ಸೆಪ್ಟೆಂಬರ್ ಮೊದಲ ವಾರದಲ್ಲಿ `ಇಂಗ್ಲಿಷ್ ಮಂಜ’ ಶೂಟಿಂಗ್ ಆರಂಭಿಸಲಿರುವ ಪ್ರೀಮಿಯರ್ ಪದ್ಮಿನಿ, ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ಖ್ಯಾತಿಯ ನಟ ಪ್ರಮೋದ್, ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಅದರ ಶೀರ್ಷಿಕೆ 100 ಮಂಕೀಸ್, ಚಿತ್ರಕಥಾ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಇದನ್ನು ನಿರ್ದೇಶಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ಸುತ್ತ ಕಥೆ ಸುತ್ತುತ್ತದೆ. ಚಿತ್ರಕ್ಕೆ ನಿತ್ಯಾನಂದ ಭಟ್ ಬಂಡವಾಳ ಹಾಕುತ್ತಿದ್ದು ಸಂಗೀತ ಶೃಂಗೇರಿ ನಾಯಕಿಯಾಗಿದ್ದಾರೆ.
ಸಂಗೀತ ಶೃಂಗೇರಿ ಪ್ರಸ್ತುತ ಕಿರಣ್ ರಾಜ್ ನಿರ್ದೇಶನದ `777 ಚಾರ್ಲಿ’ ಮತ್ತು `ಮಾರಿಗೋಲ್ಡ್’ ಗಳಲ್ಲಿ ಅಭಿನಯಿಸುತ್ತಿದ್ದು ಪ್ರಮೋದ್ ಜೊತೆಗೆ ಮೊದಲ ಬಾರಿ ಅಭಿನಯಿಸುತ್ತಿದ್ದಾರೆ.
`100 ಮಂಕೀಸ್’ ನಲ್ಲಿ ಶಮಿಕ್ಷಾ, ಅಭಿಷೇಕ್ ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್, ಅಚ್ಯುತ್ ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೆÇೀಸ್ಟರ್ ಮತ್ತು ಶೂಟಿಂಗ್ ಸೆಪ್ಟೆಂಬರ್ 28ಕ್ಕೆ ಆರಂಭವಾಗಲಿದೆ.