ಮೈಸೂರು, ಅ.12(ಪಿಎಂ)- ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ, ಭೂಮಿಕಾ ಭಾವೈಕ್ಯ ಬಳಗ, ಲಯನ್ಸ್ ಕ್ಲಬ್ ಬೆಂಗಳೂರು ಸ್ಯಾಂಡಲ್‍ವುಡ್ ಸೆಲೆಬ್ರೆಟಿಸ್, ಅಖಿಲ ಕರ್ನಾಟಕ ಶ್ರೀ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ ಸಂಯುಕ್ತಾಶ್ರಯದಲ್ಲಿ ಅ.14ರಂದು ಮಹಾತ್ಮ ಗಾಂಧಿ ಸೇರಿದಂತೆ ವಿವಿಧ ಮಹನೀಯರ ನೆನಪು ಕಾರ್ಯಕ್ರಮ ಹಾಗೂ `ಸಾರ್ಥಕ ಸೇವಾ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸ ಲಾಗಿದೆ ಎಂದು ಮಾದಾರ ಚನ್ನಯ್ಯ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಸ್.ಇ.ಮಹದೇವಪ್ಪ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ್ ನಾರಾಯಣ್, ನಾನಾಜಿ ದೇಶ್‍ಮುಖ್ ಮತ್ತು ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪು ಕಾರ್ಯ ಕ್ರಮ ಅಂದು ಸಂಜೆ 4ಕ್ಕೆ ಮೈಸೂರಿನ ಜೆಎಲ್‍ಬಿ ರಸ್ತೆಯ ಆರಾಧ್ಯ ಮಹಾಸಭಾದಲ್ಲಿ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕಾರ್ಯಕ್ರಮದಲ್ಲಿ ವಹಿಸಲಾಗುವುದು. ಜೊತೆಗೆ 80 ಮಂದಿ ಮಾತ್ರವೇ ಪಾಲ್ಗೊಳ್ಳಲು ಮಿತಿಗೊಳಿಸಲಾಗಿದೆ ಎಂದು ಹೇಳಿದರು.
ವಿವಿಧ ಮಹನೀಯರನ್ನು ಸ್ಮರಿಸುವ ನಿಟ್ಟಿನಲ್ಲಿ ಆರಾಧ್ಯ ಮಹಾಸಭಾದ ಮುಖ್ಯದ್ವಾರಕ್ಕೆ ಮಾಜಿ ಸಚಿವ ಎನ್. ರಾಚಯ್ಯ ಅವರ ಹೆಸರು, ಸಭಾಂಗಣಕ್ಕೆ ನ್ಯಾಯ ವಾದಿ ಟಿ.ವಿ.ಶ್ರೀನಿವಾಸರಾವ್ ಹೆಸರು ಹಾಗೂ ವೇದಿಕೆಗೆ ತಿಮ್ಮೇಗೌಡ-ನಂಜಮ್ಮ ದಂಪತಿ ಹೆಸರನ್ನು ನೀಡಲಾ ಗಿದೆ. ಸೋಸಲೆ ಶ್ರೀ ವ್ಯಾಸರಾಜ ಮಠದ 40ನೇ ಪೀಠಾ ಧಿಪತಿ ಶ್ರೀ 1008 ಶ್ರೀ ವಿದ್ಯಾಮನೋಹರ ತೀರ್ಥ ಸ್ವಾಮೀಜಿ, ಮೇಲುಕೋಟೆಯ ಶ್ರೀವಂಗೀಪುರ ನಂಬಿಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ, ಮೈಸೂರಿನ ಶ್ರೀ ಕಾಗಿ ನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ ಹಾಗೂ ಮೈಸೂರಿನ ಶ್ರೀ ತ್ರಿಪುರಭೈರವಿ ಮಠದ ಡಾ.ಕೆ.ಕೃಷ್ಣಮೋಹನಾನಂದಗಿರಿ ಗೋ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸಮಾರಂಭ ಉದ್ಘಾಟಿಸ ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಇದೇ ವೇಳೆ ಮಹನೀಯರ ಕುರಿತಂತೆ ಉಪನ್ಯಾಸ ನಡೆಯಲಿದೆ. ಜೊತೆಗೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಟಿ.ಎಸ್. ರವಿಶಂಕರ್, ಆಯುರ್ ಮಟ್ಟಂ ಸಂಸ್ಥೆ ಆಡಳಿತ ನಿರ್ದೇ ಶಕ ಡಾ.ಮನು ಬಿ.ಮನೆನ್, ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್.ವೆಂಕಟೇಶ್, ನೈರುತ್ಯ ರೈಲ್ವೆ ಮೈಸೂರು ವಿಭಾಗದ ವ್ಯವಸ್ಥಾಪಕಿ ಅಪರ್ಣ ಗಾರ್ಗ್, ಪಿಂಜರಾಪೋಲ್ ಅಧ್ಯಕ್ಷ ಉಮೇದ್‍ರಾಜ್ ಸಿಂಘವಿ, ಸಾಮಾಜಿಕ ಚಿಂತಕರಾದ ಯಳವರಹುಂಡಿ ಸಿದ್ದಪ್ಪ, ರೇವಣ್ಣ, ಶಾಂತ ವೀರೇಂದ್ರಸ್ವಾಮಿ, ಆರಾಧ್ಯ ಮಹಾಸಭಾದ ಅಧ್ಯಕ್ಷ ನಾಗಭೂಷಣಾರಾಧ್ಯ, ವಕೀಲ ಕೆ.ಆರ್.ಶಿವಶಂಕರ್, ಗಾಯಕ ಕೃಷ್ಣಮೂರ್ತಿ, ಪಾಲಿಕೆ ಸದಸ್ಯ ಶ್ರೀನಿವಾಸ್ ಹಾಗೂ ಶಿಕ್ಷಕ ತಗಡೂರು ಗೋಪಿನಾಥ್ ಅವರಿಗೆ `ಸಾರ್ಥಕ ಸೇವಾಭೂಷಣ’ ಪ್ರಶಸ್ತಿ ಪ್ರದಾನ ಮಾಡ ಲಾಗುವುದು ಎಂದರು. ಬಳಿಕ ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಸಾರಥ್ಯದಲ್ಲಿ ಡಾ.ಎಸ್‍ಪಿಬಿ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ ಅಧ್ಯಕ್ಷ ತಗಡೂರು ಗೌರಿಶಂಕರ್, ಮುಖಂಡರಾದ ಡಾ.ಸುಜಾತ ಎಸ್.ರಾವ್, ಡಾ. ಬಿ.ಎಸ್.ಗೀತಾಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.