ಬ್ರಿಟನ್,ಆ.23-ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್‍ನಲ್ಲಿ ಹರಾಜು ಮಾಡಲಾಗಿದೆ.
ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾ ಗಿದ್ದು, 1900ರಲ್ಲಿ ಇದನ್ನು ಅವರಿಗೆ ಉಡು ಗೊರೆಯಾಗಿ ನೀಡಲಾಗಿತ್ತು. ಈ ಕನ್ನಡಕ ದಾಖಲೆಯ 260,000 ಪೌಂಡ್ಸ್ ಮೊತ್ತಕ್ಕೆ ಹರಾಜಾಗಿದೆ. ದಿ ಲೆಟರ್ ಬಾಕ್ಸ್ ಆಫ್ ಈಸ್ಟ್ ಬ್ರಿಸ್ಟೋಲ್ ಆಕ್ಷನ್ಸ್ ಇನ್ ಹ್ಯಾನ್ ಹ್ಯಾಮ್, ನೈಋತ್ಯ ಇಂಗ್ಲೆಂಡ್‍ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು 10,000 ಪೌಂಡ್ಸ್ ನಿಂದ 15,000 ಪೌಂಡ್‍ಗಳಷ್ಟು ಹಣ ಬರಬಹು ದೆಂದು ನಿರೀಕ್ಷಿಸಲಾಗಿತ್ತು. ಆದರೆ ಆನ್‍ಲೈನ್ ಬಿಡ್‍ನಲ್ಲಿ ಬಿಡ್ಡಿಂಗ್ ಮೊತ್ತ ಏರಿಕೆ ಯಾಗಿ ಅಂತಿಮವಾಗಿ 260,000 ಪೌಂಡ್ಸ್‍ಗೆ ಕನ್ನಡಕ ಮಾರಾಟವಾಗಿದೆ.