ಮೈಸೂರು, ಅ.12(ಎಸ್‍ಪಿಎನ್)-ಬೆಲೆ ಬಾಳುವ ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ದುಬಾರಿ ಬೆಲೆಯ 2 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಯರಗನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಚಾಕು (25), ಮೈಸೂರು ತಾಲೂಕಿನ ವರುಣಾ ಹೋಬಳಿಯ ಲಲಿತಾದ್ರಿಪುರ ಗ್ರಾಮದ ಕೆ. ಸಂಜಯ್(21) ಬಂಧಿತರು. ಅ.7 ರಂದು ಸಂಜೆ 4.30ರಲ್ಲಿ ತಿ.ನರಸೀಪುರ ರಸ್ತೆಯ ವಜ್ರೇಗೌಡ ಪೆಟ್ರೋಲ್ ಬಂಕ್ ಬಳಿ ನಂಜುಂಡಸ್ವಾಮಿ ಎಂಬುವರು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಫುಟ್‍ಪಾತ್‍ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಆಟೋದಲ್ಲಿ ಬಂದ ಖದೀಮರ ತಂಡ ನಂಜುಂಡಸ್ವಾಮಿ ಅವರಿಂದ ರೆಡ್‍ಮಿ ಮೊಬೈಲ್ ಫೋನ್ ಕಿತ್ತುಕೊಂಡು ಹೋಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಇಬ್ಬರನ್ನು ಆಟೋ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇನ್ನುಳಿದ ಸಹಚರರಾದ ಅಭÀಯ್, ರೂಪೇಶ್, ಜಯಕುಮಾರ್ ಅವರೊಂದಿಗೆ ಸೇರಿಕೊಂಡು ಒಂಟಿಯಾಗಿ ಹೋಗುತ್ತಿರುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಮೊಬೈಲ್ ಕಳವು ಮಾಡುತ್ತಿದ್ದ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ.
ಅ.6ರಂದು ಎಸ್‍ವಿಪಿ ನಗರದ ಪಕ್ಕದ ಯಾಂದಹಳ್ಳಿ ಬಳಿ ಒಂದು ಆಪಲ್ ಐ ಫೋನ್ ಅನ್ನು ಕಳವು ಮಾಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಬೆಲೆಬಾಳುವ ಆಪಲ್ ಐ, ರೆಡ್ ಮಿ ಮೊಬೈಲ್‍ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಳಿದ ಆರೋಪಿಗಳಿಗೆÀ ಪೊಲೀಸರು ಬಲೆ ಬೀಸಿದ್ದಾರೆ. ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ, ದೇವರಾಜ ವಿಭಾಗದ ಎಸಿಪಿ. ಶಶಿಧರ್ ನೇತೃತ್ವದಲ್ಲಿ ಆಲನಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ಹೆಚ್.ಹರಿಯಪ್ಪ ಮತ್ತು ಪಿಎಸ್‍ಐ ಟಿ.ಎಸ್.ಮಹೇಂದ್ರ. ಹಾಗೂ ಆಲನಹಳ್ಳಿ ಠಾಣೆಯ ಎಎಸ್‍ಐ ಶ್ರೀಧರ್, ಸಿಬ್ಬಂದಿ ಶಿವಪ್ರಸಾದ್, ರವಿಕುಮಾರ್.ಪಿ ಸಿದ್ದರಾಜು, ಬಿ.ಹೆಚ್. ರಂಗನಾಥ ಇದ್ದರು.