ಗಜಾನನ ಅಂಡ್ ಗ್ಯಾಂಗ್ ಜೊತೆ ಸೇರ್ಪಡೆಗೊಂಡ ಆದಿತಿ ಪ್ರಭುದೇವ!
ಸಿನಿಮಾ

ಗಜಾನನ ಅಂಡ್ ಗ್ಯಾಂಗ್ ಜೊತೆ ಸೇರ್ಪಡೆಗೊಂಡ ಆದಿತಿ ಪ್ರಭುದೇವ!

August 22, 2020

ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುವ ನಟಿ ಆದಿತಿ ಪ್ರಭುದೇವ ಇದೀಗ ಮತ್ತೆ ಕಾಲೇಜು ಮೆಟ್ಟಿಲೇರುತ್ತಿದ್ದಾರೆ. ಹೌದು, ಗಜಾನನ ಅಂಡ್ ಗ್ಯಾಂಗ್ ಚಿತ್ರದ ಮೂಲಕ ಆದಿತಿ ಪ್ರಭುದೇವ ಕಾಲೇಜು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯ ಪ್ರಸಾದ್ ಅವರ `ತೊತಾಪುರಿ’ ಮತ್ತು ಎಂ.ಜಿ.ಶ್ರೀನಿವಾಸ್ ಅವರ `ಓಲ್ಡ್ ಮಾಂಕ್’ ಚಿತ್ರದ ಚಿತ್ರೀಕರಣ ಪುನರಾರಂಭಕ್ಕೆ ಕಾಯುತ್ತಿರುವ ಆದಿತಿ ಪ್ರಭುದೇವ್ ಮತ್ತೊಂದು ಹೊಸ ಚಿv ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಚಿತ್ರ ತಂಡ ವ್ಯಂಗ್ಯಚಿತ್ರದ ರೂಪದಲ್ಲಿರುವ ಫಸ್ಟ್ ಲುಕ್ ಪೆÇೀಸ್ಟರ್ ಅನ್ನು ಸಿದ್ದಪಡಿಸಿದೆ. `ನಮ್ ಗಣಿ ಬಿಕಾಂ’ ಪಾಸ್ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಿರ್ಮಾಪಕ ನಾಗೇಶ್ ಕುಮಾರ್ ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ.

ಗಜಾನನ ಮತ್ತು ಗ್ಯಾಂಗ್ ಅವರ `ಇರುವುದೆಲ್ಲವ ಬಿಟ್ಟು’ ಚಿತ್ರದ ನಟ ಶ್ರೀ ಮಹಾದೇವ್ ಈ ಚಿತ್ರದ ನಾಯಕ. ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ಸಂಯೋಜಿಸುತ್ತಿದ್ದು ಉದಯ್ ಲೀಲಾ ಛಾಯಾಗ್ರಹಣವಿದೆ. ಅಕ್ಟೋಬರ್‍ನಲ್ಲಿ ಶೂಟಿಂಗ್ ಪ್ರಾರಂಭಿಸುವ ಯೋಚನೆಯಲ್ಲಿದೆ ಚಿತ್ರ ತಂಡ.

Translate »