ನೈಜಘಟನೆ ಆಧಾರಿತ ಹೇರಾಮ ಚಿತ್ರಕ್ಕೆ ಮುಹೂರ್ತ
ಸಿನಿಮಾ

ನೈಜಘಟನೆ ಆಧಾರಿತ ಹೇರಾಮ ಚಿತ್ರಕ್ಕೆ ಮುಹೂರ್ತ

August 22, 2020

ನಿವೃತ್ತ ಪೋಲೀಸ್ ಅಧಿಕಾರಿ ಪ್ರವೀಣ್ ಬೇಲೂರು ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೇರಾಮï ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ಸಮಾರಂಭ ನೆರವೇರಿತು. ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ದೃಷ್ಯಕ್ಕೆ ಕ್ಲಾಪ್ ಮಾಡುವ ಮೂಲಕ ನಟ ಡಾಲಿ ಧನಂಜಯ್ ಅವರು ಚಾಲನೆ ನೀಡಿz್ದÁರೆ. ಈ ಚಿತ್ರದಲ್ಲಿ ಬಿಗ್ಬಾಸ್ ಖ್ಯಾತಿಯ ಚೈತ್ರ ಕೋಟೂರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿz್ದÁರೆ. ಸೂಜಿದಾರ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಚೈತ್ರ ಕೋಟೂರ್ ಬಿಗ್‍ಬಾಸ್‍ನಲ್ಲಿ ಗಮನ ಸೆಳೆದಿದ್ದರು. ಉಳಿದಂತೆ ನಟ ಧರ್ಮ ಈ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಪಾಪ್‍ಕಾರ್ನ್ ಮಂಕಿ ಟೈಗರ್ ಖ್ಯಾತಿಯ ಸಪ್ತಮಿಗೌಡ, ಸಚ್ಚಿನ್ ಪುರೋಹಿತ್, ನವೀನ್‍ರಾಜ್, ಮಂಜುನಾಥ್ ಹಾಗೂ ಪೂರ್ಣ ಈ ಚಿತ್ರದ ಇತರೆ ತಾರಾಬಳಗದಲ್ಲಿz್ದÁರೆ. ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಎರಡೂ ಜವಾಬ್ದಾರಿಯನ್ನು ಪ್ರವೀಣ್ ಬೇಲೂರು ಅವರೇ ಹೊತ್ತಿದ್ದು, ಡಾ ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ ಮತ್ತು ಸಾಹಿತ್ಯ ಕೃಷಿ ಈ ಚಿತ್ರಕ್ಕಿದೆ. ಪೋಲೀಸ್ ಇಲಾಖೆಯಲ್ಲಿ ನಡೆದುಹೋದ ಕೆಲ ಘಟನೆಗಳು, ಅದರ ಹಿಂದೆ ಬೀಳುವ ಪೆÇೀಲೀಸರ ತನಿಖೆ, ಅದರ ನೇತೃತ್ವ ವಹಿಸಿದ ವೃತ್ತಿಚೌಕಟ್ಟಿಗೆ ಮೀರಿದ, ಸಾಹಸೀ ಪ್ರವೃತ್ತಿಯ ಅಧಿಕಾರಿಯ ನೆರಳನ್ನು ಈ ಚಿತ್ರದಲ್ಲಿ ಕಾಣಬಹುದು. ಮುಖ್ಯವಾಗಿ ಇದು ಬೆಂಗಳೂರಿನಲ್ಲಿ ಹುಟ್ಟಿ, ಇದೇ ನೆಲದಲ್ಲಿ ಬದುಕು ಮುಗಿಸಿದ ಕಥೆ ಕೂಡಾ; ಈ ಕಥೆಯಲ್ಲಿ ಕಂಡುಬರುವ ಪಾತ್ರಗಳು ಈಗಲೂ ಜೀವಂತವಾಗಿವೆ.

ರಾಜ್ಯ ಪೆÇೀಲೀಸ್ ಇಲಾಖೆಯಲ್ಲಿ ಎಸ್.ಕೆ. ಉಮೇಶ್ ಅವರಿಗೆ ತನಿಖಾಧಿಕಾರಿಯಾಗಿ ಉತ್ತಮ ಹೆಸರಿದೆ; ಇಲಾಖೆ ಕಂಡ ಪ್ರತಿಭಾವಂತ ಅಧಿಕಾರಿ ಇವರಾಗಿದ್ದಾರೆ. ಅದರಲ್ಲೂ ರೌಡಿ ನಿಗ್ರಹದಲ್ಲಿ ಉಮೇಶ್ ಅವರ ಹೆಸರು ಯಾವತ್ತೂ ದಾಖಲೆಗೆ ಸೇರುವಂಥದ್ದು, ಅವರು ಪೆÇೀಲೀಸ್ ಸೂಪರಿಂಟೆಂಡೆಂಟ್ ಆಗಿ ಕೆಲ ದಿನಗಳ ಹಿಂದಷ್ಟೇ ವೃತ್ತಿಗೆ ವಿದಾಯ ಹೇಳಿದ್ದಾರೆ. ಈ ಸಮಯದಲ್ಲಿ ತನಿಖೆ ಮಾಡಿದ ಪ್ರಕರಣಗಳು, ಅದರಲ್ಲಿ ಎದುರಾದ ಸಮಸ್ಯೆಗಳು ಇದನ್ನೆಲ್ಲ ಉಮೇಶ್ ಅವರು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಹಲವಾರು ಸತ್ಯಘಟನೆಗಳು, ಮರೆಯಲಾರದ ಸನ್ನಿವೇಶಗಳು ಈ ಪುಸ್ತಕದಲ್ಲಿದೆ, ಇದೆಲ್ಲಾ ಎ ಗೇಮ್ ಆಫ್ ಲೈಫ್ ಎಂಬ ಪುಸ್ತಕದಲ್ಲಿ ಆಗಿದೆ. ಇದೇ ಪುಸ್ತಕ ಈಗ ಹೇರಾಮ್ ಆಗಿ ತೆರೆಮೇಲೆ ಬರುತ್ತಿದೆ. ಇಲ್ಲಿನ ಒಂದಷ್ಟು ಘಟನೆಗಳನ್ನು ಕಣ್ಣಿಗೆ ಕಟ್ಟುವ ಪ್ರಯತ್ನ ಹೇ ರಾಮ್‍ನಲ್ಲಿ ನಡೆದಿದೆ. ನಿಶತಮತಿ ಎನ್ನುವ ಯುವಕ ತನ್ನ ತಾಯಿ, ಸಹೋದರಿಯರ ಬದುಕಿಗಾಗಿ ಹೇಗೆ ಪಾತಕ ಲೋಕಕ್ಕೆ ಹೋಗಬೇಕಾಯಿತು, ಅದರಿಂದ ಆಗುವ ಅನಾಹುತಗಳು, ತನಿಖೆಯ ಸಮಯದಲ್ಲಿ ತಲೆ ತಪ್ಪಿಸಿಕೊಂಡು ಅಲೆಯಬೇಕಾದ ಅಸಾಯಕತೆಗಳು, ಇದರಿಂದ ಇಡೀ ಕುಟುಂಬ ಯಾವ್ಯಾವ ಸಮಸ್ಯೆಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ, ಭೂಗತ ಲೋಕದಲ್ಲಿದ್ದವರನ್ನು ಸಮಾಜ ಹೇಗೆ ನೊಡುತ್ತದೆ ಎನ್ನುವುದೇ ಹೇರಾಮ್ ಚಿತ್ರದ ಕಥಾವಸ್ತು. ಬೆಂಗಳೂರಿನಲ್ಲಿ ನಡೆದುಹೋದ ರಕ್ತಚರಿತ್ರೆ ಇದಾಗಿರುವುದರಿಂದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ,

Translate »