ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ
ಮೈಸೂರು

ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ

March 10, 2021

ಮೈಸೂರು,ಮಾ.9(ಎಸ್‍ಪಿಎನ್)-ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ `ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮ ವನ್ನು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಿನ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರಕುತ್ತಿದ್ದು, ಈ ಅವ ಕಾಶವನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳೆಯರಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ದೊರೆತ ನಂತರ ಎಲ್ಲಾ ಕ್ಷೇತ್ರ ದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಲ್ಲದೆ ಉದ್ಯಮದಲ್ಲೂ ಉತ್ತಮ ಆಡಳಿತ ನಿರ್ವಹಣೆ ಮಾಡಬಲ್ಲರು ಎಂಬುದು ಸಮಾಜಕ್ಕೆ ಅರಿವಾಗುತ್ತಿದೆ ಎಂದರು.

ಈ ವೇಳೆ ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇ ಶಕ ಡಾ.ಮಂಜುನಾಥ, ಅಧಿಕಾರಿಗಳಾದ ಜಾನೆಟ್ ಮಥಿಯಾಸ್, ಇತರೆ ಸಿಬ್ಬಂದಿ ಗಳಿದ್ದರು. ಜೆಎಸ್‍ಎಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಉಪ ಪ್ರಾಂಶುಪಾಲ ಡಾ.ಎಂ.ರೇಣುಕಾ ದೇವಿ, ಸಹಾಯಕ ಪ್ರಾಧ್ಯಾಪಕ ಡಾ.ದೀಪ್ತಿ ತಾಂಡವೇಶ್ವರ್, ಡಾ. ದಿವ್ಯಾ ರಾವ್, ಡಾ.ಹೆಚ್.ಕೆ.ಮಮತಾ, ಆಸ್ಪತ್ರೆ ನಿರ್ವಾಹಣಾಧಿಕಾರಿ ಅಹೆರ್, ಸೇರಿದಂತೆ ಇತರರಿದ್ದರು.

Translate »